ತುಳಸಿ ಕಷಾಯದಿಂದ ಕೊರೊನಾ ವೈರಾಣು ನಿರ್ಣಾಮಾಡುತ್ತಾ? ಉಸಿರಾಟದ ಸಮಸ್ಯೆ ಎದೆಯಲ್ಲಿ ಕಫ ಕರಗಲು ಮನೆ ಮದ್ದು.
ಈಗ ಎಲ್ಲಾ ಕಡೆ ಕೊರೋನಾ ಗಂಟಲಿನ ಇನ್ಫೆಕ್ಷನ್ , ಶ್ವಾಸಕೋಶದ ಸಮಸ್ಯೆ , ಉಸಿರಾಟದ ಸಮಸ್ಯೆ ಕಫ ಸಮಸ್ಯೆ ಹೀಗೆ ಇತ್ಯಾದಿ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳಾದ ಕೊರೋನಾ ಬಂದಿರಬಹುದು ಎಂಬ ಅನುಮಾನ ಬರುತ್ತದೆ.ಇಂತಹ ಸಮಯದಲ್ಲಿ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಸುಲಭವಾಗಿ ಮನೆಯಲ್ಲೇ ಇದ್ದು ಕೊಂಡು ಈ ಮನೆಮದ್ದನ್ನು ಬಳಸಿ ಗುಣಪಡಿಸಿಕೊಳ್ಳಬಹುದಾಗಿದೆ ತುಳಸಿ ವೈರಸ್ ವಿರುದ್ಧ ಹೋರಾಡಬಲ್ಲ ಕಷಾಯದ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ತುಳಸಿ
ತುಳಸಿ ಎಲೆಗಳು ಸುಲಭವಾಗಿ ದೊರೆಯುತ್ತದೆ ಏಕೆಂದರೆ ಎಲ್ಲರ ಮನೆ ಮುಂದೆಯೂ ತುಳಸಿ ಗಿಡ ಇದ್ದೇ ಇರುತ್ತದೆ.ತುಳಸಿ ಕಷಾಯ ಮಾಡಿಕೊಂಡು ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ.ತುಳಸಿಯಲ್ಲಿ ಕ್ರಿಮಿಘ್ನ ಗುಣ ಇದೆ ಇದರಿಂದ ಸಣ್ಣಪುಟ್ಟ ಕ್ರಿಮಿಗಳು ವೈರಸ್ಗಳು ಬ್ಯಾಕ್ಟೀರಿಯಾಗಳು ಸಾಯುತ್ತವೆ.
ತುಳಸಿಯು ನಮ್ಮ ಮನೆಯ ಸದಸ್ಯರ ರಕ್ಷಕ ಎಂದರೆ ತಪ್ಪಾಗಲಾರದುಏಕೆಂದರೆ ತುಳಸಿ ಗಿಡ ಮನೆ ಮುಂದೆ ಇದ್ದರೆ ಅದರ ಗಾಳಿಯಿಂದಲೇ ಎಷ್ಟೋ ವೈರಸ್ಗಳು ನಾಶ ಹೊಂದುತ್ತದೆ.ಇನ್ನು ಇದನ್ನು ಹೊಟ್ಟೆಗೆ ತೆಗೆದುಕೊಂಡಾಗ ಎಷ್ಟೆಲ್ಲಾ ಪ್ರಯೋಜನ ನಮ್ಮ ದೇಹಕ್ಕೆ ಸಿಗಬಹುದು ಎಂದು ನೀವೇ ಊಹಿಸಿಕೊಳ್ಳಿ.
ಪ್ರತಿಯೊಂದು ತುಳಸಿಯಲ್ಲೂ( ರಾಮ ತುಳಸಿ , ವನ ತುಳಸಿ ಮತ್ತು ಕೃಷ್ಣ ತುಳಸಿ ) ಸಮಾನ ಗುಣವಿರುತ್ತದೆ.ಇನ್ನು ತುಳಸಿಯು ಉಷ್ಣ ಪ್ರವೃತ್ತಿ ಹೊಂದಿರುತ್ತೆ ಇದರಿಂದ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.ನಮ್ಮ ದೇಹದಲ್ಲಿರುವ ದೋಷಗಳನ್ನು ನಿವಾರಣೆ ಮಾಡುತ್ತದೆ.
ಕಣ್ಣಿಗೆ ಕಾಣದ ವೈರಸ್ಸನ್ನು ಕೊಲ್ಲುತ್ತದೆ.ಇವೆಲ್ಲ ಗುಣಗಳು ತುಳಸಿಯಲ್ಲಿ ಉಷ್ಣ ಪ್ರವೃತ್ತಿಯಿಂದ ಬಂದಿರುತ್ತದೆ.
