ದಿನಕ್ಕೊಂದು ಅವಕಾಡೊ ತಿಂದರೆ ಏನಾಗುತ್ತೆ ಗೊತ್ತಾ ?ಬಟರ್ ಫ್ರೂಟ್ ಬಗ್ಗೆ ತಿಳಿಯಿರಿ

0
402

ಹಣ್ಣುಗಳು ದೇಹಕ್ಕೆ ಪೌಷ್ಟಿಕವನ್ನು ಆರೋಗ್ಯವನ್ನು ನೀಡುತ್ತದೆ. ಅವಕಾಡೊ ಹಣ್ಣನ್ನು ಬಟರ್ ಫ್ರೂಟ್ ಎಂದು ಕರೆಯುತ್ತಾರೆ. ಸದ್ಯಕ್ಕೆ ತಮಿಳುನಾಡು,ಕೇರಳ, ಕರ್ನಾಟಕ ಅನೇಕ ರಾಜ್ಯಗಳು ಸೇರಿದಂತೆ ಈ ಬಟರ್ ಫ್ರೂಟ್ ಹಣ್ಣನ್ನು ಬೆಳೆಯುತ್ತಾರೆ.

ಇದನ್ನು ಹಾಗೇ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಬೇರೆಲ್ಲಾ ಹಣ್ಣಿಗಿಂತ ಅವಕಾಡೊ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾಕೆಂದರೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದೆ. ಸಾಮಾನ್ಯವಾಗಿ ಈ ಹಣ್ಣು ಮೆಕ್ಸಿಕೋ ದೇಶದಲ್ಲಿ ಹೆಚ್ಚು ಕಂಡು ಬರುತ್ತದೆ. ಹಲವಾರು ಜನರು ಮಿಲ್ಕ್ ಶೇಕ್ ಮಾಡಿ ಕುಡಿಯುತ್ತಾರೆ.

ಅವಕಾಡೊ ಹಣ್ಣು ಸೇವನೆಯಿಂದ ದೇಹದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಪೊಟ್ಯಾಶಿಯಂ ಹೆಚ್ಚು ಇದ್ದು ಸೋಡಿಯಂ ಕಡಿಮೆ ಇರುತ್ತದೆ. ಹೃದಯಾಘಾತ ಪಾರ್ಶ್ವವಾಯು ಸಮಸ್ಯೆಯನ್ನು ನಿವಾರಿಸಲು ಈ ಹಣ್ಣು ತುಂಬಾನೇ ಉಪಯೋಗವಾಗುತ್ತದೆ.

ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.ಅವಕಾಡೊದಲ್ಲಿರುವ ನಾರಿನಂಶಗಳು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.100ಗ್ರಾಂ ಅವಕಾಡೊದಲ್ಲಿ 7 ಗ್ರಾಂ ನಾರಿನ ಅಂಶ ಇರುತ್ತದೆ.

ಅವಕಾಡೊ ಸೇವಿಸುವುದರಿಂದ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು.ಖಿನ್ನತೆ ಅಪಾಯವನ್ನು ಕಡಿಮೆ ಮಾಡುತ್ತದೆ. ಅವಕಾಡೊ ಹಣ್ಣಿನಲ್ಲಿರುವ ಉನ್ನತಮಟ್ಟದ ಪಾಲೈಟ್ ಅಂಶವು ಖಿನ್ನತೆಯನ್ನು ಅಪಾಯವನ್ನು ತಗ್ಗಿಸುತ್ತದೆ.ಇದನ್ನು ಸೇವಿಸುವುದರಿಂದ ಚರ್ಮದ ಹೊಳಪು ಹೆಚ್ಚಿಸುತ್ತದೆ.ಹಣ್ಣುಗಳ ಸೇವನೆಯಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here