ಕೊರೊನಾ ಸಮಯದಲ್ಲಿ ಎಲ್ಲರ ಮನೆಯಲ್ಲೂ ಇರಲೇಬೇಕಾದ ಈ ದಿವ್ಯ ಔಷಧಿ!

Featured-Article

ಕೊರೊನಾದ ಎರಡನೆಯ ಅಲೆ ಈಗ ಎಲ್ಲೆಡೆ ವ್ಯಾಪಿಸಿದೆ ಆದ್ದರಿಂದ ಕೆಮ್ಮು , ನೆಗಡಿ , ಶೀತ , ಜ್ವರ , ಮೈಕೈ ನೋವು ಇತ್ಯಾದಿ ಯಾವುದೇ ಲಕ್ಷಣಗಳು ಕಂಡು ಬಂದರೂ ಅದು ಕೆಲವೊಮ್ಮೆ ಬೇರೆ ರೋಗದ ಲಕ್ಷಣಗಳಾಗಿರಬಹುದು

ಅದರ ಹೊರತಾಗಿಯೂ ಶೇಕಡಾ 90% ರಷ್ಟು ಮಂದಿಗೆ ಸ್ವಲ್ಪ ಜ್ವರ , ಸ್ವಲ್ಪ ಕೆಮ್ಮು , ನೆಗಡಿ , ಸ್ವಲ್ಪ ಗಂಟಲು ಕೆರೆತ ಇದ್ದಾಗ ಅದನ್ನು ಗುಣಪಡಿಸಿಕೊಳ್ಳಲು ಆ ಕ್ಷಣಕ್ಕೆ ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಕೆಲವರಿಗೆ ಈ ಸ್ವಲ್ಪವೇ ಎನ್ನುವ ಲಕ್ಷಣವೇ ಜಾಸ್ತಿಯಾಗುವ ಸಂಭವ ಇರುತ್ತದೆ.

ಸಾಮಾನ್ಯವಾಗಿ ಕೊರೋನಾ ಲಕ್ಷಣಗಳು ಸ್ವಲ್ಪ ದಿಂದಲೇ ಕಾಣಿಸಿಕೊಳ್ಳುತ್ತದೆ ಅಂದರೆ ಸ್ವಲ್ಪವೇ ಜ್ವರ , ಸ್ವಲ್ಪವೇ ಮೈಕೈನೋವು, ಸ್ವಲ್ಪವೇ ಕೆಮ್ಮು , ಸ್ವಲ್ಪವೇ ನೆಗಡಿ ಸ್ವಲ್ಪ , ಸ್ವಲ್ಪವೇ ಸುಸ್ತು , ಸ್ವಲ್ಪವೇ ಗಂಟಲು ಕೆರತ ಹಾಗೂ ಸ್ವಲ್ಪ ರುಚಿ ಸಿಗದಂತಾಗುವುದು ಆದರೆ ಅದು ಕೊರೋನಾ ಕೂಡ ಇರಬಹುದು.

ಈ ರೀತಿಯ ಯಾವುದೇ ಲಕ್ಷಣಗಳು ಕಂಡು ಬಂದರೆ ಮನೆಯಲ್ಲಿ ಐಸೋಲೇಟೆಡ್ ಆಗಿ ನಂತರ ಆದಷ್ಟು ಬೇಗ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ.ಇನ್ನು ಈ ರೀತಿ ಟೆಸ್ಟ್ ಮಾಡಿಸಿ ಕೊಂಡಾಗ ನೆಗೆಟಿವ್ ಬಂದರೆ ಪರವಾಗಿಲ್ಲ ಆದರೆ ಕೊರೋನಾ ಪಾಸಿಟಿವ್ ಬಂದರೆ ಹೆದರುವ ಅಗತ್ಯವಿಲ್ಲ ಯಾಕೆಂದರೆ ಕೊರೋನಾ ಪಾಸಿಟಿವ್ ಇದೆ ಮೊದಲೇ ತಿಳಿಯಿತೆಂದರೆ ಕೆಲ ದಿನಗಳಲ್ಲೇ ಗುಣಪಡಿಸಿಕೊಳ್ಳಬಹುದಾದ ಔಷಧಿ ಖಂಡಿತವಾಗಿಯೂ ಇದೆ.ನೀವು ಮನೆಯಲ್ಲೇ ಇದ್ದುಕೊಂಡು ಕೆಲವು ವೈದ್ಯರು ಸೂಚಿಸಿದ ಆ್ಯಂಟಿ ವೈರಲ್ ಔಷಧಿಗಳನ್ನು ತೆಗೆದುಕೊಂಡರೆ ಸಾಕು .

