ಮದುವೆ ವಿಳಂಬವಾಗುತ್ತಿದೆಯೇ ? ಹಾಗಾದ್ರೆ ಈ ಸಣ್ಣ ಕೆಲಸ ಮಾಡಿದರೆ ಸಾಕು ನಿಮ್ಮ ಮದುವೆ ಬೇಗ ಆಗುತ್ತದೆ
ಮದುವೆಯ ಬಗ್ಗೆ ಹಲವಾರು ರೀತಿಯ ಯೋಚನೆಗಳು ಹುಟ್ಟಿಕೊಳ್ಳುತ್ತವೆ. ಪ್ರತಿಯೊಬ್ಬರಲ್ಲೂ ವಿಭಿನ್ನವಾದ ಅಭಿಪ್ರಾಯ ಇರುತ್ತದೆ.ಇದು ಇಬ್ಬರ ನಡುವೆ ಇರುವ ಅತ್ಯಂತ ಸುಂದರ ಭಾವುಕವಾದ ಸಂಬಂಧ.ಕಾಲ ಬದಲಾದಂತೆ ಕೆಲವೊಂದು ಸಂಪ್ರದಾಯ ಆಚರಣೆ ಬದಲಾಗುತ್ತಿದೆ.ಇಂತಹ ಸಂಪ್ರದಾಯದಲ್ಲಿ ಮದುವೆ ಕೂಡ ಒಂದು.
ಹಿಂದಿನ ಕಾಲದಲ್ಲಿ 18 ವರ್ಷ ಆದ ಬಳಿಕ ಮದುವೆಯಾಗುತ್ತಿದ್ದರು. ಆದರೆ ಇವಾಗ ಉನ್ನತ ಶಿಕ್ಷಣ ಹಾಗೂ ಹಲವಾರು ಕಾರಣಗಳಿಂದ ಮುಂದೆ ಹೋಗುತ್ತದೆ.ಕೆಲವರು ಎಷ್ಟೇ ಹುಡುಕಿದರೂ ಸಂಗಾತಿ ಸಿಗದೇ ಮದುವೆ ವಿಳಂಬ ಆಗುತ್ತದೆ.
ಹಿಂದೂ ಧರ್ಮದ ಪ್ರಕಾರ ಹೇಳುವುದಾದರೆ ಕೆಲವರ ಮದುವೆ ಆಗಲು ಪಿತೃ ದೋಷ ಹಾಗೂ ಸರ್ಪ ದೋಷ ಕಾರಣವಾಗುತ್ತದೆ. ಹಿಂದೂ ಧರ್ಮದಲ್ಲಿ ಮದುವೆ ವಿಳಂಬವಾಗಲು ಪ್ರಮುಖ ಕಾರಣ ಪಿತೃ ದೋಷ. ಪೂರ್ವಜರು ಮಾಡಿದ ಶಾಪವಲ್ಲ ಅವರು ಕೆಲವು ಮಾಡಿದ ಕೆಲವೊಂದು ಕೆಟ್ಟ ಕಾರ್ಯಗಳ ಫಲವನ್ನು ಮುಂದಿನ ಪೀಳಿಗೆ ಅನುಭವಿಸಬೇಕಾಗುತ್ತದೆ.
ಪಿತೃದೋಷ ಕಡಿಮೆ ಮಾಡಲು ಒಳ್ಳೆಯ ಕರ್ಮವನ್ನು ಮಾಡಬೇಕು.ಇನ್ನು ಪರಿಹಾರ ಏನೆಂದರೆ ಹಣ, ಒಡವೆ, ಬಟ್ಟೆ ಅಗತ್ಯ ಇರುವವರಿಗೆ ದಾನ ಮಾಡುವುದು.ಶನಿವಾರದ ದಿನದಂದು ಅಕ್ಕಿಯ ಉಂಡೆ ಮಾಡಿ ಗೋವು, ಕಾಗೆ, ಮೀನುಗಳಿಗೆ ತಿನ್ನಿಸವೇಕು. ಪಿತೃ ದೋಷದಿಂದ ಪಾರಾಗಲು ಸೋಮವಾರ ಹಾಗೂ ಶನಿವಾರ ಶಿವನಿಗೆ ಅಭಿಷೇಕವನ್ನು ಮಾಡಬೇಕು. ಶನಿ ದೇವರ ಪೂಜೆಯನ್ನು ಮಾಡಿಕೊಳ್ಳುವುದರಿಂದ ಪಿತೃ ದೋಷ ಕಡಿಮೆಯಾಗುತ್ತದೆ.
ಸರ್ಪದೋಷ ಮದುವೆ ವಿಳಂಬವಾಗಲು ಮತ್ತೊಂದು ಕಾರಣ. ಸರ್ಪ ಕೊಂದವರಿಗೆ ಅಥವಾ ಒಡೆದವರಿಗೆ ಶಾಪ ತಟ್ಟಿರುತ್ತದೆ. ಸರ್ಪದೋಷ ಹಲವಾರು ರೀತಿಯ ಅಡೆತಡೆಗಳನ್ನು ಉಂಟುಮಾಡುತ್ತದೆ. ವ್ಯಾಪಾರ ಮತ್ತು ಮದುವೆ ಸರ್ಪ ದೋಷಕ್ಕೆ ಒಳಗಾಗಿರುತ್ತದೆ.
ಸರ್ಪದೋಷ ಮುಂದಿನ ಜನ್ಮದಲ್ಲೂ ಕೂಡ ಕಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಸುಬ್ರಹ್ಮಣ್ಯ, ಕಾರ್ತಿಕೇಯನ್ನು ಆರಾಧನೆ ಮಾಡಬೇಕು.ಇನ್ನು ಶನಿ ದೇವರನ್ನು ಮತ್ತು ಶಿವನನ್ನು ಪೂಜಿಸಿಕೊಳ್ಳುವುದು ಸರ್ಪ ದೋಷ ನಿವಾರಣೆಯಾಗುತ್ತದೆ. ಮದುವೆ ಕೊಡಬೇಕು ಎಂದರೆ ಶಾಸ್ತ್ರಗಳ ಪ್ರಕಾರ ಪರಿಹಾರ ಮಾಡಿಕೊಂಡರೆ ಸಾಕು ಮದುವೆ ಬೇಗ ಜರುಗುತ್ತದೆ.