ವಾರದಲ್ಲೇ ಹೊಟ್ಟೆಯ ಬೊಜ್ಜು ಕರಗಿಸುವ ಅದ್ಬುತ ಮನೆಮದ್ದು !
ಹೊಟ್ಟೆಯ ಬೊಜ್ಜು
ಹೊಟ್ಟೆಯ ಬೊಜ್ಜಿಗೆ ಪ್ರಮುಖವಾದ ಕಾರಣ ಗಳೆಂದರೆ ಹೆಚ್ಚಾಗಿ ಕಾರ್ಬೋಹೈಡ್ರೇಟ್ ಅಂಶ ಇರುವ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯ ಬೊಜ್ಜು ಹೆಚ್ಚಾಗುತ್ತದೆ.ಉದಾಹರಣೆಗೆ ರಾಗಿ, ಚಪಾತಿ ಅನ್ನ ಇತ್ಯಾದಿ.
ಅಂದರೆ ಉದಾಹರಣೆಗೆ ಒಂದು ಚಪಾತಿ ತಿಂದರೆ ಅದು ನಮ್ಮ ದೇಹಕ್ಕೆ ಶಕ್ತಿಯಾಗಿ ಬದಲಾಗುತ್ತದೆ ಮತ್ತು 2ಕ್ಕಿಂತ ಹೆಚ್ಚು ಚಪಾತಿ ತಿಂದರೆ ಅದು ಫ್ಯಾಟ್ ಆಗಿ ಕನ್ವರ್ಟ್ ಆಗಿ ನಮ್ಮ ದೇಹದಲ್ಲಿ ಕೂರುತ್ತದೆ.ತಂಪು ಪಾನೀಯಗಳು ಮತ್ತು ಬೇಕರಿ ಪದಾರ್ಥಗಳು ಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಇರುವುದರಿಂದ ಇವುಗಳನ್ನು ಸೇವಿಸುವುದರಿಂದ ಕೂಡ ನಮ್ಮ ಹೊಟ್ಟೆಯ ಬೊಜ್ಜು ಹೆಚ್ಚಾಗುತ್ತದೆ.ಅಧಿಕವಾಗಿ ಸಕ್ಕರೆಯ ಅಂಶ ಇರಿವ ಸಿಹಿ ಪದಾರ್ಥಗಳನ್ನು ಸೇವಿಸುವುದರಿಂದ ಕೂಡ ನಮ್ಮ ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಯಾಗುತ್ತದೆ.
ಇನ್ನು ಈ ಹೊಟ್ಟೆಯ ಬೊಜ್ಜಿನ ಸಮಸ್ಯೆಯಿಂದ ಹೃದಯ ಸ್ತಂಭನ , ಬುದ್ಧಿಮಾಂದ್ಯತೆ , ಪಾರ್ಶ್ವವಾಯು ಮೊದಲಾದ ತೊಂದರೆಗಳು ಕಾಣಿಸಿಕೊಳ್ಳಬಹುದಾಗಿದೆ ಆದ್ದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಿ ಹಾಗೂ ಸೂಕ್ತವಾದ ದೇಹದ ತೂಕವನ್ನು ಹೊಂದುವುದು ಸೌಂದರ್ಯ ದೃಷ್ಟಿಯಿಂದ ಮತ್ತು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.
ಇನ್ನೂ ಹೊಟ್ಟೆಯ ಬೊಜ್ಜನ್ನು ಕರಗಿಸಲು ಪ್ರತಿದಿನ 8 ಲೋಟದಷ್ಟು ನೀರು ಕುಡಿದರೆ ಸಾಕು ಎಂಬುದನ್ನು ಬಿಟ್ಟು ದಿನಕ್ಕೆ ಬೇಕಾದಗಲೆಲ್ಲ 1 ಲೋಟ ತಣ್ಣೀರನ್ನು ಕುಡಿಯಿರಿ ಹಾಗೂ ಆದಷ್ಟು ಯಥೇಚ್ಛವಾಗಿ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಸಿಶುಂಠಿ ಜೀರ್ಣಶಕ್ತಿಗೆ ತುಂಬಾನೇ ಸಹಕಾರಿ ಹಾಗೂ ಶುಂಠಿ ಉಷ್ಣ ಪ್ರಕೃತಿ ಯನ್ನು ಹೊಂದಿದೆ ಹಾಗಾಗಿ ಇದನ್ನು ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ ಹಾಗೂ ಇದರಿಂದ ದೇಹದ ಕೊಬ್ಬು ಕರಗುತ್ತದೆ.
ಇನ್ನು ದೇಹದಲ್ಲಿ ಒತ್ತಡದ ಕಾರಣದಿಂದ ಕಾರ್ಟಿಸೋಲ್ ಎಂಬ ಹಾರ್ಮೋನ್ ಉತ್ಪತ್ತಿಯಾಗುತ್ತದೆ,
ಈ ಹಾರ್ಮೋನ್ ನನ್ನು ಉತ್ಪತ್ತಿಯಾಗುವುದನ್ನು ಶುಂಠಿ ಕಡಿಮೆಗೊಳಿಸುತ್ತದೆ
1 ಪಾತ್ರೆಗೆ 2 ಲೋಟ ನೀರು ಹಾಕಿ ಅದಕ್ಕೆ 1 ಇಂಚಿನಷ್ಟು ಹಸಿ ಶುಂಠಿ ಹಾಕಿ 10 ನಿಮಿಷದ ವರೆಗೂ ಕುದಿಸಬೇಕು ನಂತರ 1 ಸ್ಪೂನ್ ಜೇನು ಮತ್ತು 1 ಸ್ಪೂನ್ ನಿಂಬೆ ಹಣ್ಣಿನ ರಸವನ್ನು ಬೆರೆಸಿಕೊಂಡು ನಿಯಮಿತವಾಗಿ ಸೇವಿಸಬೇಕು.
ಇನ್ನು ಪ್ರತಿದಿನ ಈ ಕಷಾಯದ 2 ಲೋಟವನ್ನು ಸೇವಿಸುವುದರಿಂದ ದೇಹದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದಾಗಿದೆ.
ಧನ್ಯವಾದಗಳು.