ಪಲ್ಸ್ ಆಕ್ಸಿಮೀಟರ್

ಈ ಪಲ್ಸ್ ಆಕ್ಸಿಮೀಟರ್ ಪ್ರತಿಯೊಬ್ಬರ ಮನೆಯಲ್ಲೂ ಇರಲೇಬೇಕು.ಇದು ನಮ್ಮ ದೇಹದಲ್ಲಿರುವ ಆಮ್ಲಜನಕದ ಮಟ್ಟವನ್ನು ತೋರಿಸುತ್ತದೆ.ಸಾಮಾನ್ಯವಾಗಿ ಆಮ್ಲಜನಕವು 95 ರಿಂದ 100 ಲೆವೆಲ್ ಇರುತ್ತದೆ.ಯಾವುದೇ ರೀತಿಯ ಸಣ್ಣ ಲಕ್ಷಣಗಳು ಕಂಡುಬಂದರೂ ಪಲ್ಸ್ ಆಕ್ಸಿಮೀಟರ್ ಬಳಸಿಕೊಂಡು ಬೆಳಿಗ್ಗೆ ಮತ್ತು ಸಂಜೆ ಆಮ್ಲಜನಕದ ಮಟ್ಟವನ್ನು ತಿಳಿದುಕೊಳ್ಳಬೇಕು.

ಒಂದು ವೇಳೆ ಆಮ್ಲಜನಕವು 93ಕ್ಕಿಂತ ಕಡಿಮೆ ಬಂದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಿ.ಯಾಕೆಂದರೆ 93 ರಿಂದ 70 ಕ್ಕೆ ಬರಲು ಸುಮಾರು 2 ರಿಂದ 3 ದಿನಗಳ ಕಾಲಾವಕಾಶ ಬೇಕು.ಆ ಸಮಯದಲ್ಲಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಬಹಳ ಒಳ್ಳೆಯದು.

ಹೀಗೆ ಆಕ್ಸಿಜನ್ ಲೆವೆಲ್ 93 ಕ್ಕಿಂತ ಕಡಿಮೆ ಇದ್ದಾಗ ನಾವು ಆಸ್ಪತ್ರೆಗೆ ಹೋದಾಗ 2 ರಿಂದ 3 ದಿನ ದೊಳಗಡೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸುತ್ತಾರೆ ನಂತರ 1 ವಾರಗಳ ಕಾಲ ಐಸೋಲೇಶನಲ್ಲಿದ್ದರೆ ಸಾಕು.ಆದ್ದರಿಂದ ಪ್ರತಿಯೊಬ್ಬರೂ ಪಲ್ಸ್ ಆಕ್ಸಿ ಮೀಟರನ್ನು ಮನೆಯಲ್ಲಿ ಇಟ್ಟುಕೊಳ್ಳಲೇಬೇಕು.

ಇನ್ನೂ ಪಲ್ಸ್ ಆಕ್ಸಿ ಮೀಟರ್ ಅನ್ನು ಬಳಸುವ ವಿಧಾನ :ಮೊದಲಿಗೆ 2 ಶೆಲ್ಲನ್ನು ಆಕ್ಸಿ ಮೀಟರ್ ಒಳಗೆ ಹಾಕಿ ನಂತರ ಕೈಬೆರಳನ್ನು ಆಕ್ಸಿ ಮೀಟರ್ ಒಳಗೆ ಇಟ್ಟು ಆನ್ ಬಟನ್ ಒತ್ತಿದರೆ ಸಾಕು ಆಕ್ಸಿಜನ್ ಲೆವೆಲ್ಲನ್ನು ತೋರಿಸುತ್ತದೆ.

ಧನ್ಯವಾದಗಳು.

Leave a Reply

Your email address will not be published.