ಕಣ್ಣಿನ ದೃಷ್ಟಿ ರಕ್ಷಿಸಲು ಸಲಹೆಗಳು!ಸದಾ ಮೊಬೈಲ್,ಕಂಪ್ಯೂಟರ್ ಬಳಸುವವರು ಓದಿ
ಕಣ್ಣಿನ ದೃಷ್ಟಿಯನ್ನು ರಕ್ಷಿಸಲು ಈ ಕೆಲವೊಂದು ಸಲಹೆಗಳನ್ನು ಅನುಸರಿಸಿದರೆ ಸಾಕು.ಕಂಪ್ಯೂಟರ್ ಮೊಬೈಲ್ ಜೊತೆ ತುಂಬಾ ಸಮಯವನ್ನು ಕಳೆಯುತ್ತಿದ್ದಾರೆ. ಮನಸ್ಸಿನ ಮನರಂಜನೆಗೆ ಅಥವಾ ಕೆಲಸದ ಸಲುವಾಗಿ ಕಣ್ಣಿನ ದೃಷ್ಟಿ ನಿರಂತರವಾಗಿ ಹಾಳಾಗುತ್ತಿದೆ.ಇಂತಹ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು.
1, ಮೀನು ಆಹಾರದಲ್ಲಿ ಒಮೆಗಾ 3 ಕೊಬ್ಬಿನ ಆಮ್ಲ ತುಂಬಿರುವ ಮೀನನ್ನು ಸೇವಿಸಿ. ವಾರದಲ್ಲಿ ಎರಡು ಬಾರಿ ಮೀನನ್ನು ಸೇವಿಸಿ.ಇದು ಒಳ ಕಣ್ಣಿನ ಸಿಂಡ್ರೋಮ್ ತಪ್ಪಿಸಲು ಉತ್ತಮ ಮಾರ್ಗವಾಗಿದೆ.
2, ನಿರಂತರವಾಗಿ ನಿಮ್ಮ ಕಣ್ಣುಗಳನ್ನು ಮೀಟುಕಿಸುತ್ತಿರುವುದು ನಿಮ್ಮ ಕಣ್ಣುಗಳನ್ನು ಫ್ರೆಶ್ ಆಗಿ ಇಡಲು ಮತ್ತು ಕಣ್ಣಿನ ಸುಸ್ತು ಅಥವಾ ನೋವನ್ನು ತಪ್ಪಿಸಲು ಬಹಳ ಸರಳ ಮಾರ್ಗವಾಗಿದೆ. ಕಂಪ್ಯೂಟರ್ ಬಳಕೆದಾರರು ಹೀಗೆ ನಿಮ್ಮ ಕಣ್ಣನ್ನು ಪ್ರತಿ 3 ಸೆಕೆಂಡ್ ಗೆ ಕಣ್ಣು ಮೀಟುಕಿಸುವುದು ಒಳ್ಳೆಯದು.
3,ಸೂರ್ಯನ ಕಿರಣಗಳು ನಿಮ್ಮ ಕಣ್ಣುಗಳಿಗೆ ಅತ್ಯುತ್ತಮ ಉಚಿತ ಚಿಕಿತ್ಸೆಯಾಗಿದೆ. ಬೆಳಗ್ಗೆ ಅಥವಾ ಸಂಜೆ ಸೂರ್ಯನ ಕಿರಣ ಕಣ್ಣಿನ ಮೇಲೆ ಬೀಳುವುದರಿಂದ ಬಿಗಿಯಾದ ನರಗಳ ಸ್ನಾಯು ಬಿಡಿ ಬಿಡಿಯಾಗಿ ಕಣ್ಣುಗಳು ಉತ್ತಮ ದೃಷ್ಟಿಯನ್ನು ಪಡೆಯಲು ಸಹಾಯವಾಗುತ್ತದೆ.
4, ನಿಯಮಿತವಾಗಿ ನೀರನ್ನು ಕುಡಿಯುತ್ತಿದ್ದರೆ ಡಿಹೈಡ್ರೇಷನ್ ಯಿಂದ ದೃಷ್ಟಿ ಸುಧಾರಿಸುತ್ತದೆ.
5, ಒಣ ಗಾಳಿಯಿಂದ ದೂರವಿರಿ. ಸುರಕ್ಷಿತ ಕನ್ನಡಕವನ್ನು ಧರಿಸಿ. ಕಣ್ಣಿನ ಗಾಯಗಳು ನಿಮ್ಮ ಕಣ್ಣಿನ ದೃಷ್ಟಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು.
6, ಮೊಟ್ಟೆಯನ್ನು ಸೇವಿಸಿ. ಮೊಟ್ಟೆಗಳು ಸರಿಯಾದ ದೃಷ್ಟಿಗೆ ಹಾಗೂ ಕುರುಡು ಮಾಡಬಲ್ಲ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
7, ಧೂಮಪಾನವನ್ನು ಮಾಡಬೇಡಿ.ಅತಿಯಾದ ಧೂಮಪಾನ ಕಣ್ಣಿಗೆ ಆಪ್ಟಿಕ್ ನರಕ್ಕೆ ಹಾನಿಮಾಡುತ್ತದೆ. ಕಣ್ಣಿನ ಸಮಸ್ಯೆಯನ್ನು ತಪ್ಪಿಸುವ ದೃಷ್ಟಿಯಿಂದ ಮತ್ತು ಉತ್ತಮ ಕಣ್ಣಿನ ಆರೋಗ್ಯಕ್ಕೆ ಧೂಮಪಾನ ಬಿಡುವುದು ಒಳ್ಳೆಯದು.
8,ಪಾಲಕ್ ಸೊಪ್ಪು ಸೇವನೆಯಿಂದ ಕಣ್ಣಿನ ದೃಷ್ಟಿಗೆ ಒಳ್ಳೆಯದು.
9, ಚೆನ್ನಾಗಿ ನಿದ್ದೆ ಮಾಡಬೇಕು. ಇದು ಉತ್ತಮ ದೃಷ್ಟಿಗೆ ಸಹಾಯ ಮಾಡುತ್ತದೆ.ನಿಮ್ಮ ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ.
10, ಕಣ್ಣಿಗೆ ಸಂಬಂಧಿಸಿದ ಆಹಾರವನ್ನು ಸೇವಿಸಿ.ಕ್ಯಾರೆಟ್ ಮತ್ತು ಆರೋಗ್ಯವನ್ನು ಹೆಚ್ಚಿಸುವ ಹಣ್ಣನ್ನು ಸೇವಿಸಿ. ಉತ್ತಮ ಕಣ್ಣಿನ ಆರೋಗ್ಯಕ್ಕಾಗಿ ಉತ್ತಮ ರೀತಿಯಲ್ಲಿ ಕಣ್ಣಿನ ಆರೈಕೆ ಮಾಡುವುದು ಬಹಳ ಅಗತ್ಯ.