ಸಂಪತ್ತು ಒಲಿಯಲು ವಾಸ್ತು ಪ್ರಕಾರ ಮನೆ ಹೇಗಿರಬೇಕು ಗೊತ್ತಾ!

Featured-Article

ಮನೆಯೊಂದು ತನ್ನದೇ ಆದ ಎನರ್ಜಿಯನ್ನು ಹೊಂದಿರುತ್ತದೆ.ಅದು ನಿವಾಸಿಗಳ ಮೇಲೆ ಪ್ರಭಾವ ಬೀರುತ್ತದೆ
ಆದ್ದರಿಂದ ಮನೆಯೊಳಗೆ ಸದಾ ಸಂಪತ್ತು ನೆಲೆಸುವಂತೆ ಮಾಡಲು ಕೆಲವು ವಾಸ್ತು ನಿಯಮಗಳಿವೆ.ಮನೆ ವಾಸ್ತು ಪ್ರಕಾರ ಮಾಡಿದರೆ ಅದೃಷ್ಟ ಎಂಬ ನಂಬಿಕೆ ನಮ್ಮಲ್ಲಿದೆ ಆದ್ದರಿಂದಲೇ ವಾಸ್ತುಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಮನೆಯ ಮುಂಬಾಗಿಲು ಆಕರ್ಷಕವಾಗಿರಬೇಕು.ಮನೆಯ ಮುಂಬಾಗಿಲು ಆಕರ್ಷಕವಾಗಿದ್ದರೆ ಪಾಸಿಟಿವ್ ಎನರ್ಜಿಯ ಅನುಭವ ಉಂಟಾಗುತ್ತದೆ.ಮನೆಯ ಮುಂಬಾಗಿಲು ಆಕರ್ಷಕವಾಗಿದಿದ್ದರೆ ಮನೆಗೆ ಶುಭ ತರುವುದು ಅಲ್ಲದೆ ಮನೆಯ ಮುಂಬಾಗಿಲು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ ಆದ್ದರಿಂದಲೇ ರಂಗೋಲಿ ಹಾಕಿ ಮನೆಯ ಮುಂಬಾಗಿಲನ್ನು ಅಲಂಕರಿಸುವ ಪದ್ಧತಿ ನಮ್ಮಲ್ಲಿದೆ.ಮನಿಪ್ಲಾಂಟ್ ಮನೆಯಲ್ಲಿದ್ದರೆ ಸಂಪತ್ತು ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.

ವಾಸ್ತು ಪ್ರಕಾರ ಮನೆ ಬಾಗಿಲು ಯಾವ ದಿಕ್ಕಿಗೆ ಇರಬೇಕು?

ಮನೆಯ ನೈರುತ್ಯದಲ್ಲಿ ಒಳ್ಳೆಯದಲ್ಲ,ಆರ್ಥಿಕ ಸಂಕಷ್ಟ ಎದುರಾಗುವುದು.ಮನೆಯ ಮುಂಭಾಗ ಉತ್ತರ ಭಾಗದಲ್ಲಿದ್ದರೆ ವೃತ್ತಿಯಲ್ಲಿ ಪ್ರಗತಿ ಉಂಟಾಗುವುದು, ಆರ್ಥಿಕವಾಗಿ ತೊಂದರೆಗಳೂ ಇರುವುದಿಲ್ಲ.ಇನ್ನು ಮನೆಯ ಮುಂಭಾಗ ಪೂರ್ವಕ್ಕೆ ಇದ್ದರೆ ಮನೆಯಲ್ಲಿ ಶಾಂತಿ ನೆಲೆಸುವುದು. ಪಶ್ಚಿಮದಲ್ಲಿದ್ದರೆ ಸಂಪತ್ತು ವೃದ್ಧಿಸುವುದು.ಬಾಗಿಲು ದಕ್ಷಿಣದಲ್ಲಿ ಇದ್ದರೂ ಒಳ್ಳೆಯದೇ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಅಡುಗೆ ಮನೆಗೆ ಕೆಂಪು ಬಣ್ಣ ಶುಭವಲ್ಲ.ಅಡುಗೆ ಮನೆಯಲ್ಲಿ ಕಸದ ಬುಟ್ಟಿ , ವಾಷಿಂಗ್ ಮಷಿನ್ , ಮಿಕ್ಸರ್ , ಗ್ರೈಂಡರ್ ಇಡಬೇಡಿ ಅಡುಗೆಮನೆಯಲ್ಲಿರುವ ಅಗ್ನಿ ಪವಿತ್ರತೆಯ ಸಂಕೇತ ಹಣ. ಅವಕಾಶಗಳು ದೊರೆಯಲು ಸಂಪತ್ತು ನಿಮ್ಮನ್ನು ಹುಡುಕಿ ಬರಲು ಈ ವಸ್ತುಗಳನ್ನು ಅಡುಗೆಮನೆಯಲ್ಲಿ ಇಡದಿರಿ.

ಸಂಪತ್ತಿನ ದಿಕ್ಕು ನೈರುತ್ಯ

ಈ ದಿಕ್ಕನ್ನು ಸ್ವಚ್ಚವಾಗಿಡಿ.ಈ ದಿಕ್ಕನ್ನು ಓದುವ ಕೋಣೆ ಮಾಡಿದರೆ ತುಂಬಾ ಒಳ್ಳೆಯದು. ಬೆಲೆಬಾಳುವ ವಸ್ತುಗಳನ್ನು ಭದ್ರವಾಗಿಡಿ,ಹೀಗೆ ಮಾಡಿದರೆ ಸಂಪತ್ತು ಶಾಶ್ವತವಾಗಿರುವುದು.

ಧನ್ಯವಾದಗಳು.

Leave a Reply

Your email address will not be published.