ಹಲವಾರು ಜನರಿಗೆ ತಮ್ಮ ಆರೋಗ್ಯದ ವಿಚಾರದಲ್ಲಿ ತುಂಬಾ ಚಿಂತೆ ಇರುತ್ತದೆ. ಏಕೆಂದರೆ ಅವರು ಆರೋಗ್ಯವಾಗಿರಲು ಬಯಸುತ್ತಾರೆ. ಶರೀರಕ್ಕೆ ಸಂಬಂಧಿಸಿದ 80% ರೋಗಗಳು ಹೊಟ್ಟೆಗೆ ಸಂಬಂಧಿಸಿದೆ.ಊಟ ಹಾಗೂ ತಿಂಡಿಯಿಂದ ಮಾಡುವ ಹಲವು ತಪ್ಪುಗಳಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆಹಾರ ಜೀರ್ಣವಾದ ಮೇಲೆ ಶರೀರಕ್ಕೆ ಪೌಷ್ಟಿಕಾಂಶ ಸಿಗುತ್ತದೆ.ಊಟದ ನಂತರ ಕೆಲವು ತಪ್ಪುಗಳನ್ನು ಮಾಡಬಾರದು.
ಏನೆಂದರೆ ಕೆಲವರಿಗೆ ಊಟದ ನಂತರ ಧೂಮಪಾನ ಮಾಡುವ ಅಭ್ಯಾಸ ಇರುತ್ತದೆ.ಊಟದ ನಂತರ ಧೂಮಪಾನ ಮಾಡುವುದರಿಂದ ಗ್ಯಾಸ್ಟಿಕ್, ಅಸಿಡಿಟಿ ಸಮಸ್ಸೆ ಉಂಟಾಗುತ್ತದೆ.ಇದರಿಂದ ಪಚನಕ್ರಿಯೆ ದುರ್ಬಲಗೊಂಡು ದೊಡ್ಡ ರೋಗವನ್ನು ಎದುರಿಸಬೇಕಾಗುತ್ತದೆ.
ಇನ್ನು ಊಟ ಅದತಕ್ಷಣ ಯಾವುದೇ ಹಣ್ಣನ್ನು ಸೇವಿಸಬಾರದು.ಏಕೆಂದರೆ ಇದು ಆರೋಗ್ಯಕ್ಕೆ ಹಾನಿಕಾರಕ. ವಿಶೇಷವಾಗಿ ನೀರಿನ ಅಂಶ ಇರುವ ಹಣ್ಣುಗಳು. ಅಷ್ಟೇ ಅಲ್ಲದೆ ಅದಾದ ಬಳಿಕ ನೀರನ್ನು ಸಹ ಕುಡಿಯಬಾರದು. ಏಕೆಂದರೆ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಆಸಿಡ್ ಪ್ರಮಾಣ ಕಡಿಮೆ ಆಗುತ್ತದೆ ಮತ್ತು ಇದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.
ಇನ್ನು ಕೆಲವರು ಊಟದ ನಂತರ ಚಹಾ ಕುಡಿಯಲು ಬಯಸುತ್ತಾರೆ.ಇದರಿಂದ ಆಹಾರದಲ್ಲಿ ಇರುವ ಎಕ್ಸ್ಟ್ರಾ ಗ್ಲುಕೋಸ್ ಕಡಿಮೆ ಆಗುವುದಿಲ್ಲ.ಇದರಿಂದ ವ್ಯಕ್ತಿಗೆ ಬಿಪಿ, ಹೃದಯ ಸಮಸ್ಸೆ ಮತ್ತು ಡಯಾಬಿಟಿಸ್ ತೊಂದರೆ ಎದುರಾಗುತ್ತದೆ.ಇನ್ನು ಊಟ ಆದಮೇಲೆ ಸ್ನಾನ ಮಾಡಬಾರದು.
ಏಕೆಂದರೆ ಸ್ನಾನ ಆದಮೇಲೆ ಶರೀರದ ತಾಪ ಮಾನ ಕಡಿಮೆ ಆಗುತ್ತದೆ.ಒಂದು ವೇಳೆ ಈ ಅಭ್ಯಾಸಗಳು ಇದ್ದಾರೆ ಇವತ್ತೇ ನಿಲ್ಲಿಸಿ ಮತ್ತು ಆರೋಗ್ಯವಾಗಿ ಇರಿ.