ಶೀತ , ಕೆಮ್ಮು , ತಲೆ ಭಾರ , ಕಫಾ , ಉಸಿರಾಟದ ಸಮಸ್ಯೆಗೆ ಉತ್ತಮ ರಾಮಬಾಣ!
ಈಗಿನ ಕೊರೊನಾ ಕಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು ಹಾಗೂ ನೆಗಡಿ ಕಾಣಿಸಿಕೊಳ್ಳುತ್ತಿರುತ್ತದೆ.ಅಡುಗೆ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸುವುದರಿಂದ ಇಂತಹ ಸಮಸ್ಯೆಗಳಿಗೆ ಆರಂಭದಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಮನೆ ಮದ್ದು
ಕೆಮ್ಮು , ಶೀತ, ನೆಗಡಿ ಕೆಲವರಿಗೆ ಯಾವಾಗಲೂ ಇರುತ್ತದೆ.ಅಂಥವರಿಗೆ ಈ ಕಷಾಯ ತುಂಬಾನೇ ಉಪಯೋಗಕ್ಕೆ ಬರುತ್ತದೆ.ಇನ್ನು ಈ ಕಷಾಯ ಮಾಡುವ ವಿಧಾನ ಹೇಗೆಂದರೆ ಮೊದಲಿಗೆ 1 ಪಾತ್ರೆಗೆ 1ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಈ ಕುದಿಯುತ್ತಿರುವ ನೀರಿಗೆ 1 ಇಂಚಿನಷ್ಟು ಶುಂಠಿ, ವೀಳ್ಯದೆಲೆ,ಕಾಲು ಚಮಚ ಕಾಳುಮೆಣಸು ಪುಡಿ ಹಾಗೂ ಜತೆಗೆ 15 ತುಳಸಿ ಎಲೆಗಳನ್ನು ನಂತರ ಸ್ವಲ್ಪ ಸಮಯದ ಬಳಿಕ ಅಂದರೆ 1 ಲೋಟ ನೀರು ಅರ್ಧ ಲೋಟ ನೀರು ಆಗುವವರೆಗೆ ಕುದಿಸಿ ಗ್ಯಾಸ್ ಆಫ್ ಮಾಡಿ
ನಂತರ 1 ಲೋಟದಲ್ಲಿ ಸೋಸಿಕೊಳ್ಳಿ.1 ಸ್ಪೂನ್ ನಷ್ಟು ಸೇವಿಸಿ
ಇದನ್ನು ಊಟವಾದ 1 ಗಂಟೆಯ ನಂತರ ಸೇವಿಸಬಹುದು.ಇದನ್ನು ದಿನಕ್ಕೆ ಒಮ್ಮೆಯಾದರೂ ಸೇವಿಸಿದರೆ ಸಾಕು ಎಂತಹುದ್ದೇ ಶೀತಾ ಕೆಮ್ಮು ನೆಗಡಿ ಇದ್ದರೂ ಗುಣಮುಖವಾಗುತ್ತದೆ.
ಇನ್ನು ಈ ರೀತಿ ಕೇವಲ 3 ದಿನ ಕುಡಿಯುತ್ತಾ ಬಂದರೆ ಸಾಕು ಯಾವುದೇ ರೀತಿಯ ಶೀತಾ , ಕೆಮ್ಮು, ನೆಗಡಿ, ಕಫ , ತಲೆ ಭಾರ ಕಡಿಮೆಯಾಗುತ್ತದೆ.
ಈ ಕಷಾಯವನ್ನು ಕುಡಿಯುವುದರಿಂದ ಕೆಮ್ಮು ನೆಗಡಿ ಶೀತ ತಲೆಭಾರ ದಂತ ಸಮಸ್ಯೆ ಕೇವಲ 2 ಗಂಟೆಯಲ್ಲಿ ನಿವಾರಣೆಯಾಗುತ್ತದೆ.
ಧನ್ಯವಾದಗಳು.