ಮೆಡಿಕಲ್ ಆಕ್ಸಿಜನ್ ಹೇಗೆ ತಯಾರಿಸುತ್ತಾರೆ?ಯಾಕಿಷ್ಟು ದುಬಾರಿ ಗೋತ್ತಾ?

Health & Fitness

ಕಾರೋನದ 2 ನೇ ಅಲೆ ಇವತ್ತಿನ ಪರಿಸ್ಥಿತಿಯನ್ನು ಯಮ ಭೀಕರವಾಗಿಸಿದೆ. ಉಸಿರಾಟದ ಏರುಪೇರು ಹಾಗೂ ಉಸಿರಾಟಕ್ಕೆ ತೊಂದರೆಯಾಗುವುದು ಈ ರೋಗದ ಬಹು ಲಕ್ಷಣ.ಪ್ರತಿದಿನ ಲಕ್ಷಕ್ಕೂ ಹೆಚ್ಚು ಸೋಂಕಿಗೆ ಒಳಗಾಗುತ್ತಿದ್ದಾರೆ. ಸಾವಿರ ಜನ ಪ್ರತಿದಿನ ಸಾಯುತ್ತಿದ್ದಾರೆ ಹಾಗೂ ಸಾವಿರಾರು ಜನ ಹಾಸ್ಪಿಟಲ್ ಗೆ ಸೇರುತ್ತಿದ್ದಾರೆ. ಭಾರತದಲ್ಲಿ ಸೂಕ್ತ ಆಕ್ಸಿಜನ್ ಸಿಗುತ್ತಿಲ್ಲ. ಯಾವುದೇ ಆಸ್ಪತ್ರೆಗೆ ಹೋದರೂ ಆಕ್ಸಿಜನ್ ಹಾಗು ವೆಂಟಿಲೇಟರ್, ಬೆಡ್ ಸಿಗದೇ ಸಾವಿರಾರು ಜನರು ಸಾಯುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಹಿಂದಿನಿಂದಲೂ ಆಕ್ಸಿಜನ್ ಗೋಸ್ಕರ ಲೈನ್ ನಲ್ಲಿ ನಿಂತುಕೊಳ್ಳುವುದು ಸಾಮಾನ್ಯವಾಗಿದೆ. ಭಾರತ ಮಾತ್ರವಲ್ಲದೆ ಇಡೀ ಜಗತ್ತೇ ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿದೆ. ವರದಿಗಳ ಪ್ರಕಾರ 25ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಕ್ಸಿಜನ್ ಕೊರತೆಯಿದೆ. ಆಕ್ಸಿಜನ್ ಹೇಗೆ ತಯಾರಿಸುತ್ತಾರೆ ಎಂದು ಮೊದಲು ಎಲ್ಲರು ತಿಳಿದುಕೊಳ್ಳಬೇಕು.

ಭೂಮಿಯ ಮೇಲೆ ಮತ್ತು ಅದರ ವಾತಾವರಣ ಮೇಲ್ಮೈ ಸುತ್ತಲೂ ಅನೇಕ ಅನಿಲಗಳು ತೇಲಾಡುತ್ತಾದೆ. ವೈಜ್ಞಾನಿಕವಾಗಿ ಇದರಲ್ಲಿ ಶೇಕಡಾ 78% ನೈಟ್ರೋಜನ್ ಮತ್ತು ಶೇಕಡಾ 21 ರಷ್ಟು ಮಾತ್ರ ಆಕ್ಸಿಜನ್ ಪ್ರಮಾಣ ಇರುತ್ತದೆ.ಇನ್ನು ಉಳಿದ ಶೇಕಡಾ ಒಂದರಲ್ಲಿ ಕಾರ್ಬನ್ ಡಯಾಕ್ಸೈಡ್ ಹಾಗೂ ಹೈಡ್ರೋಜನ್ ಅನಿಲಗಳ ಮಿಶ್ರಣ ಇರುತ್ತದೆ. ಸಾಮಾನ್ಯವಾಗಿ ಎಲ್ಲರೂ ಉಸಿರಾಡುವುದು ಇದನ್ನೇ. ಆರೋಗ್ಯವಂತ ವ್ಯಕ್ತಿಗೆ ಇಷ್ಟು ಸಾಕು ಆದರೆ ಉಸಿರಾಟ ತೊಂದರೆ ಇರುವ ವ್ಯಕ್ತಿ ಮತ್ತು ಅಸ್ತಮಾ ಸಮಸ್ಯೆ ಇರುವ,ಕೋವಿಡ್ ಸೋಂಕು ಇರುವ ರೋಗಿಗಳಿಗೆ 21% ಆಕ್ಸಿಜನ್ ಸಾಕಾಗುವುದಿಲ್ಲ. ಅವರಿಗೆ ಉಸಿರಾಡುವುದಕ್ಕೆ ಶುದ್ಧ ಆಕ್ಸಿಜನ್ ಬೇಕು.

