ಮೂಲವ್ಯಾದಿಯಿಂದ ತೊಂದರೆ ಅನುಭವಿಸುತ್ತಿದ್ದೀರಾ? ಮೂಲವ್ಯಾಧಿ ಇರುವವರು ಯಾರು ಹೇಳದ ಈ ಮನೆಮದ್ದು ಒಮ್ಮೆ ಮಾಡಿ ನೋಡಿ!

Recent stories

ನಮಸ್ಕಾರ ಸ್ನೇಹಿತರೆ, ಡಾಕ್ಟರ್ ವೆಂಕಟರಮಣ ಹೆಗಡೆ ವೇದ ಅರೋಗ್ಯಕೇಂದ್ರ ನಿಸರ್ಗ ಮನೆ ಸಿರ್ಸಿ ವೈದ್ಯರು ಹೇಳುವ ಪ್ರಕಾರ ಮಲಬದ್ಧತೆಯಿಂದ ಗುದದ್ವಾರದಲ್ಲಿ ಮಲವಿಸರ್ಜನೆ ತುಂಬಾ ಗಟ್ಟಿ ಅದರೆ ಅದರಿಂದ ಕೊರೆತ,ಮೋಶನ್ ನಲ್ಲಿ ರಕ್ತ ಬರುವುದು ಹಾಗೂ ಅತಿಯಾಗಿ ಉರಿ ಕಾಣಿಸಿಕೊಳ್ಳುವುದು . ಎಷ್ಟೋ ಜನರು ಅದಕ್ಕೆ ಮೂಲವ್ಯಾದಿ ಎಂದು ಎದುರಿದ್ದಾರೆ ಹಾಗೂ ಸಿಗುವ ಔಷಧಿ ಪ್ರಯೋಗಗಳನ್ನು ಮಾಡಿ ಮೋಸ ಹೋಗಿರುವವರು ಇದ್ದಾರೆ.ಮೊದಲು ನೀವು ಅದನ್ನು ಗಮನಿಸಿದ್ದಾರೆ ಕೊರೆತ ಇದ್ದಾರೆ ಅದನ್ನು ಗುರುತಿಸಿ ಮನೆಯಲ್ಲಿ ಚಿಕಿತ್ಸೆ ಮಾಡುವುದು ತುಂಬಾ ಮುಖ್ಯವಾದದ್ದು.

ವೈದ್ಯರ ಬಳಿ ಮೂಲವ್ಯಾದಿ ಅಂತ ಬರುವ ರೋಗಿಗಳಿಗೆ ಸಾಮನ್ಯವಾಗಿ 70% ಜನರಿಗೆ ಕೊರೆತ ಸಮಸ್ಸೆ ಆಗಿರುತ್ತದೆ.ಸಾಮಾನ್ಯವಾಗಿ ಇದನ್ನು ಜನರು ಮೂಲವ್ಯಾದಿ ಎಂದು ಕರೆಯುತ್ತಾರೆ.ಮೂಲವ್ಯಾದಿ ಎಂದರೆ ಮೊಳಕೆ ರೂಪದಲ್ಲಿ ಹೊರಬರಬೇಕು ಅದರೆ ಕೊರೆತದಲ್ಲಿ ಯಾರೋ ಕಟ್ ಮಾಡಿರುವ ಹಾಗೆ ಇರುತ್ತದೆ. ಕಟ್ ಆದಾಗ ನೋವು, ಉರಿ, ಬ್ಲೀಡಿಂಗ್ ಸಮಸ್ಸೆ ಇರುತ್ತದೆ.ಕೆಲವರು ಮೊದಲು ಮೋಶನ್ ಮಾಡುವಾಗ ಗಟ್ಟಿಯಾಗಿ ಹೋಗುತ್ತದೆ ಹಾಗೂ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ, ಸಿಕ್ಕಾಪಟ್ಟೆ ನೋವು, ಉರಿ ಆಗುತ್ತದೆ ಎಂದು ರೋಗಿಗಳು ಹೇಳುತ್ತಾರೆ.

ಕಾರಣವೇನೆಂದರೆ ದೇಹದಲ್ಲಿ ಪ್ರಕೃತಿ ಅಂದರೆ ದೇಹದಲ್ಲಿ ತುಂಬಾ ಉಷ್ಣವಿದ್ದಾಗ ಅತಿಯಾಗಿ ಉಷ್ಣ ಇರುವಂತಹ ಆಹಾರವನ್ನು ತೆಗೆದುಕೊಳ್ಳುವುದು ಹಾಗೂ ಖಾರ, ಹುಳಿ ಜಾಸ್ತಿ ತಿನ್ನುವುದರಿಂದ ಹಾಗೂ ಕೆಲವರು ತುಪ್ಪ,ಎಣ್ಣೆ, ಮಜ್ಜಿಗೆ, ಹಾಲು ಕುಡಿಯುವುದಿಲ್ಲ. ಈ ರೀತಿ ತಪ್ಪುಗಳನ್ನು ಮಾಡುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ.

