ಆಹಾರವನ್ನು ಮಿತವಾಗಿ ಸೇವಿಸಿದರೆ ಅದು ಔಷಧಿಯಾಗಿ ಕೆಲಸ ಮಾಡುತ್ತದೆ ಆದರೆ ಅತಿಯಾದರೆ ಅಮೃತವೂ ವಿಷವೆಂಬಂತೆ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ಅದು ದುಷ್ಪರಿಣಾಮ ಬೀರಬಹುದು.ಇನ್ನೂ ಕೆಲವೊಂದು ಸಮಯದಲ್ಲಿ ಕೆಲವು ಆಹಾರಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಆದರೆ ಅದೇ ಆಹಾರವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೇ ಅಪಾಯವಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ತಿನ್ನಲೇಬಾರದ 10 ಪದಾರ್ಥಗಳು
1 ) ಕಾಫಿ ಮತ್ತು ಟೀ
ತುಂಬಾ ಜನರು ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀ ಯನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆಇನ್ನೂ ಬೆಳಗ್ಗಿನ ಸಮಯದಲ್ಲಿ ಕಾಫಿ ಅಥವಾ ಟೀ ಯನ್ನು ಕುಡಿಯಬಹುದು ಆದರೆ ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಕಾಫಿ ಅಥವಾ ಟೀ ಯನ್ನು ಕುಡಿಯಬಾರದು
ಯಾಕೆಂದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.ಇದರಿಂದ ಶರೀರದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಇಂಬ್ಯಾಲೆನ್ಸ್ ಗೆ ಇದು ಕಾರಣವಾಗುತ್ತದೆ.ಖಾಲಿ ಹೊಟ್ಟೆಯಲ್ಲಿ ಕಾಫಿ ಅಥವಾ ಟೀ ಯನ್ನು ಕುಡಿಯುವ ಬದಲು 1 ಲೋಟ ನೀರನ್ನು ಸೇವಿಸಿ ನಂತರ ಕಾಫಿ ಅಥವಾ ಟೀ ಯನ್ನು ಕುಡಿಯಿರಿ.
2 )ಕೂಲ್ ಡ್ರಿಂಕ್ಸ್ ಮತ್ತು ಸೋಡಾ
ತಂಪು ಪಾನೀಯಗಳನ್ನು ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ತುಂಬಾನೇ ಅಪಾಯಕಾರಿ
ಏಕೆಂದರೆ ಇವುಗಳಲ್ಲಿ ಹೆಚ್ಚಾಗಿ ಕಾರ್ಬೊನೇಟೆಡ್ ಆ್ಯಸಿಡ್ ಇರುತ್ತದೆ ಹಾಗೂ ಇದರಿಂದ ಹೊಟ್ಟೆಯಲ್ಲಿ ಹುಣ್ಣು ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಜೊತೆಗೆ ಹೊಟ್ಟೆಯಲ್ಲಿ ಗ್ಯಾಸ್ ವಾಂತಿ ಬರುವಂಥ ಅನುಭವ ನೀಡುತ್ತದೆ.ಹಾಗಾಗಿ ಖಾಲಿ ಹೊಟ್ಟೆಯಲ್ಲಿ ತಂಪು ಪಾನೀಯಗಳನ್ನು ಸೇವಿಸುವ ಬದಲು ಹಣ್ಣುಗಳ ರಸವನ್ನು ಸೇವಿಸಿ ಶರೀರವನ್ನು ಆರೋಗ್ಯವಾಗಿರಿಸಿಕೊಳ್ಳಿ.
3 ) ಟೊಮ್ಯಾಟೊ
ಟೊಮೆಟೊ ದಲ್ಲಿ ಟೋನಿನ್ಆ್ಯಸಿಡ್ ತುಂಬಾ ಜಾಸ್ತಿಯಿದೆ ಇದು ಹೊಟ್ಟೆಯಲ್ಲಿ ಇರುವಂಥ ಗ್ಯಾಸ್ಟ್ರೋ ಇಂಟ್ರೊ ಟ್ರ್ಯಾಕ್ಟ್ ನಲ್ಲಿ ಹೆಚ್ಚಾಗಿ ಆ್ಯಸಿಡ್ ಗಳನ್ನು ಉತ್ಪತ್ತಿಯಾಗುವಂತೆ ಮಾಡುತ್ತದೆ ಇದರಿಂದ ಹೊಟ್ಟೆಯಲ್ಲಿರುವ ಟಿಶ್ಯೂಗಳು ಗಾಯಗೊಳ್ಳುತ್ತವೆ ಹಾಗಾಗಿ ಯಾವುದೇ ಕಾರಣಕ್ಕೂ ಖಾಲಿಹೊಟ್ಟೆಯಲ್ಲಿ ಟೊಮೆಟೊ ವನ್ನು ಸೇವಿಸಬೇಡಿ.
