ಹಣ್ಣುಗಳನ್ನು ಈ ಸಮಯದಲ್ಲಿ ತಿಂದರೆ ನಿಮ್ಮ ಆರೋಗ್ಯ 100 ವರ್ಷ ಚೆನ್ನಾಗಿರುತ್ತದೆ!

Featured-Article

ನಮ್ಮೆಲ್ಲರಿಗೂ ಹಣ್ಣುಗಳ ಮಹತ್ವ ತಿಳಿದಿದೆ.ಹಣ್ಣುಗಳನ್ನು ತಿನ್ನುವುದರಿಂದ ಅನೇಕ ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗುತ್ತದೆ ಆದರೆ ಈ ಹಣ್ಣುಗಳನ್ನು ಯಾವ ಸಮಯದಲ್ಲಿ ತಿಂದರೆ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಈ ಹಣ್ಣುಗಳು ದೇಹದ ಒಳಗೆ ಸೇರಿ ಪೂರೈಸಬಲ್ಲದು ಎಂಬುದನ್ನು ತಿಳಿಯೋಣ ಬನ್ನಿ.

ಇನ್ನೂ ಹಣ್ಣುಗಳನ್ನು ನಾವು ಪ್ರತಿನಿತ್ಯ ತಿನ್ನುವುದನ್ನು ರೂಢಿಸಿಕೊಳ್ಳಬೇಕು.ಶೇಕಡ 90%ರಷ್ಟು ಹಣ್ಣುಗಳಲ್ಲಿ ನೀರು ಇರುತ್ತದೆ ಹಾಗೂ ಹಣ್ಣುಗಳು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು , ನ್ಯೂಟ್ರಿಯಂಟ್ಸ್ ಗಳನ್ನು ಒದಗಿಸುತ್ತವೆ ಹಾಗೂ ಕೆಲವು ಹಣ್ಣುಗಳಲ್ಲಿ ಕಡಿಮೆ ಕ್ಯಾಲರಿ ಇರುತ್ತದೆ.

ಇನ್ನು ನಾವು ತೂಕವನ್ನು ಇಳಿಸಿಕೊಳ್ಳಬೇಕಾದರೆ ನಮ್ಮ ದೇಹಕ್ಕೆ ಅಗತ್ಯವಾದ ನ್ಯೂಟ್ರಿಯಂಟ್ಸ್ ಬೇಕು ಆದರೆ ನಮಗೆ ನಮ್ಮ ದೇಹಕ್ಕೆ ಸಾಕಾಗುವಷ್ಟು ಕ್ಯಾಲರಿ ಆಹಾರದಿಂದ ಸಿಗುವುದಿಲ್ಲ ಹಾಗಾಗಿ
ಹಣ್ಣನ್ನು ನಾವು ನಿಯಮಿತವಾಗಿ ಸೇವಿಸಬೇಕು.ಪ್ರತಿನಿತ್ಯ ಹಣ್ಣುಗಳನ್ನು ಸೇವಿಸುವುದರಿಂದ ಬಹಳ ನಮ್ಮ ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಇನ್ನೂ ಹಣ್ಣುಗಳನ್ನು ಯಾವ ಸಮಯದಲ್ಲಿ ತಿಂದರೆ ಒಳ್ಳೆಯದು ಎಂದು ನೋಡುವುದಾದರೆ
ಬೆಳಗಿನ ಉಪಹಾರದ ನಂತರ ಮತ್ತು ಮಧ್ಯಾಹ್ನದ ಊಟದ ಮುಂಚಿನ ಸಮಯ ದಲ್ಲಿ ಹಣ್ಣುಗಳನ್ನು ತಿನ್ನಬೇಕು

ಹೀಗೆ ಇಂಥ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾದ ನ್ಯೂಟ್ರಿಯಂಟ್ಸ್ ಸಿಗುತ್ತವೆ ಹಾಗೂ ಇದರಿಂದ ತೂಕವನ್ನು ಇಳಿಸಿಕೊಳ್ಳಬಹುದು.ಹೇಗೆಂದರೆ ತಿಂಡಿ ಮತ್ತು ಊಟದ ಮಧ್ಯ ಹಣ್ಣುಗಳನ್ನು ಸೇವಿಸುವುದರಿಂದ ಮಧ್ಯಾಹ್ನ ಊಟದ ಮೇಲೆ ಅವಲಂಬಿತವಾಗುವುದು ಕಡಿಮೆಯಾಗುತ್ತದೆ
ಹಾಗೂ ಇದರಿಂದ ಕಡಿಮೆ ಆಹಾರವನ್ನು ಸೇವಿಸುತ್ತೇವೆ ಹಾಗೂ ಇದರಿಂದ ನಮ್ಮ ತೂಕ ಕಡಿಮೆಯಾಗುತ್ತದೆ.

ನಮ್ಮ ದೇಹದ ಹಸಿವು ಆಹಾರದಲ್ಲ ಬದಲಾಗಿ ಪೋಷಕಾಂಶಗಳ ಹಸಿವು ಆದ್ದರಿಂದ ಕೇವಲ ಆಹಾರದಿಂದ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಬದಲು ಹಣ್ಣು ಹಂಪಲು ಫಲಾಹಾರಗಳನ್ನು ಸೇವಿಸಿ ತುಂಬಿಸಿಕೊಳ್ಳಬೇಕು.ಹೀಗೆ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳು , ನ್ಯೂಟ್ರಿಯಂಟ್ಸ್ ಗಳು , ವಿಟಮಿನ್ಸ್ , ಮಿನರಲ್ಸ್ ಗಳು ಸಿಗುತ್ತವೆ
ಜೊತೆಗೆ ಹೊಟ್ಟೆಯೂ ತುಂಬುತ್ತದೆ.

ಇನ್ನು ಪ್ರತಿದಿನ ಒಂದೇ ರೀತಿಯ ಹಣ್ಣುಗಳನ್ನು ತಿನ್ನುವ ಬದಲು ವಾರದಲ್ಲಿ 5 ರಿಂದ 6 ರೀತಿಯ ಹಣ್ಣುಗಳನ್ನು ಸೇವಿಸಿ ಯಾಕೆಂದರೆ ಒಂದೇ ಹಣ್ಣಿನಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವ ಅಗತ್ಯವಾದ ಪೋಷಕಾಂಶಗಳು ದೊರೆಯುವುದಿಲ್ಲ ಹಾಗಾಗಿ 5 ರಿಂದ 6ತ ರಹದ ಹಣ್ಣುಗಳನ್ನು ಸೇವಿಸಿ.

ಇನ್ನೂ ಮುಖ್ಯವಾಗಿ ಒಂದೇ ದಿನ 2 ರಿಂದ 3 ರೀತಿಯ ಹಣ್ಣುಗಳನ್ನು ಸೇವಿಸುವ ಬದಲು ದಿನದಲ್ಲಿ 1 ರೀತಿಯ ಹಣ್ಣನ್ನು ಮಾತ್ರ ಸೇವಿಸಿ ಮತ್ತೊಂದು ಹಣ್ಣನ್ನು ಮರುದಿನ ಸೇವಿಸಿ.

ಧನ್ಯವಾದಗಳು

Leave a Reply

Your email address will not be published.