ಈ ಸಣ್ಣ ಪೂಜೆಯನ್ನು ಮಾಡಿದರೆ ಮಾಂಗಲ್ಯ ದೋಷ ನಿವಾರಣೆ ಆಗುತ್ತದೆ!

Featured-Article

5 ದಿನ ಈ ಪೂಜೆಯನ್ನು ಮಾಡಿದರೆ ಮಾಂಗಲ್ಯ ದೋಷ ಮತ್ತು ಸಂತಾನ ದೋಷ ನಿವಾರಣೆಯಾಗುತ್ತದೆ. ಜೀವನದಲ್ಲಿ ಪರಿಪೂರ್ಣತೆ ಹೊಂದಬೇಕಾದರೆ ಸಂಸಾರವೆಂಬ ಮಧುರ ಬಂಧನಕ್ಕೆ ಒಳಗಾಗಬೇಕು. ಅವರ ಜೀವನವನ್ನು ಸಾರ್ಥಕ ಪಡಿಸಲು ಒಂದು ಮಗುವಿನ ಜನನ ಆದರೆ ಅವರ ಸುಖ ಆನಂದಕ್ಕೆ ಗಗನವೇ ಮುಟ್ಟುತ್ತದೆ.

ಬಹಳಷ್ಟು ಜನ ಮದುವೆಯಾಗಲು ಸಂತಾನ ಭಾಗ್ಯಕ್ಕೆ ನಾನಾ ವಿಧವಾದ ಪ್ರಯತ್ನವನ್ನು ಪಡುತ್ತಾರೆ. ಮದುವೆಯಾಗದೆ ಇರುವವರು ಯಾವುದೋ ಒಂದು ದೋಷದಿಂದ ಬಳಲುತ್ತಿರುತ್ತಾರೆ.

ಸಂತಾನ ಭಾಗ್ಯವನ್ನು ಬಯಸುವವರು ಈ ಒಂದು ಪೂಜೆಯನ್ನು ಮಾಡಿದರೆ ಬೇಗ ಫಲ ಸಿಗುವುದು. ಇವರಿಗೆ ಮಂಗಳ ಅನುಗ್ರಹ ತುಂಬಾ ಮುಖ್ಯ. ಮಂಗಳ ಎಂದರೆ ಅಂಗಾರಕ ಅವನ ಅನುಗ್ರಹ ಬೇಕು. ಈ ಪೂಜೆಯನ್ನು ಗಂಡುಮಕ್ಕಳು ಅಥವಾ ಹೆಣ್ಣು ಮಕ್ಕಳು ಮಾಡಬಹುದು.

ಮಂಗಳವಾರ ದಿನದಂದು ಪೂಜೆಯನ್ನು ಪ್ರಾರಂಭಿಸಿ ಶನಿವಾರದ ದಿನದಂದು ಅಂತ್ಯಗೊಳಿಸಬೇಕು. ಮಂಗಳವಾರ ಪ್ರಾರ್ಥನ್ ಕಾಲ ಸ್ನಾನವನ್ನು ಮಾಡಿ ನಂತರ ಪೂಜೆ ಮಾಡಲು ಎಲ್ಲಾ ಸಿದ್ಧತೆಗಳನ್ನು ನಡೆಸಬೇಕು. ಪೂಜೆ ಮಾಡುವಾಗ ಆಕಳ ಸಗಣಿಯಿಂದ ಮಾಡಿದ ತೊಪ್ಪೆ ಗಣಪನನ್ನು ಮಾಡಬೇಕು.

ಈ ಗಣಪನನ್ನು ಒಂದು ವೀಳೆದೆಲೆಯಲ್ಲಿ ಕುಂಕುಮದಿಂದ ಶಾಟ್ ಕೋನ ನಕ್ಷತ್ರದಲ್ಲಿ ರಂಗೋಲಿಯನ್ನು ಬರೆಯಬೇಕು.ನಂತರ ಗಣಪನನ್ನು ಎಲೆಯಮೇಲೆ ಪ್ರತಿಷ್ಠಾಪಿಸಿ ಕುಂಕುಮವನ್ನು ಹಚ್ಚಬೇಕು. ನಂತರ 21 ಕೆಂಪು ಹೂವು,21 ಗರಿಕೆ ಹುಲ್ಲು, ಕೆಂಪು ಅಕ್ಷತೆ ತೆಗೆದುಕೊಳ್ಳಿ. ಮೊದಲಿಗೆ ಒಂದು ಗರಿಕೆ, ಒಂದು ಕೆಂಪು ಹೂವು, ಅಕ್ಷತೆ ತೆಗೆದುಕೊಂಡು ಓಂ ಗಂ ಗಣಪತಯೇ ನಮಃ ಎಂದು ಜಪಿಸುತ್ತಾ ಗಣಪನಿಗೆ ಅರ್ಪಿಸಬೇಕು.

ಹೀಗೆ 21 ಬಾರಿ ಜಪಿಸುತ್ತಾ ಗಣಪನಿಗೆ ಪೂಜೆಯನ್ನು ಅರ್ಪಿಸಬೇಕು.ನಂತರ ತಾಂಬೂಲ ಇಡಬೇಕು ಹಾಗೂ ಇನ್ನೊಂದು ವಿಳೇದೇಲೆಯಲ್ಲಿ 21 ನೆನೆಸಿದ ಕಡಲೆ ಕಾಳನ್ನು ಇಡಬೇಕು.ಆ ದಿನ ಸಂಜೆ 6-7 ಒಳಗೆ ಮುತ್ತೈದೆಗೆ ತಾಂಬೂಲ ನೈವೇದ್ಯವನ್ನು ಕೊಟ್ಟು ನಮಸ್ಕರಿಸಬೇಕು.ಅವರ ಮುಂದೆ ಕಡಲೆಕಾಳನ್ನು ತಿನ್ನಬೇಕು.

ಈ ರೀತಿ ಐದು ದಿನ ಮಾಡಬೇಕು. 5 ನೇ ದಿನ ಸ್ವಲ್ಪ ಸಿಹಿ ತಿನಿಸು ತಿನ್ನಿಸಬೇಕು. ಈ ರೀತಿ ಮಾಡಿದರೆ ಎಲ್ಲಾ ಆಕಾಂಕ್ಷೆಗಳು ನೆರವೇರುತ್ತದೆ ಮತ್ತು ಸಂತಾನ ಬಯಸುವವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ.

Leave a Reply

Your email address will not be published.