ವಾತಾವರಣದ ಗಾಳಿಯನ್ನು ಸೋಸಿ ಅದರಲ್ಲಿರುವ ಅನಗತ್ಯ ಅನಿಲಗಳನ್ನು ಬೇರ್ಪಡಿಸಿ ಶುದ್ಧ ಆಕ್ಸಿಜನ್ ಅಂಶವನ್ನು ಮಾತ್ರವೆ ಸಂಗ್ರಹಿಸಿ ಕಂಟೈನರ್ ಗಳ ನಿರ್ಧಿಷ್ಟ ಬಾಯ್ಲಿಂಗ್ ಪಾಯಿಂಟ್ ಗಳಲ್ಲಿ ಡಿಸ್ಟೆಲ್ ಮಾಡಲಾಗುತ್ತದೆ.ಇದಕ್ಕೆ ಕ್ರಾಯೋಜಿನಿಕ್ ಏರ್ ಡಿಸ್ಟಿಲೇಷನ್ ಅಂತ ಕರೆಯುತ್ತಾರೆ.

ಮೊದಲು ವಾತಾವರಣ ಗಾಳಿಯನ್ನು ಏರ್ ಫಿಲ್ಟರ್ ಕಂಟೈನರ್ ನಲ್ಲಿ ಸೂಸಿ.ಈ ರೀತಿ ಮಾಡುವುದರಿಂದ ಅದರಲ್ಲಿರುವ ಡಸ್ಟ್, ತ್ಯಾಜ್ಯ ವಸ್ತುಗಳು ಬೇರ್ಪಟ್ಟು ಸ್ವಚ್ಛ ಗಾಳಿ ಮುಂದಿನ ಕಂಪ್ರೆಸರ್ ಕಂಟೇನರ್ ನಲ್ಲಿ ಸಂಗ್ರಹವಾಗುತ್ತದೆ.ಇದರಲ್ಲಿ ಇನ್ಲೆಟ್ ವಾಲ್ವ ಹಾಗೂ ಡಿಸ್ಚಾರ್ಜ್ ವಾಲ್ವ ಎಂಬ ಓಪನಿಂಗ್ ಇರುತ್ತವೆ.

ಮೊದಲು ಸೋಸಿದ ಗಾಳಿಯನ್ನು ಇನ್ಲೆಟ್ ಮೂಲಕ ಒಳಗೆ ಎಳೆದುಕೊಳ್ಳುತ್ತದೆ ನಂತರ ಅದರಲ್ಲಿ ಇರುವ ಪಿಸ್ಟನ್ ಹೈ ಪ್ರೆಶರ್ ಮೂಲಕ ಸಂಗ್ರಹ ಮಾಡಿದ ಗಾಳಿಯನ್ನು ಕಂಪ್ರೆಸ್ ಮಾಡಿದಾಗ ಅದರಲ್ಲಿ ಶಾಖ ಏರ್ಪಟ್ಟು ಬಿಸಿಯಾದ ಗಾಳಿ ಡಿಸ್ಚಾರ್ಜ್ ವಾಲ್ವ ಮೂಲಕ ಬಿಡುಗಡೆಯಾಗುತ್ತದೆ. ಈಗ ಬಿಸಿಯಾದ ಗಾಳಿಯನ್ನು ಕೂಲ್ ಮಾಡುವುದಕ್ಕೆ ಫ್ರಿಝಿನ್ಗ್ ಯೂನಿಟ್ ಗೆ ವರ್ಗಾಯಿಸಲಾಗುತ್ತದೆ.

ಅಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಸಿ 196° ಕೊಲಿಂಗ್ ಬಿಂದುವಿನಲ್ಲಿ ಆ ಗಾಳಿಯನ್ನು ಕೂಲ್ ಆಗಿ ಮಾಡುತ್ತದೆ. ಲಿಕ್ವಿಡ್ ನೈಟ್ರೋಜನ್ ಗಾಳಿಯಲ್ಲಿ ಬೆರಸಲಾಗುವುದಿಲ್ಲ. ಬಿಸಿ ಗಾಳಿ ಹೊರಗೆ ಹೋಗುವ ಕಾಯಿಲ್ ಕ್ಯೂಬ್ ಪೈಪ್ ಗೆ ಈ ನೈಟ್ರೋಜನ್ ಲಿಕ್ವಿಡ್ ಅನ್ನು ತಗುಲಿಸಲಾಗುತ್ತದೆ. ಅದು ಒಳಗಿನ ಗಾಳಿಗೆ ಬಯ್ಯವಾಗಿ ವರ್ತಿಸಿ ಅದನ್ನು -200° c ವರೆಗೂ ಕೂಲ್ ಮಾಡುತ್ತದೆ.

ಹೀಗೆ ತಣ್ಣ ಅದ ಗಾಳಿಯನ್ನು ಮುಂದೆ ಸಪರೇಟರ್ ಗೆ ಕಳುಹಿಸಲಾಗುತ್ತದೆ. ಅಲ್ಲಿ ಗಾಳಿಯಲ್ಲಿ ಇರುವ ಕಾರ್ಬನ್ ಡೈ ಆಕ್ಸೈಡ್ ಅನ್ನು ಡ್ರೈ ಐಸ್ ರೂಪದಲ್ಲಿ ಬೇರ್ಪಡಿಸಲಾಗುತ್ತದೆ. ಕಾರ್ಬನ್ ಡೈಯಾಕ್ಸೈಡ್ ನಿಂದ ಬೇರ್ಪಟ್ಟ ಗಾಳಿಯನ್ನು ಮುಂದೆ ಎಕ್ಸ್ಟೆಂಶನ್ ಟರ್ಬೈನ್ ಗೆ ಕಳುಹಿಸಲಾಗುತ್ತದೆ.ಇಲ್ಲಿ ಗಾಳಿಯನ್ನು ಇಗ್ಗಿಸಲಾಗುತ್ತದೆ.ಹೀಗೆ ಮಾಡಿದಾಗ ಅಲ್ಲಿ ಅನಿಲ ದ್ರವ್ಯ ರೂಪವನ್ನು ಪಡೆದು ಅದು ಲಿಕ್ವಿಫ್ಇಡ್ ಆಗಿ ಗಾಳಿಯಾಗಿ ಬದಲಾಗುತ್ತದೆ.

ಹೀಗೆ ಲಿಕ್ವಿಫ್ಇಡ್ ಅದ ತಣ್ಣನೆ ಗಾಳಿಯನ್ನು ಮುಂದೆ ಬೃಹತ್ ಏರ್ ಡಿಸ್ಟಿಲೇಷನ್ ಕಾಲಂಗೆ ಸಾಗಿಸಲಾಗುತ್ತದೆ. ಇಲ್ಲಿ ತಣ್ಣ ಆದ ಗಾಳಿಯನ್ನು ಸ್ವಲ್ಪ ಬಿಸಿ ಮಾಡಿ ಇದರ ಮೂಲಕ ಅದರಲ್ಲಿರುವ ನೈಟ್ರೋಜನ್,ಆರ್ಗಾನ್ ಹಾಗೂ ಕಲುಷಿತ ಆಕ್ಸಿಜನ್ ಅಂಶಗಳು ಸಪರೇಟ್ ಆಗುತ್ತವೆ.ಇಲ್ಲಿ 196° ಯಲ್ಲಿ ಬಿಸಿ ಮಾಡಿದಾಗ ಮೊದಲು ಅದರ ನೈಟ್ರೋಜನ್ ಬೇರ್ಪಡುತ್ತದೆ.ನಂತರ 186° ಕುಸಿದಾಗ ಆರ್ಗಾನ್ ಬೇರ್ಪಡುತ್ತದೆ ಹಾಗೂ 185° ಯಲ್ಲಿ ಶುದ್ಧ ಆಕ್ಸಿಜನ್ ಉಳಿಯುತ್ತದೆ.

ಇಲ್ಲಿ ಬೇರ್ಪಟ್ಟ ನೈಟ್ರೋಜನ್ ಅನ್ನು ಐರನ್ ಹಾಗೂ ಸ್ಟೀಲ್ ಅನೇಕ ಕೈಗಾರಿಕಾ ಉದ್ದೇಶಗಳಿಗೆ ರಫ್ತು ಮಾಡಲಾಗುತ್ತದೆ ಮತ್ತು ಆರ್ಗನ್ ಅನ್ನು ಫರ್ಟಿಲೈಸರ್ ಹಾಗೂ ಫುಡ್ ಪ್ಯಾಕೇಜಿಂಗ್ ಇಂಡಸ್ಟ್ರಿಯಲ್ ಗಳಿಗೆ ಮಾರಾಟಮಾಡಲಾಗುತ್ತದೆ.

