ಆಲಿವ್‌ ಆಯಿಲ್‌ ಬಳಕೆಯ ಪ್ರಯೋಜನ ತಪ್ಪದೇ ತಿಳಿದು ಬಳಸಿ!

0
552

ಆರೋಗ್ಯದ ದೃಷ್ಟಿಯಿಂದ ದೇಹಕ್ಕೆ ಒಳ್ಳೆಯ ಎಣ್ಣೆ ಎಂದರೆ ಆಲಿವ್ ಆಯಿಲ್. ಈ ಎಣ್ಣೆಯಲ್ಲಿ ದೇಹಕ್ಕೆ ಅನುಕೂಲಕರವಾದ ಬಹಳಷ್ಟು ಅಂಶಗಳು ಇವೆ. ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ರಕ್ತದಲ್ಲಿ ಶೇಕಡವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

ಆಲಿವ್ ಎಣ್ಣೆ ಸೇವಿಸುವುದರಿಂದ ಹೃದಯಕ್ಕೆ ತುಂಬಾ ಒಳ್ಳೆಯದು. ಆಲಿವ್ ಎಣ್ಣೆಯಲ್ಲಿ ಮೋನೊಸಚ್ಚರಿಟೆಡ್ ಫ್ಯಾಟ್ ಎಂಬ ಅಂಶವಿದ್ದು ಇದು ಮಧುಮೇಹ ಬರುವುದನ್ನು ತಡೆಗಟ್ಟುತ್ತದೆ. ಸಾಮಾನ್ಯವಾಗಿ ಮಧುಮೇಹ ಅನುವಂಶಿಯಗಿ ಬರುವ ಸಾಧ್ಯತೆ ಹೆಚ್ಚು.

ಇಂತಹ ಸಂದರ್ಭದಲ್ಲಿ ಪ್ರತಿದಿನ ಎರಡು ಚಮಚ ಆಲಿವ್ ಎಣ್ಣೆಯನ್ನು ಆಹಾರದೊಳಗೆ ಸೇರಿಸಿದರೆ ಮಧುಮೇಹ ಬರುವ ಸಾಧ್ಯತೆ ಶೇಕಡಾ 50ರಷ್ಟು ಕಡಿಮೆಯಾಗುತ್ತದೆ. ಕೆಲವು ವೈಪರಿತ್ಯ ಕಾರಣ ಡೆಡ್ ಸೆಲ್ಸ್ ಸಮಪ್ರಮಾಣದಲ್ಲಿ ನ್ಯೂ ಸೆಲ್ ಹುಟ್ಟದೇ ಇರುವ ಕಾರಣ ದೇಹ ಸೊರಗುತ್ತದೆ.

ಇದರಿಂದ ಹಲವಾರು ರೀತಿಯ ರೋಗದ ಸಮಸ್ಯೆ ಎದುರಾಗುತ್ತದೆ. ಇದರಲ್ಲಿರುವ ಫ್ಯಾಟ್ ಸೆಲ್ಸ್ ಸರಿ ಪ್ರಮಾಣದಲ್ಲಿ ಮರು ಹುಟ್ಟು ಪಡೆಯಲು ಸಹಕಾರಿ ಮಾಡುತ್ತದೆ.

ಇದರಿಂದ ದೇಹದ ಆರೋಗ್ಯವೂ ಉತ್ತಮವಾಗಿರುತ್ತದೆ. ಪಿತ್ತದಿಂದ ಉತ್ಪತ್ತಿಯಾಗುವ ಪಿತ್ತರಸ ಕರುಳುಗಳ ಒಳ ಚಲನೆಗೆ ನೈಸರ್ಗಿಕವಾದ ಎನರ್ಜಿಯನ್ನು ನೀಡುತ್ತದೆ.

ಆಲಿವ್ ಎಣ್ಣೆಯಲ್ಲಿರುವ ವಿಟಮಿನ್ ಎ,ವಿಟಮಿನ್ ಎ ವಿಟಮಿನ್ ಕೆ, ಕಬ್ಬಿಣ ಇಂತಹ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಸರಿಪಡಿಸಿ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ.

LEAVE A REPLY

Please enter your comment!
Please enter your name here