ಹೊಟ್ಟೆಯ ಮೇಲೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಆಗುವ ಲಾಭಗಳನ್ನ ತಿಳಿದ್ರೆ ಶಾಕ್ ಆಗ್ತೀರ!
ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆಯನ್ನು ಹೊಕ್ಕಳಿನ ಮೇಲೆ ಲೇಪಿಸುವುದು ತುಂಬಾ ಒಳ್ಳೆಯದು. ತೆಂಗಿನ ಎಣ್ಣೆಯನ್ನು ಆಹಾರವಾಗಿ ಉಪಯೋಗಿಸುತ್ತಾರೆ. ತೆಂಗಿನ ಎಣ್ಣೆಯನ್ನು ಅಮೇರಿಕಾ, ಬ್ರಿಟನ್, ಆಸ್ಟ್ರೇಲಿಯಾಗಳಲ್ಲೂ ಸಹ ಬಳಸಲಾಗುತ್ತದೆ. ತೆಂಗಿನ ಎಣ್ಣೆಯನ್ನು ಕೂದಲಿಗೆ ನಿತ್ಯವೂ ಬಳಸಿದರೆ ಯಾವುದೇ ರೀತಿಯ ರಾಸಾಯನಿಕ ವಸ್ತುಗಳನ್ನು ಬಳಸುವ ಅಗತ್ಯ ಇರುವುದಿಲ್ಲ. ಇದರಿಂದ ನಿಮ್ಮ ಕೇಶಕಾಂತಿ ಹೆಚ್ಚಾಗಿ ಮೃದು ಹಾಗೂ ಆರೋಗ್ಯವಾಗಿರುತ್ತದೆ.
ದೇಹಕ್ಕೆ ತೆಂಗಿನ ಎಣ್ಣೆಯಿಂದ ರಾತ್ರಿ ಹೊತ್ತಿನಲ್ಲಿ ಮಸಾಜ್ ಮಾಡಿದರೆ ಬೆವರಿನಿಂದ ದೇಹದಲ್ಲಿ ಸೃಷ್ಟಿಯಾಗುವಂತಹ ದುರ್ಗಂಧವನ್ನು ಶಾಶ್ವತವಾಗಿ ತಡೆಗಟ್ಟಬಹುದು. ರಾತ್ರಿ ಸಮಯದಲ್ಲಿ ತೆಂಗಿನ ಎಣ್ಣೆಯನ್ನು ಹೊಕ್ಕಳಿನ ಮೇಲೆ ಹಚ್ಚಿಕೊಳ್ಳುವುದರಿಂದ ತಲೆನೋವು, ಹೊಟ್ಟೆ ನೋವು, ಸೊಂಟ ನೋವು ಮತ್ತು ಮೂಳೆಗಳ ನೋವು ಸಹ ಕಡಿಮೆಯಾಗುತ್ತದೆ. ತೆಂಗಿನ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ಡ್ಯಾಂಡ್ರಫ್ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಕೂದಲು ಉದುರುವುದು ಕಡಿಮೆಯಾಗುತ್ತದೆ.
ಉಗುರಿಗೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿದರೆ ನೈಲ್ ಇನ್ಫೆಕ್ಷನ್ ಕಡಿಮೆಯಾಗುತ್ತದೆ ಮತ್ತು ಸುಂದರ ಹಾಗೂ ಗಟ್ಟಿಯಾಗಿರುತ್ತದೆ. ರಾತ್ರಿ ಸಮಯದಲ್ಲಿ ತೆಂಗಿನ ಎಣ್ಣೆಯನ್ನು ಸ್ಟ್ರೈಚ್ ಮಾರ್ಕ್ಸ್ ಮೇಲೆ ಚೆನ್ನಾಗಿ ಲೇಪಿಸಿದರೆ ಮಾಯವಾಗುತ್ತದೆ.ರಾತ್ರಿ ಸಮಯದಲ್ಲಿ ಮುಖಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿದರೆ ಹೆಚ್ಚು ಕಾಂತಿಯುತವಾಗಿರುತ್ತದೆ. ದೇಹದಲ್ಲಿ ತುರಿಕೆ ಸಮಸ್ಯೆ ಇದ್ದರೆ ಒಂದು ಚಮಚ ತೆಂಗಿನ ಎಣ್ಣೆಯೊಂದಿಗೆ
10 ಹನಿ ನಿಂಬೆ ರಸವನ್ನು ಬೆರೆಸಿ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ.
ತೆಂಗಿನ ಎಣ್ಣೆಯನ್ನು ಒಂದು ಬಟ್ಟಲಿಗೆ ತೆಗೆದುಕೊಂಡು ಕಾಯಿಸಿ. ಬೆಚ್ಚಗೆ ಇರುವಾಗ ಕೂದಲಿಗೆ ಹಚ್ಚಿ ಮಸಾಜ್ ಮಾಡಿ ಹಾಗೂ ಮಲಗುವ ಸಮಯದಲ್ಲಿ ಶಬರ್ ಕ್ಯಾಪ್ ಹಾಕಿಕೊಂಡು ಮಲಗಿ.ನಂತರ ಬೆಳಗ್ಗೆ ಎದ್ದು ತಲೆಗೆ ಸ್ನಾನ ಮಾಡಿದರೆ ಡ್ಯಾಂಡ್ರಫ್ ಸಮಸ್ಸೆ ಇರುವುದಿಲ್ಲ.ಮಲಗುವ ಮುನ್ನ ತೆಂಗಿನ ಎಣ್ಣೆಯನ್ನು ಡಾರ್ಕ್ ಸರ್ಕಲ್ ಗೆ ಹಚ್ಚಿದರೆ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.ತೆಂಗಿನ ಎಣ್ಣೆಯಿಂದ ಡಯಾಬಿಟಿಸ್ ಅನ್ನು ಕಡಿಮೆ ಮಾಡಿಕೊಳ್ಳಬಹುದು.ಆದ್ದರಿಂದ ತೆಂಗಿನ ಎಣ್ಣೆಯನ್ನು ಆಹಾರದಲ್ಲಿ ಸೇವಿಸುವುದು ಉತ್ತಮ.