ಇನ್ನು ಕೆಲವರಿಗೆ ಮೊಶನ್, ಮೂತ್ರ, ಗ್ಯಾಸ್ ಬಂದಾಗ ತಡೆಯುವ ರೂಡಿ ಇರುತ್ತದೆ.ಅತಿಯಾಗಿ ಕುಳಿತು ಕೆಲಸ ಮಾಡುವುದು ಹಾಗೂ ಯಾವಾಗಲು ಕುಳಿತು ಕೊಂಡಿರುವವರಿಗೆ ಈ ರೀತಿ ಸಮಸ್ಯೆ ಬರುತ್ತದೆ. ಉಷ್ಣ ಹೆಚ್ಚಾಗುವ ಕಾರಣದಿಂದ ದೇಹದ ಕೆಲವು ಸೂಕ್ಷ್ಮ ಭಾಗಗಳಲ್ಲಿ ಕೊರೆತ ಉಂಟಾಗುತ್ತದೆ.

ಪರಿಹಾರವೇನೆಂದರೆ ಈ ರೀತಿ ಸಮಸ್ಸೆ ಇರುವುದು ನಿಮಗೆ ತಿಳಿದರೆ ಅತಿಯಾಗಿ ನಿದ್ದೆ ಮಾಡದೇ ಇರುವುದು, ಖಾರ ಇರುವ ಆಹಾರ, ಉಷ್ಣತೆ ಇರುವ ಆಹಾರವನ್ನು ಸೇವನೆ ಮಾಡಬಾರದು.ಉದಾಹರಣೆ : ಕೇಸರಿ ಬಾತ್ ಇದರಲ್ಲಿ ತುಂಬಾ ಉಷ್ಣತೆ ಇದೆ. ಹಸಿಮೆಣಸಿನಕಾಯಿ ಹೀಗೆ ಈ ರೀತಿ ಉಷ್ಣತೆ ಇರುವ ಆಹಾರವನ್ನು ಸೇವಿಸಬಾರದು. ಈ ರೀತಿ ಮೊದಲು ಸಮಸ್ಸೆ ಬಂದರೆ ಉಷ್ಣತೆ ಇರುವ ಆಹಾರವನ್ನು ಕಡಿಮೆ ಮಾಡಿ ನಿದ್ದೆಯನ್ನು ಚೆನ್ನಾಗಿ ಮಾಡಿದರೆ ಈ ರೀತಿ ಸಮಸ್ಸೆಯನ್ನು ಕಡಿಮೆ ಮಾಡಿಕೊಳ್ಳಬಹುದು.ಆದಷ್ಟು ತುಪ್ಪ, ಬೆಣ್ಣೆ, ಆಯಿಲ್, ಮಜ್ಜಿಗೆ ಸೇವಿಸಬೇಕು.

ಈ ರೀತಿ ಸಮಸ್ಸೆ ಎದುರಾದಾಗ ಮೊದಲು ತುಪ್ಪ ತುಂಬಾ ಸಹಾಯ ಮಾಡುತ್ತದೆ. ತುಪ್ಪವನ್ನು ಊಟದ ಮಧ್ಯದಲ್ಲಿ ಸೇವನೆ ಮಾಡಬೇಕು.ಇನ್ನೊಂದು ಮೊಶನ್ ಸುಲಭವಾಗಿ ಹೋಗುವುದಕ್ಕೆ ಹಾಗೂ ಗಾಯ ಕಡಿಮೆ ಆಗುವುದಕ್ಕೆ ಒಣ ದ್ರಾಕ್ಷಿಯನ್ನು ರಾತ್ರಿ ನೆನಸಿ ಬೆಳಗ್ಗೆ ಎದ್ದು ತಕ್ಷಣ ತಿನ್ನಬೇಕು.ಮುಖ್ಯವಾಗಿ ಊಟ ಮಾಡಿದ ನಂತರ ಅಂದರೆ ಕೊನೆಯಲ್ಲಿ ಮಜ್ಜಿಗೆ ಕುಡಿಯುವುದು ತುಂಬಾ ಒಳ್ಳೆಯದು.

ಒಂದು ವೇಳೆ ಉರಿ ಸಮಸ್ಸೆ ಇದ್ದಾರೆ ಅರ್ಧ ಚಮಚ ಜೇಷ್ಠ ಮಧುವನ್ನು ಹಾಲಿಗೆ ಹಾಕಿ ಕುಡಿಯುವುದು ಕೂಡ ಒಳ್ಳೆಯದು.ಅಷ್ಟೇ ಅಲ್ಲದೆ ಬಿಸಿ ನೀರಲ್ಲಿ ಕುಳಿತುಕೊಳ್ಳುವುದರಿಂದ ಸರ್ಕ್ಯುಲೇಶನ್ ಚೆನ್ನಾಗಿ ಆಗುತ್ತದೆ ಹಾಗೂ ನಂತರ ಗಾಯ ಇರುವ ಕಡೆ ತುಪ್ಪವನ್ನು ಅಪ್ಲೈ ಮಾಡುವುದು ಕೂಡ ಒಳ್ಳೆಯದು.ಒಂದು ಇದರಿಂದ ಸರಿಯಾಗದಿದ್ದರೆ ಆಯುರ್ವೇದ ಔಷಧಿಯಿಂದ ಗುಣ ಮಾಡಿಕೊಳ್ಳಬಹುದು.ಮಲಬದ್ಧತೆ ಸಮಸ್ಸೆ ಇದ್ದಾರೆ ಮೊದಲು ನೀವು ಜಾಗ್ರತೆಯನ್ನು ವಹಿಸಬೇಕು.

Leave a Reply

Your email address will not be published.