ಅನ್ನ ಮಾಡುವಾಗ ಈ 1 ಕೆಲಸ ಮಾಡಿದರೆ ಯಾವ ರೋಗವೂ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ!

Featured-Article

ಈಗಂತೂ ಜಾಸ್ತಿ ಸಮಯ ಅಡುಗೆ ಮನೆಯಲ್ಲಿ ಕಳೆಯಲು ಯಾರೂ ಇಷ್ಟಪಡುವುದಿಲ್ಲ ಹೀಗಾಗಿ ಹಿಂದಿನ ಕಾಲದ ಅಡುಗೆ ವಿಧಾನಗಳು ಮಹತ್ವವನ್ನು ಕಳೆದುಕೊಳ್ಳುತ್ತಿದೆ ಆದರೆ ಈ ಸಾಂಪ್ರದಾಯಿಕ ಅಡುಗೆ ಪದ್ಧತಿಗಳು ತಮ್ಮದೇ ಆದ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ.

ಉದಾಹರಣೆಗೆ ಹಿಂದೆ ಈಗಿನಂತೆ ಕುಕ್ಕರ್ ಆಗಲಿ , ಗ್ಯಾಸ್ ಅಗಲಿ ಇರಲಿಲ್ಲ ಒಲೆಯಲ್ಲಿ ಪಾತ್ರೆಯನ್ನಿಟ್ಟು ಅನ್ನ ಮಾಡಲಾಗುತ್ತಿತ್ತು.ಹೀಗೆ ಅನ್ನ ಮಾಡಲು ಜಾಸ್ತಿ ಸಮಯ ಹಿಡಿಯುತ್ತಿತ್ತು.ಇದೇ ಕಾರಣಕ್ಕೆ ನಮ್ಮ ಹಿರಿಯರು ಅಕ್ಕಿಯನ್ನು ಬೇಯಿಸುವ ಮೊದಲು 4 ರಿಂದ 5 ಗಂಟೆಗಳ ಕಾಲ ನೆನೆ ಹಾಕುತ್ತಿದ್ದರು.

ಈ ರೀತಿಯಾಗಿ ಸಮಯದ ಉಳಿತಾಯವನ್ನು ಮಾಡುತ್ತಿದ್ದರು.ಅಕ್ಕಿಯನ್ನು ನೆನೆ ಹಾಕಿ ಅನ್ನ ಮಾಡುವ ಪದ್ಧತಿ ನಾವು ಈಗಲೂ ರೂಢಿಸಿಕೊಂಡರೆ ಉತ್ತಮ.ಯಾಕೆಂದರೆ ಇದು ಅಕ್ಕಿಯಲ್ಲಿನ ಅನಗತ್ಯ ಪದರವನ್ನು ತೆಗೆದು ಮೃದು ಹಾಗೂ ಹಗುರವಾಗಿಸುತ್ತದೆ.ಅಷ್ಟೇ ಅಲ್ಲದೆ ಈ ರೀತಿಯಾಗಿ ಅನ್ನ ತಯಾರಿಸುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

ಅಕ್ಕಿಯನ್ನು ನೆನೆಹಾಕಿ ಅನ್ನ ತಯಾರಿಸುವುದರಿಂದ ಬೇಗ ಬೇಯುವುದು ಮಾತ್ರವಲ್ಲದೆ ಜೀರ್ಣಾಂಗ ವ್ಯೂಹವನ್ನು ಪ್ರಚೋದಿಸಿ ಅನ್ನದಲ್ಲಿನ ಹಾಗೂ ಜೀವಸತ್ವಗಳನ್ನು , ಖನಿಜಗಳನ್ನು ಪರಿಣಾಮಕಾರಿಯಾಗಿ ನಮ್ಮದೇಹ ಹೀರಿಕೊಳ್ಳಲು ಇದು ನೆರವು ಮಾಡುತ್ತದೆ.

ಹೀಗೆ ನೆನೆಹಾಕಿ ಅನ್ನ ಮಾಡುವುದರಿಂದ ಫೈಟಿಕ್ ಆಸಿಡ್ ತೆಗೆದು ಹಾಕಲು ಸಹಾಯವಾಗುತ್ತದೆ.ಫೈಟಿಕ್ ಆಸಿಡ್ ಎನ್ನುವುದು ಕಾಳುಗಳಲ್ಲಿ ಕಂಡುಬರುವ 1ಅಂಶ.ಇದು ಶರೀರ ಕಬ್ಬಿಣ ,ಜ್ಹಿಂಕ್ ಹಾಗೂ ಕ್ಯಾಲ್ಸಿಯಂ ಹೀರಿಕೊಳ್ಳುವ ಪ್ರಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ.

ಫೈಟಿಕ್ ಆ್ಯಸಿಡ್ ಕಾಳು , ದ್ವಿದಳ ಧಾನ್ಯ ಹಾಗೂ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.ಆದರೆ ಅಕ್ಕಿಯನ್ನು ನೀರಿನಲ್ಲಿ ನೆನೆ ಹಾಕುವುದರಿಂದ ಫೈಟಿಕ್ ಆಸಿಡ್ ಅಂಶವನ್ನು ತೆಗೆದು ಹಾಕಬಹುದು.ಇನ್ನು ಜ್ಹಿಂಕ್ ಹಾಗೂ ಕಬ್ಬಿಣದ ಕೊರತೆ ಹೊಂದಿರುವವರು ಅಕ್ಕಿಯನ್ನು ನೆನೆಹಾಕುವ ಅಭ್ಯಾಸವನ್ನು ರೂಢಿಸಿಕೊಂಡರೆ ಒಳ್ಳೆಯದು.

ಈ ರೀತಿ ಅಕ್ಕಿಯನ್ನು ನೆನೆಹಾಕಿ ಅನ್ನ ಮಾಡುವುದರಿಂದ ದೇಹ ಸಮರ್ಪಕವಾಗಿ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ.

ಹಾಗಿದ್ರೆ ಎಷ್ಟು ಸಮಯ ನೆನೆಹಾಕಬೇಕು?ಕೆಂಪು , ಕಂದು , ಪಾಲಿಷ್ ಮಾಡದ ಅಕ್ಕಿ ಯನ್ನು 6 ರಿಂದ 12 ಗಂಟೆಗಳ ಕಾಲ ನೆನೆ ಹಾಕಬೇಕು.ಪಾಲಿಶ್ ಮಾಡಿದ ಕಂದು ಅಕ್ಕಿಯನ್ನು 4 ರಿಂದ 6 ಗಂಟೆ ನೆನೆಹಾಕಬೇಕು. ಇನ್ನು ಬಿಳಿ ಅಕ್ಕಿಯನ್ನು 20 ರಿಂದ 30 ನಿಮಿಷ ನೆನೆ ಹಾಕಿದರೆ ಸಾಕು. ಹಾಗೂ ಬಾಸ್ಮತಿ ಅಕ್ಕಿಯನ್ನು 15 ನಿಮಿಷ ನೆನೆಹಾಕಿ ಅನ್ನವನ್ನು ತಯಾರಿಸಬಹುದು.

ಧನ್ಯವಾದಗಳು.

Leave a Reply

Your email address will not be published.