ಮೋದಿ ಮುಂದೆ ಮಹತ್ವದ ಮನವಿ ಮಾಡಿದ ರಾಕಿಂಗ್ ಸ್ಟಾರ್: ಯಶ್ ಮಾತಿಗೆ ಹರಿದು ಬರ್ತಿದೆ ಮೆಚ್ಚುಗೆಗಳು

0
396

ಭಾರತದ ಪ್ರಧಾನಿ ನರೇಂದ್ರ ಮೋದಿಯವರು (PM Modi) ಬೆಂಗಳೂರಿನಲ್ಲಿ(Banglore) ನಡೆಯುತ್ತಿರುವ ಏರೋ ಇಂಡಿಯಾ 2023(Aero India 2023) ನ್ನು ಉದ್ಘಾಟನೆ ಮಾಡುವ ಸಲುವಾಗಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಸಿನಿಮಾ ರಂಗದ ಗಣ್ಯರಾಗಿರುವ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneet Raj Kumar), ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty), ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ರಾಕಿಂಗ್ ಸ್ಟಾರ್ ಯಶ್(Yash) ಅವರು ಭೇಟಿ ಮಾಡಿದ್ದರು. ಸಿನಿಮಾ ರಂಗದ ಗಣ್ಯರು ಮೋದಿಯನ್ನು ಭೇಟಿಯಾದ ಸಂದರ್ಭದಲ್ಲಿ ಒಂದಷ್ಟು ಪ್ರಮುಖವಾದ ಮಾತುಕತೆ ಗಳು ನಡೆದಿವೆ. ಆದರೆ ರಾಜಕೀಯ ವಿಚಾರಗಳೇನು ಚರ್ಚೆ ನಡೆದಿಲ್ಲ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ರಾಕಿಂಗ್ ಸ್ಟಾರ್ ಯಶ್(Yash) ಅವರ ಜೊತೆ ಮಾತನಾಡುವ ಸಂದರ್ಭದಲ್ಲಿ ನಟನ ಕೆಜಿಎಫ್(KGF) ಸಿನಿಮಾದ ಬಗ್ಗೆ ಮಾತನಾಡಿ, ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಅಲ್ಲದೇ ಅವರು ನಿಮ್ಮಿಂದ ಇನ್ನಷ್ಟು ಒಳ್ಳೆಯ ಸಿನಿಮಾಗಳು ಬರಲಿ ಎಂದು ಯಶ್ ಅವರಿಗೆ ಶುಭ ಹಾರೈಸಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಒಂದು ಮಹತ್ವದ ಮನವಿಯನ್ನು ಮಾಡಿಕೊಂಡಿದ್ದು, ಅವರು ಮಾಡಿದ ಮನವಿಯ ವಿಚಾರ ಈಗ ದೊಡ್ಡ ಸುದ್ದಿಯಾಗಿದೆ.

ಹೌದು, ಯಶ್(Yash request) ಅವರು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಮುಂದೆ ಕರ್ನಾಟಕದಲ್ಲಿ ಒಂದು ಒಳ್ಳೆಯ ಫಿಲಂ ಸಿಟಿ ನಿರ್ಮಾಣವಾಗಬೇಕು ಎನ್ನುವ ಮನವಿಯನ್ನು ಇಟ್ಟಿದ್ದಾರೆ. ಯಶ್ ಅವರು ಈ ವೇಳೆ, ಚಿತ್ರೀಕರಣಕ್ಕೆ ಅವಶ್ಯಕತೆ ಇರುವ ಸಕಲ ಸೌಲಭ್ಯಗಳ ಒಂದು ಫಿಲಂ ಸಿಟಿ ಕರ್ನಾಟಕದಲ್ಲಿ ನಿರ್ಮಾಣ ಆಗಬೇಕು, ವಿದೇಶಗಳಲ್ಲಿ ಶೂಟಿಂಗ್ ಮಾಡುವ ಬದಲು ಇಲ್ಲಿಯೇ ಅಂತಹ ಸೌಲಭ್ಯವನ್ನು ಕಲ್ಪಿಸಿ ಕೊಡುವಂತಹ ಕೆಲಸವನ್ನು ಸರ್ಕಾರ ಮಾಡಬೇಕೆಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here