ತಾಯಿಯ ಎದೆ ಹಾಲಿನಷ್ಟೇ ಪವಿತ್ರ ಈ ಹಾಲು!
ತೆಂಗಿನಕಾಯಿ
ತೆಂಗಿನಕಾಯಿಯ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆ ಇದೆ ಅದೇನೆಂದರೆ ತೆಂಗಿನಕಾಯಿ ಯನ್ನು ಹೆಚ್ಚಾಗಿ ಸೇವಿಸುವುದರಿಂದ ಇದು ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತದೆ , ತೆಂಗಿನಕಾಯಿ ಎಣ್ಣೆ ಒಳ್ಳೆಯದಲ್ಲ ಆದರೆ ಇಂದು ಅನೇಕ ವಿಜ್ಞಾನಿಗಳು ರಿಸರ್ಚ್ ಮಾಡಿರುವ ಪ್ರಕಾರ ತೆಂಗಿನ ಕಾಯಿಯೂ ನಮ್ಮ ಆರೋಗ್ಯಕ್ಕೆ ಉತ್ತಮ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ತೆಂಗಿನಕಾಯಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡುತ್ತದೆ.ತೆಂಗಿನಕಾಯಿಯ ಹಾಲು ,ತೆಂಗಿನ ಕಾಯಿಯ ತುರಿ , ತೆಂಗಿನ ಕಾಯಿಯ ಎಣ್ಣೆ ತುಂಬಾ ಒಳ್ಳೆಯದು.
ತೆಂಗಿನಕಾಯಿ ಎಣ್ಣೆ ಯನ್ನು ಪ್ರತಿದಿನ ಬೆಳಿಗ್ಗೆ , ಮಧ್ಯಾಹ್ನ , ಸಂಜೆ ಆಹಾರ ಕ್ಕಿಂತ ಮುಂಚೆ ಸೇವಿಸುತ್ತಾ ಬಂದರೆ ಅಸಿಡಿಟಿ ಕಡಿಮೆಯಾಗುತ್ತದೆ ಜೊತೆಗೆ ನಮ್ಮ ದೇಹಕ್ಕೆ ಶಕ್ತಿ ದೊರೆಯುತ್ತದೆ.ಇನ್ನು ಇದರಲ್ಲಿರುವ ಕೊಬ್ಬಿನಾಂಶವು ಲಿವರ್ ಗೆ ಹೋಗದೆ ನೇರವಾಗಿ ನಮ್ಮ ದೇಹಕ್ಕೆ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ.
ತೆಂಗಿನಕಾಯಿಯ ಹಾಲು ಮಾಡುವ ವಿಧಾನ :ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ತುರಿದುಕೊಳ್ಳಿ ಅದಕ್ಕೆ ಸ್ವಲ್ಪ ಬಿಸಿ ನೀರನ್ನು ಹಾಕಿ ಮಿಕ್ಸಿ ಮಾಡಿ ತೆಂಗಿನಕಾಯಿ ಹಾಲು ರೆಡಿಯಾಗುತ್ತದೆ.ಅದನ್ನು ಸೋಸಿ ಆ ಉಳಿದಿರುವ ತೆಂಗಿನ ತುರಿಯನ್ನು 1 ಲೋಟಕ್ಕೆ ಹಿಂಡಿಕೊಳ್ಳಿ .ಆಮೇಲೆ ಹಿಂಡಿ ಉಳಿದಿರುವ ತೆಂಗಿನಕಾಯಿಯ ತುರಿಯನ್ನು ಬೇರೆ ಯಾವುದಾದರೂ ಆಹಾರಕ್ಕೆ ಬಳಸಬಹುದಾಗಿದೆ.ಇನ್ನೂ ಆ ಹಾಲಿಗೆ ಸ್ವಲ್ಪ ಕೋಕೋ ಪೌಡರ್ , ಏಲಕ್ಕಿ ಮತ್ತು ಬೆಲ್ಲ ಹಾಕಿ ಮಕ್ಕಳಿಗೆ ಕುಡಿಯಲು ಕೊಟ್ಟರೆ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.ಧೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ.ಇನ್ನು ಇದರಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಫ್ಯಾಟ್ ಇದೆ.
ತೆಂಗಿನಕಾಯಿ ಹಾಲನ್ನು ಪ್ರತಿ ದಿನ ನಾವು ಅರ್ಧ ಗ್ಲಾಸ್ ಸೇವಿಸುತ್ತಾ ಬಂದರೆ ನಮ್ಮ ದೇಹಕ್ಕೆ ಅಗತ್ಯವಾದ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳು ದೊರೆಯುತ್ತದೆ.ಕೂದಲಿನ ಆರೋಗ್ಯಕ್ಕೂ ಸಹ ತೆಂಗಿನ ಹಾಲು ಒಳ್ಳೆಯದು.
ತೆಂಗಿನ ಹಾಲಿನ ಜೊತೆಗೆ ಪ್ಯೂರ್ ಕೊಕೊ ಪೌಡರ್ ಮಿಕ್ಸ್ ಮಾಡಿಕೊಂಡು ಜೊತೆಗೆ ಸ್ವಲ್ಪ ಏಲಕ್ಕಿ ಹಾಕಿ ಕುಡಿಯಿರಿ.ಎಲಕ್ಕಿಯು ಜೀರ್ಣಕ್ರಿಯೆಗೆ ಸಹಕಾರಿ.ಕೊಕೊ ಪೌಡರ್ ಒಳ್ಳೆ ಪ್ಲೇವರ್ ನೀಡುತ್ತದೆ.
ಚರ್ಮ ಸಂಬಂಧಿ ಸಮಸ್ಯೆ ಗಳಿಗೆ ತೆಂಗಿನ ಹಾಲು ಉತ್ತಮ ಮನೆಮದ್ದಾಗಿದೆ.
ಧನ್ಯವಾದಗಳು.