ಮಣ್ಣಿನ ಮಡಿಕೆ ನೀರು ಕುಡಿಯುವುದರಿಂದ ಹಲವು ರೋಗಗಳಿಗೆ ರಾಮಬಾಣ
ಬೇಸಿಗೆಕಾಲ ಬಂದರೆ ಉರಿಬಿಸಿಲು ಮತ್ತು ತುಂಬಾ ಶೆಕೆ ಆಗುವುದು. ಇನ್ನು ಬೇಸಿಗೆಯಲ್ಲಿ ತಿಂಡಿ ತಿನ್ನಬೇಕು ಎಂದು ಅನಿಸುವುದಕ್ಕಿಂತ ಯಾರಾದರೂ ಒಂದು ಕ್ಲಾಸ್ ತಣ್ಣನೆ ನೀರುಕೊಟ್ಟರೆ ಸಾಕು ಎಂದು ಅನಿಸುತ್ತದೆ.
ತಣ್ಣನೆ ನೀರು, ಜ್ಯೂಸ್, ಮಜ್ಜಿಗೆ ಕುಡಿಯಬೇಕು ಎಂದು ಅನಿಸುತ್ತದೆ. ಪ್ರತಿಯೊಬ್ಬರು ಫ್ರಿಜ್ ಅನ್ನು ಅವಲಂಬಿಸಿದ್ದಾರೆ. ಆದರೆ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇತ್ತೀಚಿನ ದಿನಗಳಲ್ಲಿ ಸ್ಟೀಲ್, ಅಲ್ಯುಮಿನಿಯಂ, ಗಾಜು ಬಳಕೆ ಮಾಡುತ್ತಿದ್ದಾರೆ.
ಕೆಲವರಿಗೆ ಫ್ರಿಜ್ ನೀರನ್ನು ಕುಡಿದರೆ ಶೀತ ಆಗುವುದು ಗ್ಯಾರಂಟಿ. ತಣ್ಣನೆ ನೀರು ಕುಡಿಯಬೇಕೆಂದರೆ ಮಡಿಕೆಯ ನೀರನ್ನು ಕುಡಿಯುವುದು ಒಳ್ಳೆಯದು. ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಿಯುವುದರಿಂದ ಅಸಿಡಿಟಿ, ಗ್ಯಾಸ್ ಸಮಸ್ಯೆ ಇರುವವರಿಗೆ ಇದು ಉತ್ತಮ.
ಹಿಂದಿನ ಕಾಲದಲ್ಲಿ ಮಣ್ಣಿನ ಮಡಿಕೆಯನ್ನು ತಯಾರಿಸಿ ಅಡುಗೆ ಮಾಡುವುದಕ್ಕೆ ಮತ್ತು ಬೇರೆ ಕೆಲಸ ಮಾಡುವುದಕ್ಕೂ ಇಂತಹ ಮಣ್ಣಿನ ಮಡಕೆಯನ್ನು ಬಳಸುತ್ತಿದ್ದರು. ಆದರೆ ಕಾಲ ಬದಲಾದ ಹಾಗೆ ಎಲ್ಲವೂ ಬದಲಾಗಿದೆ.
ಮಣ್ಣಿನ ಮಡಿಕೆ ಬಳಕೆ ಮಾಡುವವರು ಕಡಿಮೆಯಾದರೂ ಹಾಗೂ ಸ್ಟೀಲ್, ನಾನಾ ರೀತಿಯ ಪಾತ್ರೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಆದರೆ ಮಣ್ಣಿನ ಮಡಿಕೆಯ ನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಕಾರಿ ಇದೆ.
ಬೇಸಿಗೆ ಕಾಲದಲ್ಲಿ ಬಿಸಿಲಿನಿಂದ ಆಗುವ ಆಘಾತವನ್ನು ತಪ್ಪಿಸಿಕೊಳ್ಳಬಹುದು. ಮಣ್ಣಿನ ಅಂಶ ದೇಹಕ್ಕೆ ಸೇರುವುದರಿಂದ ದೇಹದಲ್ಲಿ ಪಿಎಚ್ ಮಟ್ಟವನ್ನು ಕಾಪಾಡುತ್ತದೆ. ಅಷ್ಟೇ ಅಲ್ಲದೇ ಜೀರ್ಣ ವ್ಯವಸ್ಥೆಯನ್ನು ಸರಿ ಮಾಡುತ್ತದೆ.