4 ) ಮಾತ್ರೆ ಅಂದರೆ ಟ್ಯಾಬ್ಲೆಟ್
ಯಾವುದೇ ಕಾರಣಕ್ಕೂ ಖಾಲಿಹೊಟ್ಟೆಯಲ್ಲಿ ಮಾತ್ರೆಗಳನ್ನು ಸೇವಿಸಬಾರದು ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ಮತ್ತು ಹೊಟ್ಟೆ ನೋವು , ಭೇದಿಯಂತಹ ಕಾಯಿಲೆಗಳು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
5 ) ಖಾರ ಮಸಾಲೆ ಪದಾರ್ಥ
ಇನ್ನು ಯಾವುದೇ ಕಾರಣಕ್ಕೂ ಖಾಲಿಹೊಟ್ಟೆಯಲ್ಲಿ ಖಾರದ ಪದಾರ್ಥಗಳನ್ನು ಮತ್ತು ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಲೇಬೇಡಿ ಇದರಿಂದ ಹೊಟ್ಟೆಯಲ್ಲಿ ಹುಣ್ಣು ಮತ್ತು ಅಸಿಡಿಟಿ ಉಂಟಾಗುತ್ತದೆ.
6 ) ಮೊಸರು
ಖಾಲಿ ಹೊಟ್ಟೆಯಲ್ಲಿ ಮೊಸರನ್ನು ಸೇವಿಸಬೇಡಿ ಏಕೆಂದರೆ ಮೊಸರಿನಲ್ಲಿ ಅಧಿಕವಾಗಿ ಲ್ಯಾಕ್ಟಿಕ್ ಬ್ಯಾಕ್ಟೀರಿಯಾ ಇರುತ್ತದೆ.ಇದನ್ನು ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಹೊಟ್ಟೆಯಲ್ಲಿರುವ ಹೈಡ್ರೋಕ್ಲೋರಿಕ್ ಆಸಿಡ್ ನೊಂದಿಗೆ ಈ ಬ್ಯಾಕ್ಟೀರಿಯಾ ಸೇರಿ ಹೊಟ್ಟೆ ನೋವು ತರಿಸಬಹುದು.
7 ) ಬಾಳೆಹಣ್ಣು
ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ತಿನ್ನುವುದರಿಂದ ಅದರಲ್ಲಿ ಇರುವ ಮೆಗ್ನೀಷಿಯಂ ಅಂಶವು ರಕ್ತದ ಮೇಲೆ ಪ್ರಭಾವವನ್ನು ಬೀರುತ್ತದೆ ಇದರಿಂದ ಹೃದಯ ಸಂಬಂಧಿತ ಸಮಸ್ಯೆ ಹಾಗೂ ಕಿಡ್ನಿ ಗೆ ಸಂಬಂಧಪಟ್ಟ ಕಾಯಿಲೆಗಳು ಬರಬಹುದು.
8 ) ಗೆಣಸು ಅಥವಾ ಗೆಡ್ಡೆ
ಗೆಣಸಿನಲ್ಲಿ ಟ್ರಾನಿನ್ಸ್ , ಪ್ರಿಪ್ರೈಡ್ಸ್ ಜಾಸ್ತಿಯಾಗಿರುತ್ತದೆ ಹಾಗಾಗಿ ಇದನ್ನು ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಹೊಟ್ಟೆಯಲ್ಲಿ ಆಸಿಡಿಟಿ ಸಮಸ್ಯೆ ಉಂಟಾಗುತ್ತದೆ.
9 ) ಪಿಯರ್ ಫ್ರೂಟ್
ಈ ಹಣ್ಣನ್ನು ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಸೇವಿಸಬೆದು ಇದರಿಂದ ಹೊಟ್ಟೆ ಕೆಡುವುದಲ್ಲದೆ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಎದುರಾಗಬಹುದು.
10 ) ಇನ್ನೂ ಪೇರಳೆ ಹಣ್ಣು , ಕಿತ್ತಳೆ ಹಣ್ಣು , ಮೂಸಂಬಿ , ನಿಂಬೆ ಹಣ್ಣು ಇತ್ಯಾದಿ ಸಿಟ್ರಸ್ ಅಂಶ ವಿರುವಂತಹ ಹಣ್ಣುಗಳನ್ನು ಸೇವಿಸಬಾರದು ಇದರಿಂದ ಹೊಟ್ಟೆಯಲ್ಲಿ ಆಸಿಡಿಟಿ ಮತ್ತು ಗ್ಯಾಸ್ ಟ್ರಬಲ್ ಉಂಟಾಗುತ್ತದೆ ಹಾಗೂ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ.
11 ) ಮ ದ್ಯ ಪಾ ನ
ಖಾಲಿ ಹೊಟ್ಟೆಯಲ್ಲಿ ಮ ದ್ಯ ಪಾ ನ ಸೇವಿಸಬಾರದು ಇದು ಲಿವರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
ಹಾಗೂ ಇದರಿಂದ ಲಿವರ್ ಗೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಲಿವರ್ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಧನ್ಯವಾದಗಳು.