ಯಾವ ಹಣ್ಣು ತಿಂದರೆ ಏನು ಪ್ರಯೋಜನ ಗೊತ್ತಾ.!ತಪ್ಪದೇ ತಿಳಿದುಕೊಳ್ಳಿ!

Featured-Article

ಆಹಾರ ಕ್ರಮದಲ್ಲಿ ಹಣ್ಣುಗಳನ್ನು ಸೇರಿಸಿಕೊಂಡರೆ ಅದರಿಂದ ಸಿಗುವ ಲಾಭಗಳು ಹಲವಾರು.
ಹಣ್ಣುಗಳು ನಮ್ಮ ದೇಹಕ್ಕೆ ಒಳ್ಳೆಯದು ಎಂದು ನಮಗೆಲ್ಲ ಗೊತ್ತು ಆದರೆ ನಮ್ಮಲ್ಲಿ ಶೇ 90 ರಷ್ಟು ಜನರು ತಪ್ಪಾಗಿ ಹಣ್ಣನ್ನು ಸೇವಿಸುತ್ತಿದ್ದಾರೆ ಇದರಿಂದಾಗಿ ನಮ್ಮ ದೇಹಕ್ಕೆ ಯಾವುದೇ ರೀತಿಯ ಪೋಷಕಾಂಶ ದೊರೆಯುವುದಿಲ್ಲ ಬದಲಾಗಿ ಜೀರ್ಣಕ್ರಿಯೆಯ ತೊಂದರೆ, ಅಲರ್ಜಿ ಮುಂತಾದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.ಇದಕ್ಕೆ ನಾವು ಮಾಡುವ ಕೆಲವು ತಪ್ಪುಗಳೇ ಕಾರಣ.

ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಇದೇ ಕಾರಣಕ್ಕೆ ನಮ್ಮಲ್ಲಿ ಹಲವರು ಯಾವಾಗ ಬೇಕಾದರೂ ಅಥವಾ ಯಾವುದರ ಜೊತೆ ಬೇಕಾದರೂ ಹಣ್ಣುಗಳನ್ನು ಬೆರೆಸಿ ಸೇವಿಸಬಹುದು ಎಂದು ತಿಳಿದುಕೊಂಡಿದ್ದೇವೆ ಆದರೆ ಅದು ತಪ್ಪು.ನಾವೆಲ್ಲರೂ ಹಣ್ಣುಗಳನ್ನು ಹಾಗೆ ಕೈಗೆ ಸಿಕ್ಕಿದ ಕೂಡಲೇ ತಿನ್ನುತ್ತೇವೆ ಆದರೆ ಹಣ್ಣುಗಳನ್ನು ತಿನ್ನಲು ಸರಿಯಾದ ಸಮಯ ಕೂಡ ಮುಖ್ಯ.

ಹಣ್ಣುಗಳನ್ನು ಮಧ್ಯಾಹ್ನ ಮತ್ತು ರಾತ್ರಿ ಊಟದ ಮಧ್ಯೆ ತಿನ್ನಬೇಕು ಅಂದರೆ ಸಂಜೆ 6 ಗಂಟೆಯ ಮೊದಲು ಹಣ್ಣುಗಳನ್ನು ಸೇವಿಸಬೇಕು.

ರಾತ್ರಿಯ ಸಮಯದಲ್ಲಿ ಅಂದ್ರೆ ಸೂರ್ಯಾಸ್ತದ ನಂತರ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಇದರಿಂದ ನಮ್ಮ ದೇಹಕ್ಕೆ ಪೋಷಣೆ ದೊರೆಯುವುದಿಲ್ಲ,ಶೀತ ಕಫದ ತೊಂದರೆ ಎದುರಾಗಬಹುದು.

ಇನ್ನು ಊಟದ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದರಿಂದ ದೂರವಿರಬೇಕು ಯಾಕೆಂದರೆ ನಾವು ಸೇವಿಸಿದ ಆಹಾರ ಮತ್ತು ಹಣ್ಣುಗಳು ಜೀರ್ಣ ಕ್ರಿಯೆಗೆ ಗೊಂದಲವುಂಟು ಮಾಡುತ್ತದೆ ಇದರಿಂದಾಗಿ ಎರಡನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗೆ ಯಾವುದೇ ರೀತಿಯ ಪೋಷಕಾಂಶಗಳು ಕೂಡ ನಮ್ಮ ದೇಹಕ್ಕೆ ದೊರೆಯುವುದಿಲ್ಲ.

ನಾವೆಲ್ಲರೂ ಹಣ್ಣು ಸೇವಿಸಿದರೆ ಸೇವಿಸಿದ ಆಹಾರ ಜೀರ್ಣವಾಗುತ್ತದೆ ಎಂದು ಭಾವಿಸುತ್ತೇವೆ ,
ಇದೇ ಕಾರಣಕ್ಕೆ ಆಹಾರ ಸೇವಿಸಿದ ತಕ್ಷಣ ಹಣ್ಣನ್ನು ಸೇವಿಸುತ್ತೇವೆ ಈ ತಪ್ಪು ಮಾಡಬೇಡಿ.

