ಹಣೆಗೆ ತಿಲಕವಿಡುವುದರಿಂದ ಅಗುತ್ತೆ ಇಷ್ಟೋಂದು ಪ್ರಯೋಜನ!ತಪ್ಪದೇ ತಿಳಿಯಿರಿ!
ಹಣೆಗೆ ತಿಲಕ ಮತ್ತು ಕುಂಕುಮ ಇಟ್ಟುಕೊಳ್ಳುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಅವಿಭಾಜ್ಯ. ಪುರುಷರು ಅಥವಾ ಸ್ತ್ರೀಯರೇ ಆಗಿರಲಿ ನಿತ್ಯ ಶುಭ್ರವಾದ ತಕ್ಷಣ ಹಣೆಗೆ ತಿಲಕವನ್ನು ಇಟ್ಟುಕೊಂಡ ನಂತರ ಬೇರೆ ಕೆಲಸವನ್ನು ಮಾಡುತ್ತಾರೆ.
ಇನ್ನು ಕೆಲವರು ವಿಜಯದ ಸಂಕೇತವಾಗಿ ಬಳಸುತ್ತಾರೆ. ಹಣೆಯ ತಿಲಕದಿಂದ ಮನುಷ್ಯನಆರೋಗ್ಯಕ್ಕೂ ಬಹಳಷ್ಟು ಒಳ್ಳೆಯದಾಗುತ್ತದೆ. ಸಾಮಾನ್ಯವಾಗಿ ಹಣೆಯ ಯಾವ ಭಾಗದಲ್ಲಿ ತಿಲಕವನ್ನು ಇಡುತ್ತಾರೋ ಅಲ್ಲಿ ಅಗ್ನ ಚಕ್ರ ಅಥವಾ ಗುರು ಚಕ್ರ ಇರುತ್ತದೆ.
ಅಂತಹ ಭಾಗದಲ್ಲಿ ತಿಲಕವನ್ನು ಇಡುವುದರಿಂದ ಶಕ್ತಿ ಕೇಂದ್ರವು ಸ್ಥಿರವಾಗಿ ನಿಲ್ಲುತ್ತವೆ. ಇನ್ನು ಹಣೆಯ ಮೇಲಿನ ತಿಲಕವನ್ನು ಸಾಮಾನ್ಯವಾಗಿ ಹಳದಿ ಅಥವಾ ಕುಂಕುಮದಿಂದ ಇಟ್ಟುಕೊಳ್ಳುತ್ತಾರೆ. ಇದರಿಂದ ಕಾರ್ಯ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ.
ಕೆಲವೊಬ್ಬರು ಅದರ ಜೊತೆ ಅಕ್ಷತೆಯನ್ನು ಇಟ್ಟುಕೊಳ್ಳುತ್ತಾರೆ. ಈ ರೀತಿ ಅಕ್ಷತೆಯನ್ನು ಹಣೆಗೆ ಇಡುವುದರಿಂದ ದೇವಿ ಶ್ರೀ ಮಹಾಲಕ್ಷ್ಮಿ ಅವರಲ್ಲಿ ನೆಲೆಸಿರುತ್ತಾಳೆ ಎಂದು ಹೇಳುತ್ತಾರೆ. ಪ್ರತಿದಿನ ಹಳದಿ ತಿಲಕವನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಶಾಂತಿ ಸಮೃದ್ಧಿ ನೆಲೆಸುತ್ತದೆ.
ಆಯುಷ್ ವೃದ್ಧಿಯಗುವುದಕ್ಕೆ ಹೆಬ್ಬೆಟ್ಟು ನಿಂದ, ಶತ್ರುಗಳನ್ನು ನಾಶ ಪಡಿಸಲು ತೋರುಬೆರಳಿನಿಂದ, ತೋರು ಬೆರಳಿನಿಂದ ಹಣವಂತನಾಗಲು ಮತ್ತು ಸುಖ ಶಾಂತಿಗಾಗಿ ಅನಾಮಿಕ ಬೆರಳಿನಿಂದ ಕುಂಕುಮವನ್ನು ಹಣೆಗೆ ಇಟ್ಟುಕೊಳ್ಳಬೇಕು