ಮನೆಯಲ್ಲಿ ಈ ಫೋಟೋವನ್ನು ಈ ದಿಕ್ಕು ನಲ್ಲಿ ಇಟ್ಟರೆ ಅನೇಕ ಸಮಸ್ಯೆಗಳು ನಿವಾರಣೆ ಆಗುವುದು 100%ಖಚಿತ

Featured-Article

ಹಿರಿಯರು ಹೇಳಿದಂತೆ ಮನೆಯೇ ಒಂದು ದೇವಾಲಯ.ಹೊರಗಡೆ ಎಷ್ಟೇ ಸುತ್ತಾಡಿದರು ಮತ್ತೆ ಮರಳಿ ಮನೆಗೆ ಬರುತ್ತಾರೆ.ಅಂತಹ ಮನೆಯಲ್ಲಿ ಸುಖ, ನೆಮ್ಮದಿ, ಸಮೃದ್ಧಿ ಸಿಗುತ್ತದೆ. ಪ್ರಾಚೀನ ಕಾಲದಿಂದಲೂ ಮನೆಯಲ್ಲಿ ದೇವರ ಮೂರ್ತಿಗಳನ್ನು ಮತ್ತು ಚಿತ್ರಗಳನ್ನು ಇಟ್ಟುಕೊಳ್ಳುತ್ತಿದ್ದರು.

ಇನ್ನು ಕೆಲವರ ಮನೆಯಲ್ಲಿ ದೇವರ ಮನೆ ಮತ್ತು ಹಾಲ್ ಕೆಲವು ಕಡೆ ಫೋಟೋವನ್ನು ಹಾಕಿಕೊಂಡಿರುತ್ತಾರೆ.ಇದು ಅನೇಕ ವಸ್ತುಗಳನ್ನು ಮತ್ತು ವಾಸ್ತು ದೋಷಗಳನ್ನು ನಿವಾರಿಸುವಂತೆ ಮಾಡುತ್ತದೆ.

ವಾಸ್ತು ಪ್ರಕಾರ ಮನೆಯಲ್ಲಿ ದೇವಾನುದೇವತೆಗಳ ಫೋಟೋ ಹಾಕಿದಾರೆ ಅನೇಕ ಸಮಸ್ಯೆಗಳು ನಿವಾರಣೆಯಾಗಿ ನೆಮ್ಮದಿ ಉಂಟಾಗುತ್ತದೆ.ಇದರಿಂದ ಸುಖ-ಶಾಂತಿ ಉಂಟಾಗುತ್ತದೆ. ಮುಖ್ಯವಾಗಿ ಹನುಮಂತನ ಪ್ರತಿಮೆ ಹಾಗೂ ಫೋಟೋವನ್ನು ಹಾಕುವುದರಿಂದ ಸಾಕಷ್ಟು ಲಾಭಗಳು ಇವೆ ಎಂದು ಹೇಳುತ್ತಾರೆ. ಆದರೆ ಎಲ್ಲೆಂದರಲ್ಲಿ ಹನುಮಂತನ ಫೋಟೋ ಹಾಕುವುದು ಒಳ್ಳೆಯದಲ್ಲ.

ಯಾವುದೇ ಕಾರಣಕ್ಕೂ ಹನುಮಂತ ಫೋಟೋವನ್ನು ಬೆಡ್ ರೂಮಿನಲ್ಲಿ ಹಾಕಬಾರದು. ಮನೆಯಲ್ಲಿ ದೇವರ ಕೋಣೆಯಲ್ಲಿ ಮಾತ್ರ ಹನುಮಂತನ ಫೋಟೋವನ್ನು ಇಟ್ಟು ಪೂಜಿಸಬೇಕು. ಹನುಮಂತನ ಮುಖ ದಕ್ಷಿಣ ದಿಕ್ಕಿಗೆ ಬರುವಂತೆ ಇಡಬೇಕು. ಏಕೆಂದರೆ ಹನುಮಂತ ತನ್ನ ಶಕ್ತಿಯ ದಕ್ಷಿಣ ದಿಕ್ಕಿಗೆ ಪ್ರಯೋಗವನ್ನು ಮಾಡಿದ್ದರು.

ದಕ್ಷಿಣ ದಿಕ್ಕಿಗೆ ಫೋಟೋವನ್ನು ಹಾಕುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸುಖ ಶಾಂತಿ ನೆಲೆಸುತ್ತದೆ ಹಾಗೂ ಧನಾತ್ಮಕ ಚಿಂತನೆಗಳು ಮೂಡುತ್ತವೆ. ಇನ್ನು ಪಂಚಮುಖ ಹನುಮಂತ, ಪರ್ವತ ಎತ್ತಿ ಹಿಡಿದ ಹನುಮಂತ ಹಾಗೂ ರಾಮ ಬಜನೆ ಮಾಡುವ ಹನುಮಂತನ ಫೋಟೋವನ್ನು ಹಾಕುವುದು ಒಳ್ಳೆಯದು.

ಸಾಧ್ಯವಾದರೆ ಮನೆಯಿಂದ ಹೊರಗೆ ಹೋಗುವಾಗ ಹನುಮಂತನ ಫೋಟೋಕ್ಕೆ ನಮಸ್ಕರಿಸಿ ಹೋಗುವುದು ಒಳ್ಳೆಯದು ಹಾಗೂ ಪ್ರತಿದಿನ ಹನುಮಾನ್ ಚಾಲೀಸವನ್ನು ಪಠಿಸುವುದು ಒಳ್ಳೆಯದು.

Leave a Reply

Your email address will not be published.