ಅಕ್ಷಯ ತೃತೀಯ
ಈ ಬಾರಿ ಅಕ್ಷಯ ತೃತೀಯವೂ 14 ಮೇ 2021ರಂದು ಬಂದಿದೆ.ಇನ್ನು ನಮ್ಮೆಲರಿಗೂ ತಿಳಿದಿರುವ ಹಾಗೆ ಅಕ್ಷಯ ತೃತೀಯ ದಿನದಂದು ಬಂಗಾರವನ್ನು ಕೊಂಡರೆ ಅದು ಅಕ್ಷಯವಾಗುತ್ತದೆ ಹಾಗಾಗಿ ಅಕ್ಷಯ ತೃತೀಯ ದಿನದಂದು ಬಂಗಾರವನ್ನು ಕೊಂಡುಕೊಳ್ಳಲೇ ