ಸ್ಯಾಂಡಲ್ವುಡ್ ನಿಂದ ಚಿತ್ರ ರಂಗಕ್ಕೆ ಎಂಟ್ರಿ ನೀಡಿ ಅನಂತರ ತೆಲುಗಿನಲ್ಲಿ ಸ್ಟಾರ್ ನಟಿಯಾಗಿ, ಇದೀಗ ಕನ್ನಡ ತೆಲುಗು ಮಾತ್ರವೇ ಅಲ್ಲದೇ ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಟಿ ರಶ್ಮಿಕಾ ಮಂದಣ್ಣ. ಸದ್ಯಕ್ಕಂತೂ ರಶ್ಮಿಕಾ ದಕ್ಷಿಣದ ಹಾಗೂ ಬಾಲಿವುಡ್ ನಲ್ಲೂ ಸಹಾ ಬಹು ಬೇಡಿಕೆಯ ನಟಿಯಾಗಿದ್ದಾರೆಂದು ಎಲ್ಲರೂ ಒಪ್ಪಲೇ ಬೇಕಾಗಿದೆ.
ಇಂತಹ ನಟಿ ರಶ್ಮಿಕಾ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ ಇಬ್ಬರ ನಡುವೆ ಇರುವ ಲವ್ವಿ ಡವ್ವಿ ವಿಚಾರಗಳ ಆಗಾಗ ಗಾಸಿಪ್ ಗಳಾಗಿ ದೊಡ್ಡ ಸದ್ದು ಸುದ್ದಿ ಮಾಡುವುದು. ಗೀತ ಗೋವಿಂದಂ ಸಿನಿಮಾದಲ್ಲಿ ಇವರಿಬ್ಬರ ಕೆಮಿಸ್ಟ್ರಿ ಅಭಿಮಾನಿಗಳಿಗೆ ಬಹಳ ಇಷ್ಟವಾಗಿತ್ತು. ಅನಂತರ ಇವರ ಜೋಡಿಯಲ್ಲಿ ಬಂದ ಡಿಯರ್ ಕಾಮ್ರೇಡ್ಸ್ ನಲ್ಲಿ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದರು. ಇವರಿಬ್ಬರ ನಡುವಿನ ಸ್ನೇಹ ನೋಡಿ ಅಭಿಮಾನಿಗಳು ಅವರನ್ನು ಲವರ್ಸ್ ಎಂದೇ ತಿಳಿದರು. ಆದರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮಾತ್ರ ನಮ್ಮ ನಡುವೆ ಅಂತಹುದೇನೂ ಇಲ್ಲ ಎಂದೇ ಹೇಳಿಕೊಂಡು ಬರುತ್ತಿದ್ದಾರೆ.
ವಿಜಯ್ ದೇವರಕೊಂಡ ಮೂರು ದಿನಗಳ ಹಿಂದೆ ಇತ್ತು. ಇನ್ನು ವಿಜಯ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ ಒಂದು ದಿನ ತಡವಾಗಿ ವಿಶ್ ಮಾಡಿದ್ದಾರೆ. ರಶ್ಮಿಕಾ ಟ್ವೀಟ್ ಮಾಡುತ್ತಾ, ವಿಜಯ್ ದೇವರಕೊಂಡಾಗೆ ಶುಭಾಶಯ ನೀಡುವ ಹುಮ್ಮಸ್ಸಿನಲ್ಲಿ ಬಳಸಿದ ಒಂದು ಪದ ಅನೇಕರ ಸಿಟ್ಟು, ಅ ಸಮಾಧಾನಕ್ಕೆ ಕಾರಣವಾಗಿದೆ.
ರಶ್ಮಿಕಾ ತಮ್ಮ ಟ್ವೀಟ್ ನಲ್ಲಿ, ಕ್ಷಮೆಯಿರಲಿ, ನಾನು ತಡವಾಗಿ ವಿಶ್ ಮಾಡುತ್ತಿದ್ದೇನೆ, ಹ್ಯಾಪಿಯೆಟ್ಸ್ ಬರ್ತ್ ಡೇ ಸೂಪರ್ ಸ್ಟಾರ್ ದೇವರಕೊಂಡ, ನಿಮಗೆ ಕೇವಲ ಸಂತೋಷ ಮತ್ತು ಸಂತೋಷ ಮಾತ್ರವೇ ಇರಲಿ ಎಂದು ಹೇಳಿದ್ದಾರೆ. ಹೀಗೆ ಟ್ವೀಟ್ ನಲ್ಲಿ ವಿಜಯ್ ದೇವರಕೊಂಡ ಅವರನ್ನು ಹೊಗಳಲು ರಶ್ಮಿಕಾ ಬಳಸಿದ ಪದ ಸೂಪರ್ ಸ್ಟಾರ್ ಈಗ ಎಲ್ಲರ ಕೋ ಪ ಕ್ಕೆ ಕಾರಣವಾಗಿದೆ.
ರಶ್ಮಿಕಾ ಮಾಡಿದ ಟ್ವೀಟ್ ನೋಡಿದ ನೆಟ್ಟಿಗರು ಸೂಪರ್ ಸ್ಟಾರ್ ಎನ್ನುವ ಪದವು ಕಷ್ಟ ಪಟ್ಟು ಕೆಲಸ ಮಾಡಿದಾಗ ಸಿಗಬೇಕು, ಹೀಗೆ ಸಿಕ್ಕ ಸಿಕ್ಕ ಹಾಗೆ ಎಲ್ಲರಿಗೂ ಬಳಸುವುದಕ್ಕಲ್ಲ ಎಂದಿದ್ದಾರೆ. ಅಲ್ಲದೇ ಸೂಪರ್ ಸ್ಟಾರ್ ಎಂದರೆ ತೆಲುಗಿನಲ್ಲಿ ಅದು ಹಿರಿಯ ನಟ ಮಹೇಶ್ ಬಾಬು ಅವರ ತಂದೆಗೆ ಇರುವ ಬಿರುದು, ಹಾಗೇ ತಮಿಳಿನಲ್ಲಿ ರಜನೀಕಾಂತ್ ಅವರಿಗೆ ನೀಡಿರುವ ಗೌರವ.
ಆ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ಶ್ರಮ ಪಟ್ಟು ಗಳಿಸಬೇಕು ಎಂದಿದ್ದಾರೆ. ಕೆಲವರು ವಿಜಯ್ ದೇವರಕೊಂಡ ಯಾವ ಸೂಪರ್ ಸ್ಟಾರ್? ಎಂದು ವ್ಯಂಗ್ಯ ಮಾಡಿದ್ದಾರೆ. ಒಟ್ಟಾರೆ ರಶ್ಮಿಕಾ ಮಂದಣ್ಣ ಮಾಡಿದ ಒಂದು ಪೋಸ್ಟ್ ಪರಕ್ಕಿಂತ ವಿ ರೋ ಧ ಕ್ಕೆ ಹೆಚ್ಚು ಕಾರಣವಾಗಿದೆ.