ಆಹಾರ ಸೇವಿಸಿದ 30 ನಿಮಿಷಗಳ ನಂತರ ಹಣ್ಣನ್ನು ಸೇವಿಸಿದರೆ ನಮ್ಮ ಆರೋಗ್ಯಕ್ಕೆ ಉತ್ತಮ ಲಾಭ ದೊರೆಯುತ್ತದೆ.

ಇನ್ನು ಖಾಲಿ ಹೊಟ್ಟೆಗೆ ಹಣ್ಣನ್ನು ಸೇವಿಸಬಾರದು ,ಹೆಚ್ಚಾಗಿ ಹಣ್ಣುಗಳು ಆಮ್ಲೀಯ ಗುಣವನ್ನು ಹೊಂದಿರುತ್ತದೆ ಇದರಿಂದಾಗಿ ಹಣ್ಣುಗಳನ್ನು ಖಾಲಿ ಹೊಟ್ಟೆಗೆ ಸೇವಿಸಿದರೆ ಅಸಿಡಿಟಿ ಉಂಟಾಗಬಹುದು.

ಇನ್ನು ಹಣ್ಣುಗಳನ್ನು ಜ್ಯೂಸ್ ಮಾಡಿ ಕುಡಿಯುವ ಬದಲು ಹಾಗೆಯೇ ತಿಂದರೆ ಒಳ್ಳೆಯದು ಇದರಿಂದಾಗಿ ಹಣ್ಣುಗಳಲ್ಲಿರುವ ನಾರಿನ ಅಂಶ ನಷ್ಟವಾಗುವುದಿಲ್ಲ ಇದರಿಂದ ಜೀರ್ಣಕ್ರಿಯೆಯು ಉತ್ತಮವಾಗುತ್ತದೆ.

ಇನ್ನು ಹಣ್ಣುಗಳನ್ನು ಮಿಕ್ಸಿ ಜಾರಿಗೆ ಹಾಕಿ ಜ್ಯೂಸ್ ತಯಾರಿಸುವಾಗ ಅದರ ಬಿಸಿಗೆ ಹಣ್ಣಿನಲ್ಲಿರುವ ಕೆಲವು ಮುಖ್ಯ ಪೋಷಕಾಂಶಗಳು ನಷ್ಟವಾಗುತ್ತದೆ ಆದ ಕಾರಣ ಹಾಗೆ ಹಣ್ಣುಗಳನ್ನು ಜಗಿದು ತಿಂದರೆ ಉತ್ತಮ ಲಾಭ ನಮ್ಮ ದೇಹಕ್ಕೆ ಸಿಗುತ್ತದೆ.

ಹಣ್ಣುಗಳನ್ನು ಕತ್ತರಿಸಿ ಹಾಗೆಯೇ ಇಟ್ಟು ಬಿಡುವುದು ಸ್ವಲ್ಪ ಸಮಯದ ನಂತರ ಸೇವಿಸುವುದು,
ಈ ರೀತಿಯಾಗಿ ಮಾಡಲೇಬಾರದು ಯಾಕೆಂದರೆ ತುಂಬಾ ಸಮಯದ ಹಿಂದೆ ಕತ್ತರಿಸಿದ ಹಣ್ಣುಗಳು ಅದರ ಪೋಷಕಾಂಶಗಳನ್ನು ಕಳೆದುಕೊಂಡಿರುತ್ತದೆ.ಹಣ್ಣುಗಳನ್ನು ಕತ್ತರಿಸಿದ 20 ನಿಮಿಷಗಳ ಒಳಗೆ ಸೇವಿಸಬೇಕು ಇಲ್ಲವಾದಲ್ಲಿ ಹಣ್ಣುಗಳಿಂದ ಯಾವುದೇ ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ದೊರೆಯುವುದಿಲ್ಲ.

ಹೊಟ್ಟೆಯಲ್ಲಿರುವ ಮಗುವಿನ ಜೀವಸತ್ವಗಳ ಬೆಳವಣಿಗೆಗೆ ಹಣ್ಣುಗಳು ಸಹಕಾರಿ.

ಮಗುವಿನ ಮೂಳೆಗಳು ಹಲ್ಲುಗಳು ಆರೋಗ್ಯಕರವಾಗಿ ರೂಪುಗೊಳ್ಳಲು , ದೃಷ್ಟಿದೋಷವನ್ನು ನಿವಾರಿಸಲು , ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು , ನರವ್ಯೂಹದ ನರಳಿಕೆಯ ನ್ಯೂನ್ಯತೆಗಳನ್ನು ತಡೆಯಲು ಮತ್ತು ತೂಕವನ್ನು ಹೊಂದಲು ಹಣ್ಣುಗಳನ್ನು ಸೇವಿಸಬೇಕು.

