ಚೀನಿ ವೈರಸ್ ವಿರುದ್ಧ ಹೋರಾಡಲು ವಿಟಮಿನ್ ಡಿ ಎಷ್ಟು ಸಹಾಯ ಮಾಡುತ್ತದೆ ಗೊತ್ತಾ ?
ಕೊರೊನಾದ ಎರಡನೇ ಅಲೆ ಬಹಳ ಭೀಕರವಾಗಿದೆ ಇದರಿಂದ ಅನೇಕರು ನಲುಗಿ ಹೋಗಿದ್ದಾರೆ
ಆದ್ದರಿಂದ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಡಿ ಕೂಡ ಅಗತ್ಯವಾಗಿರುತ್ತದೆ.ಇನ್ನು ವಿಟಾಮಿನ್ ಡಿ ಯಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂಬುದನ್ನು ವೈಜ್ಞಾನಿಕವಾಗಿ ತಿಳಿಯೋಣ.
ವಿಟಮಿನ್ ಡಿ
ವಿಟಮಿನ್ ಡಿ ದೊರೆಯುವ 1ಬಗೆಯದಾದರೆ ಅದು ಸೂರ್ಯನ ಬೆಳಕು.
1 ಸಾವಿರ ಇಂಟರ್ನ್ಯಾಷನಲ್ ಯೂನಿಟ್ ಅನ್ನು ಸೇವಿಸುವುದು ಅಥವಾ ವಾರದಲ್ಲಿ ಒಮ್ಮೆಯಾದರೂ ವಿಟಮಿನ್ ಡಿ ಸಪ್ಲಿಮೆಂಟ್ ಸೇವಿಸುವುದು.ವಿಟಮಿನ್ ಡಿ ಯ ಬಗ್ಗೆ 1 ಆ್ಯಪ್ ನ ಮೂಲಕ ರಿಸರ್ಚ್ ಮಾಡಲಾಗಿತ್ತು.ಇದರಲ್ಲಿ 4.5 ಲಕ್ಷ ಜನರು ಪಾಲ್ಗೊಂಡಿದ್ದರು ಹಾಗೂ ಇದರಿಂದ ಅವರು ಏನನ್ನು ಕಂಡುಹಿಡಿದದ್ದು ಏನು ಎಂದು ನೋಡುವುದಾದರೆ ಈ 4.5 ಲಕ್ಷ ಜನರನ್ನು 2ಭಾಗಗಳಾಗಿ ಮಾಡಿ ,2.25 ಲಕ್ಷ ಮತ್ತು 2.25 ಲಕ್ಷ ಜನರ 2 ಭಾಗ ಮಾಡಿದ್ದರು.
ಅದರಲ್ಲಿ 1 ಗುಂಪಿಗೆ ವಿಟಮಿನ್ ಡಿ ಮತ್ತು ಒಮೆಗಾ ತ್ರಿ ಸಪ್ಲಿಮೆಂಟ್ ಅನ್ನು ನೀಡಿದರು ಮತ್ತು ಇನ್ನೊಂದು ಗುಂಪಿಗೆ ಯಾವುದೇ ರೀತಿಯ ಸಪ್ಲಿಮೆಂಟ್ ಟನ್ನು ನೀಡಿರುವುದಿಲ್ಲ.ಆಗ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದ ಗುಂಪಿಗೆ ಕೋವಿಡ್ ಲಕ್ಷಣಗಳು ಕಡಿಮೆಯಾಗುತ್ತಾ ಬಂದಿತ್ತು ಮತ್ತು ಇನ್ ಫೆಕ್ಷನ್ ಬರದ ಹಾಗೆ ವಿಟಮಿನ್ ಡಿ ತಡೆದಿತ್ತು ಆದರೆ ಯಾವುದೇ ಸಪ್ಲಿಮೆಂಟನ್ನು ತೆಗೆದುಕೊಳ್ಳದಿದ್ದ ಗುಂಪಿಗೆ ರೋಗ ಲಕ್ಷಣಗಳು ಹೆಚ್ಚಾಗಿ ಕಂಡುಬಂತು.