ಇನ್ನು ಮಳೆಗಾಲದಲ್ಲಿ ಹೆಚ್ಚಾಗಿ ಉಷ್ಣ ಪ್ರವೃತ್ತಿ ಹೊಂದಿರುವುದರಿಂದ ಆಹಾರವನ್ನು ಸೇವಿಸಬೇಕು ಇದರಿಂದ ದೇಹವು ಉಷ್ಣದಿಂದ ಕೂಡಿರುತ್ತದೆ ಇದರಿಂದ ಒಳಗಡೆ ಕ್ರಿಮಿಕೀಟಗಳು ಅಲ್ಲೇ ಸತ್ತು ಹೋಗುತ್ತದೆ.
ತುಳಸಿ ಕಷಾಯ
ಒಂದು ಪಾತ್ರೆಯಲ್ಲಿ 2 ಲೋಟ ನೀರಿಗೆ ಮತ್ತು 20 ರಿಂದ 30 ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ ಒಂದು ಲೋಟ ಆಗುವವರೆಗೆ ಕುದಿಸಿಕೊಳ್ಳಬೇಕು ನಂತರ ಒಂದು ಲೋಟದಲ್ಲಿ ಸೋಸಿ ಬೆಳಗ್ಗೆ ಮತ್ತು ಸಂಜೆ ಉಗುರು ಬೆಚ್ಚಗಿರುವಾಗಲೇ ಸೇವಿಸಬೇಕು.
ಇನ್ನು 15 ರಿಂದ 20 ಎಂಎಲ್.ತುಳಸಿ ಕಷಾಯ ವನ್ನು ಊಟ ತಿಂಡಿಗೆ ಮುನ್ನ 5 ದಿನಗಳವರೆಗೆ ಗುಟುಕಿಸುತ್ತಾ ಕುಡಿಯಬೇಕು.
ತುಳಸಿಯು ಆಹಾರವಲ್ಲ ಇದು ಒಂದು ಔಷಧವಾಗಿದೆ ಆದ್ದರಿಂದ ಮಿತಿಯಾಗಿ ಸೇವಿಸುವುದು ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳು ಸಿಗುತ್ತವೆ.ಒಂದು ವೇಳೆ ಮಿತಿಮೀರಿ ಸೇವಿಸಿದರೆ ದೇಹ ಉಷ್ಣ ಹೆಚ್ಚಾಗಿ ಬೇರೆ ಬೇರೆ ತೊಂದರೆಗಳು ಆಗುತ್ತವೆ.ನಿಮ್ಮ ದೇಹವು ಉಷ್ಣ ಪ್ರವೃತ್ತಿ ಹೊಂದಿದ್ದರೆ ಈ ಕಷಾಯಕ್ಕೆ ಚಕ್ಕೆ ಪುಡಿಯ ಜೊತೆಗೆ 2 ಚಿಟಿಕೆ ಸೊಗದೆ ಬೇರಿನ ಪುಡಿಯನ್ನು ಹಾಕಿ ಕುಡಿಯಿರಿ.
ನಿಮ್ಮ ದೇಹ ಪ್ರಕೃತಿ ನೋಡಿಕೊಂಡು ಕಷಾಯವನ್ನು ಸೇವಿಸಿ.
ತುಳಸಿ ಕಷಾಯವನ್ನು ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿಯೂ ಹೆಚ್ಚುವುದಲ್ಲದೆ ನಮ್ಮ ಚರ್ಮದ ಕಾಂತಿಯೂ ಹೆಚ್ಚುತ್ತದೆ , ರಕ್ತ ಶುದ್ಧಿಯಾಗುತ್ತದೆ ಜೊತೆಗೆ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.
ಸಂಧಿವಾತ ಮತ್ತು ಸೋರಿಯಾಸಿಸ್ ನಂತಹ ಸಮಸ್ಯೆಗಳು ಬರದೇ ಇರುವ ರೀತಿ ಸಹ ಈ ಕಷಾಯ ತಡೆಯಬಲ್ಲದು.ಈ ತುಳಸಿ ಕಷಾಯವನ್ನು 15 ದಿನ ಕುಡಿಯಿರಿ ನಂತರ ವಾರದಲ್ಲಿ 2 ಅಥವಾ 3 ಬಾರಿ ಕುಡಿಯುತ್ತಾ ಬನ್ನಿ.
ಸೂಚನೆ :ತುಳಸಿ ಕಷಾಯದೊಂದಿಗೆ ಹಾಲನ್ನು ಬೆರೆಸಿ ಕುಡಿಯುವುದು ನಿಷಿದ್ಧವಾಗಿದೆ ಯಾಕೆಂದರೆ ಇವೆರಡೂ ವಿರುದ್ಧ ಪ್ರಕೃತಿಯನ್ನು ಹೊಂದಿರುತ್ತವೆ.
ಧನ್ಯವಾದಗಳು.