ಮಿಧುನ ರಾಶಿಯವರ ಸುಖ ಜೀವನಕ್ಕಾಗಿ ಪರಿಹಾರಗಳು!

Astrology

ಮಿಥುನ ರಾಶಿಯವರ ಸಕಲ ಸಂಕಷ್ಟಗಳಿಗೆ ಸರಳ ಪರಿಹಾರಗಳನ್ನು ಅನುಸರಿಸಿದರೆ ಸಾಕು. ನದಿತೀರದ ತೀರ್ಥಕ್ಷೇತ್ರಕ್ಕೆ ಹೋದಾಗ ನದಿಯಲ್ಲಿನ ಮೀನುಗಳಿಗೆ ಕಡ್ಲೆಪುರಿ ಅಥವಾ ಆಹಾರವನ್ನು ನೀಡುವುದರಿಂದ ಹಾಗೂ ನೀವು ಕೊಟ್ಟ ಆಹಾರವನ್ನು ನದಿಯ ಮೀನುಗಳು ತಿಂದರೆ ನಿಮಗೆ ಪುಣ್ಯಪ್ರಾಪ್ತಿ ಆಗಿ ನಿಮ್ಮ ಕಷ್ಟಗಳು ಕರಗಿ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.

ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿದರೆ ದುರದೃಷ್ಟ ಬೆನ್ನತ್ತಿಕೊಂಡು ಬರುತ್ತದೆ.ಆದ್ದರಿಂದ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ.ಹೊರನಾಡು, ಕೊಲ್ಲೂರು ಮೊದಲಾದ ಪುಣ್ಯಕ್ಷೇತ್ರಗಳಿಗೆ ಅಕ್ಕಿಯನ್ನು ಅರ್ಪಿಸಿ. ನಿಮ್ಮ ದೀರ್ಘಕಾಲದ ಕಷ್ಟಗಳು ನಿವಾರಣೆಯಾಗುತ್ತದೆ.

ಮನೆಯಲ್ಲಿ ಮನಿಪ್ಲಾಂಟ್ ಬೆಳೆಸಬೇಡಿ.ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಔಷಧಿ ಮಾತ್ರೆ ಚಿಕಿತ್ಸೆ ಕೊಡಿಸಿ. ಇದರಿಂದ ನಿಮ್ಮ ಆರೋಗ್ಯ ವೃದ್ಧಿಸುತ್ತದೆ.12 ವರ್ಷದ ಮಕ್ಕಳನ್ನು ಎಂದಿಗೂ ಬೈಯಬೇಡಿ. ಬುಧವಾರ ದಿನದಂದು ಸಂತೋಷವಾಗಿ ಅವರನ್ನು ನೋಡಿಕೊಂಡರೆ ನಿಮಗೆ ಒಳ್ಳೆಯದಾಗುತ್ತದೆ.

ಹಸಿರು ಬಣ್ಣದ ಬಾಟಲ್ ನಲ್ಲಿ ಗಂಗಾಜಲವನ್ನು ತುಂಬಿ ಬಯಲಿನಲ್ಲಿ ಬೆಂಕಿಹಚ್ಚಿ ಉರಿಸಿ. ನಿಮ್ಮ ದುರದೃಷ್ಟ ದೂರವಾಗುತ್ತದೆ.ಈ ಎಲ್ಲಾ ಸರಳ ಪರಿಹಾರವನ್ನು ಮಾಡಿಕೊಂಡಿದ್ದರೆ ಮಿಥುನ ರಾಶಿಯವರ ಕಷ್ಟಗಳು ದೂರವಾಗಿ ನಿಮ್ಮ ಜೀವನದಲ್ಲಿ ಭಾಗ್ಯೋದಯವಾಗುತ್ತದೆ ಹಾಗೂ ಸುಖ ಸಂತೋಷ ನೆಮ್ಮದಿ ನೆಲೆಸುತ್ತದೆ.ಇದರ ನಡುವೆ ನಿಮ್ಮ ದೈನಂದಿನ ವ್ಯಾಪಾರ, ಕೆಲಸಗಳನ್ನು ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published.