ಗಂಟಲ ಸಮಸ್ಯೆಗಳಿಗೆ ಸರಳ ಸೂಕ್ತ ಮನೆ ಮದ್ದು!

0
520

ಗಂಟಲ ಸಮಸ್ಯೆ ಟಾನ್ಸಿಲೈಟಿಸ್ ಪದೇ ಪದೇ ಆಗುತ್ತಿದ್ದರೆ ಈ ಮನೆಮದ್ದನ್ನು ಬಳಸಿ.

ತ್ರಿಕಟು ಚೂರ್ಣ

ಶುಂಠಿ, ಹಿಪ್ಪಲಿ ಮತ್ತು ಕಾಳುಮೆಣಸು.ಈ ಮೂರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸಿ ಮಾಡಿ ಪೌಡರ್ ಮಾಡಿಕೊಳ್ಳಿ.ಈ ಪೌಡರ್ ಅನ್ನು ಬೆಳಿಗ್ಗೆ , ಮಧ್ಯಾಹ್ನ , ಸಂಜೆ ತಿಂಡಿ ಅಥವಾ ಊಟ ದ 15 ನಿಮಿಷದ ಮುಂಚೆ ಜೇನುತುಪ್ಪದೊಂದಿಗೆ ಅರ್ಧ ಸ್ಪೂನ್ ಈ ಪುಡಿಯನ್ನು ಮಿಕ್ಸ್ ಮಾಡಿಕೊಂಡು ಸೇವಿಸಿ .ಇದು ತುಂಬಾ ಖಾರವಾಗಿರುತ್ತದೆ ಹಾಗೂ ಇದು ಟಾನ್ಸಿಲೈಟಿಸ್ ಅನ್ನು ನಿವಾರಣೆ ಮಾಡುತ್ತದೆ.ಜೀರ್ಣಕ್ರಿಯೆಗೆ ಸಹಕಾರಿ , ಕಫ ನಿವಾರಣೆ ಮಾಡುತ್ತದೆ ಹಾಗೂ ಟಾನ್ಸಿಲೈಟಿಸ್ ಕೂಡ ಕಡಿಮೆಯಾಗುತ್ತದೆ.

ಸಾಮಾನ್ಯ ವಯಸ್ಕರರು ಅರ್ಧ ಸ್ಪೂನ್ ತೆಗೆದುಕೊಂಡರೆ ಚಿಕ್ಕಮಕ್ಕಳಿಗೆ ಚಿಟಿಕೆಯಷ್ಟು ನೀಡಿದರೆ ಸಾಕು.ಮೇಲೆ ತಿಳಿಸಿರುವ 3 ಪದಾರ್ಥಗಳನ್ನು ಉಷ್ಣ ಪ್ರಕೃತಿ ಯನ್ನು ಹೊಂದಿವೆ.ಅತಿಯಾಗಿ ಟಾನ್ಸಿಲೈಟಿಸ್ ತೊಂದರೆಯಿರುವವರು ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.ಇನ್ನು ಅದರ ಜೊತೆಗೆ ಹೊಟ್ಟೆಗೆ ತೆಗೆದುಕೊಳ್ಳುವ ಮನೆ ಮದ್ದನ್ನು ಇಲ್ಲಿ ತಿಳಿಸಲಾಗಿದೆ.ಗ್ರಂಧಿಗೆ ಅಂಗಡಿಗಳಲ್ಲಿ ಕಚೋರ ಎಂದೂ ದೊರೆಯುತ್ತದೆ.ಕಚೋರ ಎನ್ನುವುದು ಶುಂಠಿ ಜಾತಿಗೆ ಸೇರಿದ 1 ಗಿಡ ಅದರ ಬೇರು ಶುಂಠಿಯ ತರಹ ಇರುತ್ತದೆ.

ಗಾರ್ಗ್ಲಿಂಗ್

ಇದರಿಂದ ಸ್ವಲ್ಪ ಕಡಿಮೆಯಾಗುತ್ತದೆ.1 ಪಾತ್ರೆಗೆ 1 ಲೀಟರ್ ನೀರು ಹಾಕಿ ಅದರೊಳಗೆ ಬೇವಿನ ಎಲೆ ಹಾಕಿ ಅದು ಅರ್ಧ ಆಗುವವರೆಗೆ ಕುದಿಸಿ ನಂತರ ಅದಕ್ಕೆ ಸ್ವಲ್ಪ ಅರಿಶಿಣ ಹಾಕಿ ಬಾಯಿಯೊಳಗೆ ಹಾಕಿಕೊಂಡು ಗಾರ್ಗಲ್ ಮಾಡಬೇಕು.

ಈ ರೀತಿ ಪದೇ ಪದೆ ಮಾಡುವುದರಿಂದ ಗಂಟಲಿನ ಇನ್ಫೆಕ್ಷನ್ ದೂರಾಗುತ್ತದೆ.

ಧನ್ಯವಾದಗಳು.

LEAVE A REPLY

Please enter your comment!
Please enter your name here