ಕನ್ಯಾರಾಶಿಯವರ ಕಷ್ಟಗಳಿಗೆ ಸರಳ ಪರಿಹಾರಗಳು!

Featured-Article

ಶಾಸ್ತ್ರಗಳು ಹೇಳಿರುವ ಕನ್ಯಾ ರಾಶಿಯವರು ಈ ಸರಳ ಪರಿಹಾರವನ್ನು ಅನುಸರಿಸಿದರೆ ಸಾಕು ನಿಮ್ಮ ಕಷ್ಟಗಳೆಲ್ಲ ಮಂಜಿನಂತೆ ಕರಗಿ ಯಶಸ್ಸಿನ ಕಡೆಗೆ ಸಾಗುತ್ತದೆ. ಪ್ರತಿದಿನ ಶುಭ್ರವಾಗಿ ಶ್ರೇದ್ದೆ ಭಕ್ತಿಯಿಂದ ದೇವರಿಗೆ ಕೈಮುಗಿದು ನಿಮ್ಮ ಕೆಲಸಗಳನ್ನು ಪ್ರಾರಂಭಿಸಿ.

ಮನೆಯಲ್ಲಿ ಯಾವಾಗಲು ಪೂಜಾ ಸ್ಥಳವನ್ನು ಬದಲಾಯಿಸಬಾರದು.ಮನೆ ಚಿಕ್ಕದಾದರೂ ಪೂಜೆಗೆ ಒಂದು ಸ್ಥಳವನ್ನು ಗುರುತು ಮಾಡಿ ಪೂಜಿಸಿದರೆ ಒಳ್ಳೆಯದಾಗುತ್ತದೆ. ಈ ರಾಶಿಯವರಿಗೆ ಬುಧವಾರ ದಿನ ವಿಶೇಷವಾದ ದಿನವಾಗಿದೆ.ಯಾವುದೇ ಮುಖ್ಯ ಕೆಲಸವನ್ನು ಪ್ರಾರಂಭಿಸುವಾಗ ಬುಧವಾರದಂದು ಪ್ರಾರಂಭಿಸಿದರೆ ಮಾಡುವ ಕೆಲಸ ಯಶಸ್ವಿಯಾಗುತ್ತದೆ.

ಬುಧವಾರ ದಿನದಂದು ಯಾರನ್ನು ಶಪಿಸಬೇಡಿ.ಆದ್ದರಿಂದ ನಿಮಗೆ ಕೆಡಕು ಉಂಟಾಗುತ್ತದೆ.ಬುಧವಾರ ದಿನ ಯಾರಿಗೂ ಮಾತನ್ನು ಕೊಡಬೇಡಿ.ಅದರಲ್ಲಿ ತೊಂದರೆಯಲ್ಲಿ ಸಿಲುಕಬಹುದು. ಬುಧವಾರ ದಿನದಂದು ಆರೋಗ್ಯ ಚೆನ್ನಾಗಿದ್ದರೆ ರಾತ್ರಿ ಉಪವಾಸವನ್ನು ಮಾಡಿ.ಆದ್ದರಿಂದ ನಿಮಗೆ ಶುಭಫಲ ಉಂಟಾಗುತ್ತದೆ.ನಿಮ್ಮ ಬಳಿ ಸದಾಕಾಲ ಹಸಿರು ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳಿ.ಇದರಿಂದ ನಿಮಗೆ ಅದೃಷ್ಟ ಉಂಟಾಗುತ್ತದೆ.

ಬುಧವಾರ ದಿನದಂದು ಸಂಜೆಯ ವೇಳೆ ಮಣ್ಣಿನ ಹಣತೆಯಿಂದ ಬೆಳಗಿ ಹರಿಯುವ ನೀರಿಗೆ ತೆಲಿ ಬಿಡುವುದರಿಂದ ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ.ಕನ್ಯಾ ರಾಶಿಯ ಹುಡುಗಿಯರು ಮೂಗಿನ ಬೋಟ್ಟನ್ನು ಧರಿಸುವುದರಿಂದ ಕುಟುಂಬದ ಸಂಪತ್ತು ಹೆಚ್ಚಾಗುತ್ತದೆ.

ಹೊಸ ಬಟ್ಟೆ ಧರಿಸುವ ಮೊದಲು ಗಂಗಜಲದಿಂದ ತೊಳೆದು ಧರಿಸಿ.ಆದ್ದರಿಂದ ಮನೆಯಲ್ಲಿ ಯಾವುದಕ್ಕೂ ಕೊರತೆ ಉಂಟಾಗುವುದಿಲ್ಲ.ಶನಿಗ್ರಹ ಶಾಂತಿ ಮಾಡಿಸಿಕೊಳ್ಳುವುದು ಒಳ್ಳೆಯದು.ಈ ಎಲ್ಲಾ ಪರಿಹಾರವನ್ನು ಮಾಡಿದರೆ ಬಹುಕಾಲ ಕಾಡುತ್ತಿರುವ ದುರದೃಷ್ಟ ದೂರ ಆಗಿ ನೆಮ್ಮದಿ ಜೀವನ ನಿಮ್ಮದಾಗಲಿದೆ.

Leave a Reply

Your email address will not be published.