ವೃಷಭರಾಶಿಯವರ ಕಷ್ಟಗಳನ್ನು ದೂರ ಮಾಡುವ ಸರಳ ಪರಿಹಾರಗಳು!

0
14010

ವೃಷಭ ರಾಶಿಯವರ ಕಷ್ಟಗಳನ್ನು ದೂರ ಮಾಡಲು ಕೆಲವು ಸರಳ ಪರಿಹಾರವನ್ನು ಅನುಸರಿಸಿದರೆ ನೀವು ನಿಮ್ಮ ಕಷ್ಟಗಳಿಂದ ದೂರಾಗಬಹುದು. ನಿಮ್ಮ ಕಷ್ಟ ಏನೇ ಇರಲಿ ನಿಮ್ಮ ಅನುಕೂಲಕ್ಕೆ ತಕ್ಕಹಾಗೆ ಅಗತ್ಯವಿರುವ ಬಡವರಿಗೆ ಹಣವನ್ನಾದರೂ, ಅನ್ನವನ್ನು ನಿಸ್ವಾರ್ಥವಾಗಿ ದಾನ ಮಾಡಿ.

ಇದರಿಂದ ನಿಮ್ಮ ದಾರಿದ್ರ ದೂರವಾಗುತ್ತದೆ. ಬೇಡಿ ಬರುವವರನ್ನು ಬರಿಗೈಯಲ್ಲಿ ಕಳಿಸಬೇಡಿ. ಕೈಲಾದಮಟ್ಟಿಗೆ ಸಹಾಯವನ್ನು ಮಾಡಿ.ನಿಮ್ಮ ಬದುಕು ಶ್ರೀಮಂತವಾಗುತ್ತದೆ.ಜೀನ್ಸ್ ಅಂತಹ ಒರಟು ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಸದಾಕಾಲ ರೇಷ್ಮೆ, ನೈಲಾನ್ ಮೃದುವಾದ ಬಟ್ಟೆಗಳನ್ನು ಧರಿಸಿ.

ನೀವು ಧರಿಸುವ ಬಟ್ಟೆಗಳಿಗೆ ಸುಗಂಧ ದ್ರವ್ಯಗಳನ್ನು ಲೇಪಿಸಿ. ಸುತ್ತಲಿರುವ ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸಿ ನಿಮ್ಮ ಜೀವನ ಮಟ್ಟವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಚಪ್ಪಲಿಗಳನ್ನು ಖರೀದಿ ಮಾಡಬೇಡಿ.

ಇದರಿಂದ ದುರದೃಷ್ಟ ಉಂಟಾಗುತ್ತದೆ. ಅಗತ್ಯ ಇರುವ ಬಿಕ್ಷುಕರಿಗೆ ಚಪ್ಪಲಿಗಳನ್ನು ದಾನಮಾಡಿ. ವೃಷಭ ರಾಶಿಯವರು ತಮ್ಮ ಬಾಳಸಂಗಾತಿಯನ್ನು ಹೊರತುಪಡಿಸಿ ಬೇರೆ ಅನೈತಿಕ ಸಂಬಂಧ ಹೊಂದಿದ್ದಾರೆ ಬೇಗನೆ ಅದರಿಂದ ಹೊರಬಂದರೆ ಒಳ್ಳೆಯದು. ಇಲ್ಲವಾದರೆ ಸಮಾಜದಲ್ಲಿ ಅವಮಾನ ಆಗುವ ಸಾಧ್ಯತೆ ಇದೆ.ತೀವ್ರ ಆರ್ಥಿಕ ಸಮಸ್ಯೆ ಕೂಡ ಉಂಟಾಗುತ್ತದೆ. ಆದ್ದರಿಂದ ಅನೈತಿಕ ಸಂಬಂಧದಿಂದ ದೂರ ಇರುವುದು ಒಳ್ಳೆಯದು.

ವೃಷಭ ರಾಶಿ ಹೆಂಡತಿಯಾದವಳು ಮನೆಯ ಹಿಂಭಾಗದಲ್ಲಿ ನೀಲಿ ಬಣ್ಣದ ಹೂಗಳನ್ನು ಉರಿಯುವ ಬೆಂಕಿಯಲ್ಲಿ ಹಾಕಿ ಸುಟ್ಟಿದರೆ ದಂಪತಿಗಳ ನಡುವಿನ ಮುನಿಸು, ಅಸಮಾಧಾನ ಮಾಯವಾಗಿ ದಂಪತಿಗಳ ನಡುವೆ ಹೊಂದಾಣಿಕೆ ಅನ್ಯೋನ್ಯತೆ ಮೂಡುತ್ತದೆ. ಸಾಧ್ಯವಾದರೆ ಹಸುವನ್ನು ದಾನ ಮಾಡಿ ನಿಮ್ಮ ಇಷ್ಟಾರ್ಥ ನೆರವೇರುತ್ತದೆ.ಈ ಎಲ್ಲಾ ಸರಳ ಪರಿಹಾರವನ್ನು ಪಾಲಿಸಿದರೆ ಜೀವನ ಚೆನ್ನಾಗಿರುತ್ತದೆ.

LEAVE A REPLY

Please enter your comment!
Please enter your name here