1 ಅತ್ಯುತ್ತಮ ಔಷಧಿಯೆಂದರೆ ವಿಟಮಿನ್ ಡಿ ಯನ್ನು ತೆಗೆದುಕೊಳ್ಳುವುದು.ಯಾವುದೇ ರೀತಿಯ ವೈರಲ್ ಇನ್ ಫೆಕ್ಷನ್ ನಿಂದ ದೂರ ಉಳಿಯಲು ಸೂರ್ಯನ ಬೆಳಕಿಗೆ ಮಯ್ಯೊಡ್ಡುವುದು ಅತ್ಯಗತ್ಯವಾಗಿದೆ.ಇನ್ನು
ಮೂಳೆ ಗಟ್ಟಿಯಾಗಲು ವಿಟಮಿನ್ ಡಿ ಅತ್ಯಾವಶ್ಯಕ,ಇದರ ಕೊರತೆಯಿಂದ ಮೂಳೆಯ ಶಕ್ತಿ ಕುಂದುತ್ತದೆ.ಶೇ 70 ರಷ್ಟು ಮೂಳೆ ಮುರಿದ ರೋಗಿಗಳಲ್ಲಿ ವಿಟಮಿನ್ ಡಿ ಕೊರತೆ ಕಾರಣ .ಮಕ್ಕಳಲ್ಲಿ
ರಿಟೆಕ್ಸ್ ಮತ್ತು ದೊಡ್ಡವರಲ್ಲಿ ಆಸ್ಟಿಯೋ ಮೈಲಾಸಿಯಾ ಎಂಬ ರೋಗಗಳು ಕಾಣಿಸಿಕೊಳ್ಳುತ್ತವೆ ಇದರಿಂದ
ಮೂಳೆನೋವು ಮತ್ತು ಮೂಳೆ ಸವೆತ ಹೆಚ್ಚಾಗುವುದು.
ಸೂರ್ಯನ ಬಿಸಿಲು ಬೀಳದೆ ಇರುವುದು, ಸೂರ್ಯನಿಗೆ ಸಾಕಷ್ಟು ಮೈಯೊಡ್ಡದಿರುವುದು, ಮೈಯನ್ನು ಸೂರ್ಯನಿಗೆ ತೋರದೆ ಮುಚ್ಚಿಕೊಳ್ಳುವುದು, ಸನ್ ಸ್ಕ್ರೀಮ್ ಬಳಸುವುದು , ಮೈತುಂಬ ಮುಚ್ಚಿಕೊಂಡಿರುವುದು , ಸನ್ ಸ್ಕ್ರೀಮ್ ಹಚ್ಚಿಕೊಳ್ಳುವುದರಿಂದ ಸೂರ್ಯನ ಕಿರಣಗಳು ಮೈಮೇಲೆ ಬೀಳುವುದಿಲ್ಲ.
ಕಪ್ಪು ಚರ್ಮ ಹೊಂದಿದವರಲ್ಲಿ ಮೆಲನಿನ್ ಎನ್ನುವ ಬಣ್ಣ ಕಾರಕ ವಸ್ತುವು ಹೆಚ್ಚಿದ್ದು ಅದು ಸೂರ್ಯನಿಂದ ಹೊರಹೊಮ್ಮುವ ಅಲ್ಟ್ರಾ ವೈಲೆಟ್ ಬಿ ಕಿರಣಗಳಿಂದ ಚರ್ಮವನ್ನು ರಕ್ಷಿಸುವುದು.
ಪರಿಸರ ಮಾಲಿನ್ಯ , ಮೋಡ ಕವಿದ ವಾತಾವರಣಗಳು ಸೂರ್ಯನಿಂದ ಬರುವ ಅಲ್ಟ್ರಾ ವೈಲೆಟ್ ಕಿರಣಗಳನ್ನು ನಮಗೆ ದೊರೆಯದಂತೆ ಮಾಡುತ್ತದೆ.
