ಮೇಷರಾಶಿಯವರ ಕಷ್ಟಗಳನ್ನು ದೂರ ಮಾಡುವ ಸರಳ ಪರಿಹಾರಗಳು

Featured-Article

ಮೇಷ ರಾಶಿಯವರು ಕಷ್ಟಗಳನ್ನು ದೂರಮಾಡಲು ಕೆಲವು ಸರಳ ಪರಿಹಾರವನ್ನು ಅನುಸರಿಸಿದರೆ ಸಾಕು. ನಾನಾ ಕಾರಣಗಳಿಂದ ಯಾರಿಗಾದರೂ ಉಡುಗೊರೆ ಕೊಡುತ್ತೀರಾ ಹಾಗೂ ನಿಮಗೂ ಯಾರಾದರೂ ಉಡುಗೊರೆ ಕೊಟ್ಟಿದ್ದಾರೆ ಅದನ್ನು ಉಚಿತವಾಗಿ ತೆಗೆದುಕೊಳ್ಳಬೇಡಿ.

ಉಚಿತವಾಗಿ ತೆಗೆದುಕೊಳ್ಳುವುದು, ದಾನವಾಗಿ ಪಡೆದುಕೊಳ್ಳುವುದು ಯಾರದೋ ಪಾಪಗಳನ್ನು ಹೊತ್ತುಕೊಂಡ ಹಾಗೆ.ಇದರಿಂದ ಕಷ್ಟ-ನಷ್ಟಗಳನ್ನು ತಂದುಕೊಡಬಹುದು.ನಿಮಗೆ ಯಾರಾದರೂ ಉಡುಗೊರೆ ಕೊಟ್ಟರೆ ಪ್ರತಿ ಉಡುಗೊರೆಯನ್ನು ಅಥವಾ ಸಣ್ಣ ಪ್ರಮಾಣದ ಹಣವನ್ನು ಕೊಟ್ಟು ತೆಗೆದುಕೊಳ್ಳಿ. ಈ ರೀತಿ ಮಾಡುವುದರಿಂದ ನಿಮಗೆ ಆಗುವ ತೊಂದರೆಗಳನ್ನು ತಪ್ಪಿಸಿಕೊಳ್ಳಬಹುದು.

ವಿಶೇಷ ಸಂದರ್ಭದಲ್ಲಿ ಅಥವಾ ವ್ಯವಹಾರ ಮಾತುಕತೆಗೆ ಹೋಗುವಾಗ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ.ಕೆಂಪು ಬಣ್ಣದ ಬಟ್ಟೆ ಇಲ್ಲದಿದ್ದರೆ ಕೆಂಪುಬಣ್ಣದ ಕರವಸ್ತ್ರವನ್ನು ತೆಗೆದುಕೊಂಡು ಹೋಗಿ. ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ ಹಾಗೂ ವ್ಯವಹಾರ ಯಶಸ್ವಿಯಾಗುತ್ತದೆ.

ಸಿಹಿತಿನಿಸುಗಳ ಉದ್ಯಮ ನಿಮಗೆ ಆಗಿಬರುವುದಿಲ್ಲ. ಸಿಹಿ ತಿನಿಸುಗಳ ಅಂಗಡಿಯಲ್ಲಿ ಉದ್ಯೋಗ ಮಾಡುವುದು ನಿಮಗೆ ದುರಾದೃಷ್ಟವನ್ನು ತಂದುಕೊಡುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ನಿಂಬೆಹಣ್ಣಿನ ಗಿಡವನ್ನು ಬೆಳೆಸಬಾರದು.

ಪುರುಷರು ಬೆಳ್ಳಿಯ ಕಡಗವನ್ನು ಧರಿಸುವುದರಿಂದ ನಿಮಗೆ ಶುಭವಾಗುತ್ತದೆ. ಮಹಿಳೆಯರು ಬೆಳ್ಳಿಯಲ್ಲಿ ಮಾಡಿದ ಬಳೆ ಅಥವಾ ಕಂಕಣವನ್ನು ಧರಿಸುವುದು ನಿಮಗೆ ಶುಭಫಲಗಳನ್ನು ತಂದುಕೊಡುತ್ತದೆ. ಸಾಧ್ಯವಾದರೆ ನಿಮ್ಮ ತಾಯಿಯನ್ನು ಸಂತೋಷವಾಗಿ ಇರುವಂತೆ ನೋಡಿಕೊಳ್ಳಿ.

ಕಷ್ಟದಲ್ಲಿ ಇರುವವರಿಗೆ ಸಹಾಯವನ್ನು ಮಾಡಿ ಹಾಗೂ ಹಿರಿಯರ ಸೇವೆ ಮಾಡಿ. ರಾತ್ರಿ ಮಲಗುವ ಮುಂಚೆ ಒಂದು ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ತಲೆಯ ಭಾಗದಲ್ಲಿ ಇಟ್ಟು ಮುಂಜಾನೆ ಎದ್ದು ಯಾವುದಾದರೂ ಗಿಡಕ್ಕೆ ಸುರಿಯಿರಿ. ಹೀಗೆ ಮಾಡುವುದರಿಂದ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ

Leave a Reply

Your email address will not be published.