ಗರ್ಭಿಣಿಯರಿಗೆ ಸಾಮಾನ್ಯವಾಗಿ ಕಾಡುವ ಮಲಬದ್ಧತೆ ನಿವಾರಿಸಲು ಈ ಹಣ್ಣುಗಳು ಬಹಳ ಸಹಾಯಕಾರಿ.ಹಿಪ್ಪು ನೇರಳೆಹಣ್ಣು ಮತ್ತು ಸ್ಟ್ರಾಬೆರಿಇವು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ.ಕಿತ್ತಳೆ , ಮೂಸಂಬಿ , ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ ಇದು ಮೂಳೆಗಳಿಗೆ ಶಕ್ತಿಯನ್ನು ಕೊಡುತ್ತದೆ.ಒಣ ಹಣ್ಣುಗಳು ಅಂದರೆ ಡ್ರೈ ಫ್ರೂಟ್ಸ್ಇವು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುವ ಇದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.ಇನ್ನು ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಅದರ ಪೋಷಕಾಂಶಗಳು ಸಂಪೂರ್ಣವಾಗಿ ಲಭಿಸುತ್ತವೆ.

ಸೇಬು

ದೊಡ್ಡ ಕರುಳಿನ ಕ್ಯಾನ್ಸರನ್ನು ತಡೆಯುತ್ತದೆ.ದೇಹಕ್ಕೆ ಬೇಕಾಗಿರುವ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ.

ದ್ರಾಕ್ಷಿ

ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ.

ಬಾಳೆಹಣ್ಣು

ಕಿಡ್ನಿಯ ತೊಂದರೆ ಮತ್ತು ಮಲಬದ್ಧತೆಯಂಥ ತೊಂದರೆ ಇರುವವರು ಪ್ರತಿದಿನ ಬಾಳೆಹಣ್ಣನ್ನು ಸೇವಿಸುವುದು ಉತ್ತಮ.

ಕಲ್ಲಂಗಡಿ ಹಣ್ಣು ಗಜ್ಜಿ ತುರಿಕೆಯಂಥ ತೊಂದರೆಗಳಿಗೆ ಉತ್ತಮ ಮತ್ತು ರಕ್ತವನ್ನು ವೃದ್ಧಿಸುತ್ತದೆ.

ಮಾವಿನ ಹಣ್ಣು

ನಿದ್ರಾಹೀನತೆ ಸಮಸ್ಯೆಯನ್ನು ದೂರ ಮಾಡಬಲ್ಲದು.ಅತೀವ ಪಿತ್ತಾ , ಮಲಬದ್ಧತೆ ಅಜೀರ್ಣ ದಂತಹ ಸಮಸ್ಯೆಗಳಿಗೆ ರಾಮಬಾಣ.

ದಾಳಿಂಬೆ ಹಣ್ಣು ಹಲ್ಲುಗಳ ಸುರಕ್ಷತೆಗೆ ಒಳ್ಳೆಯದು.ದಾಳಿಂಬೆಯಲ್ಲಿ ಖನಿಜಾಂಶಗಳು ಹೆಚ್ಚಾಗಿದ್ದು ಇದುನರ ದೌರ್ಬಲ್ಯದಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಮುರುಗಲು ಹಣ್ಣು

ಪಿತ್ತ ಸಮಸ್ಯೆಗೆ ಇದು ಬಹಳ ಸಹಾಯಕಾರಿ.

  • ಪಪ್ಪಾಯಿ ಹಣ್ಣು

ಇದರಲ್ಲಿ ವಿಟಮಿನ್ ಎ ಅಧಿಕವಾಗಿರುವುದರಿಂದ ಕಣ್ಣಿಗೆ ಮತ್ತು ಕಣ್ಣಿನ ಆರೋಗ್ಯಕ್ಕೆ ಬಹಳ ಸಹಕಾರಿ.

  • ಅಂಜೂರದ ಹಣ್ಣು

ಒತ್ತಡ , ಮಲಬದ್ಧತೆ ಮೂಲವ್ಯಾಧಿ ಅಂಥ ಸಮಸ್ಯೆಗಳಿಗೆ ರಾಮಬಾಣ.

  • ಖರ್ಜೂರ

ಜಂತುಹುಳ ಸಮಸ್ಯೆಗೆ ಮತ್ತು ಬೇಧಿ ಸಮಸ್ಯೆಗೆ ಬಹಳ ಒಳ್ಳೆಯದು.

  • ಅನಾನಸ್

ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಲ್ಲದೆ ದೇಹದ ಬೊಜ್ಜನ್ನು ಕರಗಿಸುತ್ತದೆ.

ಹೀಗೆ ಪ್ರತಿಯೊಂದು ಹಣ್ಣಿನಲ್ಲೂ ಒಂದೊಂದು ರೀತಿಯ ಪೋಷಕಾಂಶಗಳು ಖನಿಜಾಂಶಗಳು ಅಡಗಿವೆ ಆದ್ದರಿಂದ ಪ್ರತಿಯೊಂದು ಹಣ್ಣನ್ನೂ ತಿನ್ನಿ ಆರೋಗ್ಯವಾಗಿರಿ.

ಧನ್ಯವಾದಗಳು.

Leave a Reply

Your email address will not be published.