ಒತ್ತಡ ಯುಕ್ತ ಜೀವನಶೈಲಿ ವಿಟಮಿನ್ ಡಿ ಇಲ್ಲದ ಆಹಾರ ಸೇವನೆ ಕೂಡ ಕಾರಣ ಆಗುತ್ತದೆ.ಅತಿಯಾದ ಕೆಲಸ ಸದಾ ಒತ್ತಡದ ನಡುವೆ ಜನರು ಸೂರ್ಯನನ್ನು ನೋಡುವುದೇ ಅಪರೂಪವಾಗಿದೆ .ಅಂತಹ ಪರಿಸ್ಥಿತಿಯಲ್ಲಿ ವಿಟಮಿನ್ ಡಿ ಕೊರತೆಯು ಜನರ ಮೇಲೆ ವೇಗವಾಗಿ ಆಕ್ರಮಣ ಮಾಡುತಿದೆ, ಇದರಿಂದಾಗಿ ಜನರು ಕಿರಿಕಿರಿ ಮತ್ತು ಆಯಾಸದ ಬಗ್ಗೆ ದೂರು ನೀಡುತ್ತಲೇ ಇರುತ್ತಾರೆ.
ದೇಹದ ಹಲವು ಭಾಗಗಳಲ್ಲಿ ನೋವು ಸಾಮಾನ್ಯವಾಗಿ ಮೈ ಕೈ ನೋವು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿದೆ.ನಿಮಗೂ ಆಗಾಗ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕೆ ವಿಟಮಿನ್ ಡಿ ಕೊರತೆ ಕಾರಣವಾಗಿರಬಹುದು.ಅದೇ ರೀತಿಯಲ್ಲಿ ತಡವಾಗಿ ಗಾಯ ಗುಣವಾಗುವುದು ,ಮೈಕೈ ನೋವು , ಆಯಾಸ ಇವುಗಳು ಕೂಡ ವಿಟಮಿನ್ ಡಿ ಕೊರತೆಯ ಲಕ್ಷಣ .
ನಿಮಗೆ ತಿಳಿದಿರಲಿ ಶೇಕಡಾ 80 ರಷ್ಟು ವಿಟಮಿನ್ ನಮಗೆ ಸೂರ್ಯನಿಂದ ದೊರೆಯುತ್ತದೆ ಆದ್ದರಿಂದ ಪ್ರತಿದಿನ ಸುಮಾರು 30 ನಿಮಿಷ ಬಿಸಿಲಿಗೆ ಮೈಯೊಡ್ಡಿ .ಕಪ್ಪು ಬಣ್ಣದವರು ಮಾತ್ರ ಸುಮಾರು 2 ಗಂಟೆಯವರೆಗೆ ಬಿಸಿಲಿಗೆ ಮೈಯೊಡ್ಡಬೇಕು.
ಬದಲಾದ ಜೀವನಶೈಲಿ ಎಲ್ಲರಲ್ಲಿಯೂ ವಿಟಮಿನ್ ಡಿ ಕೊರತೆ ಎದ್ದು ಕಾಣುವಂತೆ ಮಾಡಿದೆ ,ಸೂರ್ಯನ ಬಿಸಿಲು ದೇಹದ ಮೇಲೆ ಬಿದ್ದರೆ ವಿಟಮಿನ್ ಡಿ ತಯಾರಾಗುತ್ತದೆ .ನಮ್ಮ ದೇಶದಲ್ಲಿ ಎಲ್ಲ ಕಡೆ ಸೂರ್ಯನ ಬಿಸಿಲು ಬೀಳುವುದು ಆದರೂ ಸಹ ಭಾರತದಲ್ಲಿ ಆರೋಗ್ಯವಂತರ ದೇಹದಲ್ಲಿ ವಿಟಮಿನ್ ಡಿ ಕೊರತೆ ಇರುವುದು ಕಂಡು ಬಂದಿದೆ.ಈ ವಿಟಮಿನ್ ಡಿ ಕೊರತೆ ಇರುವವರು ಅದನ್ನು ತೊಡೆದು ಹಾಕಲು ಬೆಳಗ್ಗೆ 6 ರಿಂದ 7 ರ ನಡುವೆ ಸೂರ್ಯನ ಬೆಳಕಿನಲ್ಲಿ ಕೊಂಚ ಸಮಯ ಹೊರಗೆ ಓಡಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಸಂಪೂರ್ಣ ಮಾಹಿತಿಗಾಗಿ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ.
ಧನ್ಯವಾದಗಳು.