ಇದರ ಡಿಸ್ಟೆಲ್ ಕೇಳಭಾಗದಲ್ಲಿ ಉಳಿದ ಪ್ಯೂರ್ ಲಿಕ್ವಿಡ್ ಆಕ್ಸಿಜನ್ ಅನ್ನು ಸಂಗ್ರಹಿಸಿ ಅಲ್ಯುಮಿನಿಯಂ ಸಿಲೆಂಡರ್ ಹಾಗೂ ಕ್ರಾಯೋಜೇನಿಕ್ ಸಿಂತೆಟಿಕ್ ಕ್ಯಾನ್ ಗಳಲ್ಲಿ ಸಂಗ್ರಹಿಸಲಾಗುತ್ತದೆ. ಈ ರೀತಿ ಸಂಗ್ರಹವಾದ ಲಿಕ್ವಿಡ್ ಆಕ್ಸಿಜನ್ ನ ಶುದ್ಧ ಪ್ರಮಾಣ ಶೇಕಡಾ 93 ರಿಂದ 94% ವರೆಗೂ ಇರುತ್ತೆ.

ಪ್ರತಿ 1ಲೀಟರ್ ಗಾಳಿಯಿಂದ 300 ಮಿಲಿ ಲೀಟರ್ ಕಡಿಮೆ ಪ್ರಮಾಣದ ಶುದ್ಧ ಲಿಕ್ವಿಡ್ ಆಕ್ಸಿಜನ್ ಅನ್ನು ತಯಾರಿಸಬಹುದು.ಈ ರೀತಿ ಸಂಗ್ರಹ ಆಗುವ ಆಕ್ಸಿಜನ್ ಕ್ಯಾನ್ ಗಳು ಹತ್ತಾರು ಬಗೆಯಲ್ಲಿ, ಗಾತ್ರದಲ್ಲಿ ಮಾರಾಟವಾಗುತ್ತವೆ. ಅತ್ಯಂತ ದೊಡ್ಡ ಇರುವ ಆಕ್ಸಿಜನ್ 1.5 ಮೀಟರ್ ಎತ್ತರವಿದ್ದು ಸುಮಾರು 60 ಕೆಜಿ ಲಿಕ್ವಿಡ್ ಆಕ್ಸಿಜನ್ ಹೊಂದಿರುತ್ತದೆ.ಅಂದರೆ ಒಟ್ಟು 7800 ಲೀಟರ್ ಅಷ್ಟು ಆಕ್ಸಿಜನ್ ಇರುತ್ತದೆ.

ಕರೋನ ರೋಗಿಗೆ ಪ್ರತಿ ನಿಮಿಷ ಸುಮಾರು 130 ಲೀಟರ್ ಆಕ್ಸಿಜನ್ ಉಸಿರಾಡುವುದಕ್ಕೆ ಬೇಕು.ಹೀಗೆ ನಿಮಗೆ ತಿಳಿಯುತ್ತದೆ ಭಾರತದಲ್ಲಿ ಯಾಕೆ ಇಷ್ಟು ಆಕ್ಸಿಜನ್ ಕೊರತೆ ಇದೆ. ಆಕ್ಸಿಜನ್ ತಯಾರಿಸುವುದಕ್ಕೆ ತುಂಬಾ ಸಮಯ ಬೇಕಾಗುತ್ತದೆ. ಇಲ್ಲಿಯವರೆಗೂ ಭಾರತದಲ್ಲಿ ಆಕ್ಸಿಜನ್ ಕೇಂದ್ರಗಳ ಸಂಖ್ಯೆ 162 ಆದರೆ ಇಲ್ಲಿಯವರೆಗೂ ಭಾರತಾದ್ಯಂತ ನಿರ್ಮಿಸಲಾಗಿರುವ ಬಳಕೆಯಲ್ಲಿರುವ ಆಕ್ಸಿಜನ್ ಪ್ಲಾಂಟ್ ಗಳು ಕೇವಲ 33 ಮಾತ್ರ.ಇನ್ನು ಮಿಕ್ಕಿದ ಪ್ಲಾಂಟ್ ಗಳು ಮೇ ಯಾಲ್ಲಿ ಕೆಲಸ ಶುರು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.