1 ಕಾಳು ತಿಂದರೆ ತಿಂಗಳಲ್ಲಿ ನೀವು ದಪ್ಪ ಆಗುವುದು ಖಚಿತ!
ಅನೇಕರು ತುಂಬಾ ತೆಳ್ಳಗಿರುತ್ತಾರೆ ,ಎಷ್ಟೇ ಊಟ ತಿಂದರೂ ದಪ್ಪ ಆಗುವುದಿಲ್ಲ ಅಂಥವರಿಗಾಗಿಯೇ ನಮ್ಮ ಲೇಖನದಲ್ಲಿ ದಪ್ಪ ಆಗಲು ಕೆಲವು ಮನೆಮದ್ದುಗಳನ್ನು ತಿಳಿಸಲಿದ್ದೇವೆ.
ತೆಳ್ಳಗೆ ಇರಲು ಮುಖ್ಯ ಕಾರಣಗಳು :ನಮ್ಮ ದೇಹ ಸಪ್ತಧಾತುಗಳಿಂದ ಮಾಡಲ್ಪಟ್ಟಿದೆ .ಇನ್ನು ಯಾರು ತೆಳ್ಳಗೆ ಇರುತ್ತಾರೋ ಅಂಥವರಿಗೆ ಸಪ್ತ ಧಾತು ಗಳಲ್ಲಿ ಒಂದಾದ ಮಾಂಸ ಧಾತುವಿನ ಕೊರತೆ ಇರುತ್ತದೆ ಆದ್ದರಿಂದ ಮಾಂಸ ಧಾತು ವಿನಾ ಸಪ್ಲಿಮೆಂಟ್ ನೀಡಬೇಕು ಅಂದರೆ ಮಾಂಸದ ಧಾತುವಿನ ಕೊರೆತೆಯನ್ನು ನೀಗಿಸಲು ಮಾಂಸ ಧಾತು ಹೆಚ್ಚಿರುವ ಆಹಾರವನ್ನು ಬಳಸಬೇಕು ಆಗ ಖಂಡಿತವಾಗಲೂ ದಪ್ಪವಾಗಬಹುದು.
ತೆಳ್ಳಗಿರುವ ಲಕ್ಷಣಗಳು :ಆರೋಗ್ಯವಂತನಾಗಿದ್ದು, ಹೆಚ್ಚು ಆಹಾರ ಸೇವಿಸಿದರು ದಪ್ಪಗಾಗದೆ ಇರುವುದು, ನೋಡಲು ತೆಳ್ಳಗೆ ಕಾಣುವುದು ಹಾಗೂ ನೋಡಲು ಸುಂದರವಾಗಿ ಕಾಣದಿರುವುದು.
ಪರಿಹಾರ :ಮಾಂಸ ಧಾತುವಿನ ಕೊರತೆ ಇರುವುದರಿಂದ ಮಾಂಸ ಧಾತುವನ್ನು ಹೆಚ್ಚಿಸಿಕೊಳ್ಳಲು ಆಹಾರ ಔಷಧಿಗಳನ್ನು ಬಳಸಬೇಕು.ಮಾಂಸದ ಗುಣವಿರುವ ಆಹಾರಗಳನ್ನು ಸೇವಿಸುವುದರಿಂದ ಮಾಂಸ ವೃದ್ಧಿಯಾಗುತ್ತದೆ.
ಉದ್ದಿನಬೇಳೆ
ಪ್ರತಿದಿನ 2 ಬಾರಿ ಬೆಳಿಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ 2 ರಿಂದ 3 ಸ್ಪೂನ್ ಉದ್ದಿನಬೇಳೆಯನ್ನು ಮೊಳಕೆ ಬರಿಸಿ ಸೇವಿಸುವು ದರಿಂದ ಮಾಂಸ ವೃದ್ಧಿಯಾಗುತ್ತದೆ ಹಾಗೂ ದಷ್ಟಪುಷ್ಟವಾಗಿ ಮಾಂಸ ಬೆಳೆಯುತ್ತದೆ.ಅಥವಾ ಎಮ್ಮೆಯ ತುಪ್ಪವನ್ನು ಎಮ್ಮೆಯ ಹಾಲಿನ ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ಪ್ರತಿದಿನ ಸೇವಿಸುವುದರಿಂದ ಸಹ ಮಾಂಸ ವೃದ್ಧಿಯಾಗುತ್ತದೆ.
ಧನ್ಯವಾದಗಳು.