Latest Breaking News

ಈ ಸಲ ಆಸ್ಕರ್ ಗೆ ಹೋಗುವ ಭಾರತೀಯ ಸಿನಿಮಾಗಳು ಯಾವುವು? ಸಿದ್ಧವಾಯ್ತು ಶಾರ್ಟ್ ಲಿಸ್ಟ್!

0 19,420

Get real time updates directly on you device, subscribe now.

2023ರ 95ನೇ ಆಸ್ಕರ್​(Oscar Awards) ಪ್ರಶಸ್ತಿಗೆ ,ಭಾರತದಿಂದ ನಾಮಿನೇಟ್ ಆಗುವ ಸಿನಿಮಾಗಳು ಯಾವುದಿರಬಹುದು ಎನ್ನುವ ಕುತೂಹಲ ನಿಮಗಿದ್ದರೆ ಅದಕ್ಕೆ ಇಲ್ಲಿದೆ ಉತ್ತರ. ಹೌದು, 2023 ರ ಆಸ್ಕರ್ ಪ್ರಶಸ್ತಿಗಾಗಿ ನಾಮಿನೇಟ್ (Oscar Nomination) ಆಗಲಿರುವ ಭಾರತೀಯ ಸಿನಿಮಾಗಳು ಶಾರ್ಟ್​ ಲಿಸ್ಟ್​ ಒಂದು ಸಿದ್ಧವಾಗಿದೆ ಎನ್ನುವ ಮಾಹಿತಿಯೊಂದು ಈಗ ಸುದ್ದಿಯಾಗಿ ಎಲ್ಲೆಡೆ ಸದ್ದು ಮಾಡಿದೆ. ಹೌದು, ಪತ್ರಿ ವರ್ಗದಲ್ಲೂ 15 ಪ್ರತಿಸ್ಪರ್ಧಿಗಳು ಇದ್ದು, ಅಕಾಡೆಮಿ ಆಫ್​ ಮೋಷನ್​ ಪಿಕ್ಚರ್​ ಆರ್ಟ್ಸ್​ ಆ್ಯಂಡ್ ಸೈನ್ಸ್​ ಸಂಸ್ಥೆಯೂ 2023 ರ ಜನವರಿ 24 ರಂದು ಫೈನಲ್​ ಲಿಸ್ಟ್​ ಬಿಡುಗಡೆ ಮಾಡಲಿದೆ ಎನ್ನುವ ವಿಚಾರವನ್ನು ಪ್ರಮುಖ ಮಾದ್ಯಮಗಳು ಸುದ್ದಿಯಲ್ಲಿ ಪ್ರಕಟ ಮಾಡಿವೆ.

ಹಾಗಾದರೆ ಈಗ ಹೊರ ಬಂದಿರುವ ಮಾಹಿತಿಯ ಪ್ರಕಾರ ಶಾರ್ಟ್​ಲಿಸ್ಟ್​ನಲ್ಲಿ ಇರುವ ಸಿನಿಮಾಗಳು ಯಾವುವು ಎಂದರೆ, ಗುಜರಾತಿ ಭಾಷೆಯ ಚೆಲ್ಲೋ ಶೋ(chello show) ಚಿತ್ರವು ಬೆಸ್ಟ್​ ಇಂಟರ್​ನ್ಯಾಷನಲ್​ ಫ್ಯೂಚರ್​ ವಿಭಾಗದಡಿಯಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಿರ್ದೇಶಕ ರಾಜಮೌಳಿ (Raja Mouli ) ನಿರ್ದೇಶನದ ಸೂಪರ್ ಹಿಟ್ ಸಿನಿಮಾ ತ್ರಿಬಲ್ ಆರ್(RRR) ನ ‘ನಾಟು ನಾಟು ಸಾಂಗ್’ ಬೆಸ್ಟ್​ ಒರಿಜಿನಲ್​ ಸಾಂಗ್ ವರ್ಗದಡಿ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಡಾಕ್ಯುಮೆಂಟರಿ ಫೀಚರ್ ಫಿಲ್ಮ್ ವಿಭಾಗದಡಿ ಭಾರತದ ಇನ್ನೆರಡು ಸಿನಿಮಾಗಳಾದ ‘ಆಲ್​ ದಟ್​ ಬ್ರೀಥ್ಸ್’​ ಮತ್ತು ‘ದೀ ಎಲಿಫೆಂಟ್​ ವಿಸ್ಪರ್ಸ್​’ ಚಿತ್ರಗಳು ಇವೆ ಎನ್ನಲಾಗಿದೆ.

ಆಸ್ಕರ್ ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿರುವ 15 ಅಂತಾರಾಷ್ಟ್ರೀಯ ಚಲನಚಿತ್ರಗಳಲ್ಲಿ ಭಾರತದ ‘ಲಾಸ್ಟ್ ಫಿಲ್ಮ್ ಶೋ’ ಕೂಡಾ ಸೇರಿದೆ. ಇದು ಅತ್ಯುತ್ತಮ ವಿದೇಶಿ ಸಿನಿಮಾಗಳ ವಿಭಾಗದಲ್ಲಿ ಸ್ಪರ್ಧೆ ಮಾಡ್ತಿರುವುದು 21 ವರ್ಷಗಳಲ್ಲಿ ಭಾರತದ 4ನೇ ಸಿನಿಮಾವಾಗಿದೆ. ರಾಜಮೌಳಿ(Raja Mouli) ನಿರ್ದೇಶನದ ತ್ರಿಬಲ್ ಆರ್(RRR) ಸಿನಿಮಾ ಭಾರತ ಮಾತ್ರವೇ ಅಲ್ಲದೇ ವಿದೇಶಗಳಲ್ಲಿ ಸಹಾ ಯಶಸ್ಸು ಪಡೆದ ಸಿನಿಮಾ ಆಗಿತ್ತು. ಆದರೆ ಈಗ ಈ ಸಿನಿಮಾದ ಒಂದು ಹಾಡು ನಾಟು, ನಾಟು ಸಾಂಗ್ ಮಾತ್ರವೇ ಆಸ್ಕರ್​ನಲ್ಲಿ ಸ್ಥಾನ ಪಡೆದಿರೋದು ಖಂಡಿತ ಅಚ್ಚರಿ ಯನ್ನು ಮೂಡಿಸಿದೆ.

Get real time updates directly on you device, subscribe now.

Leave a comment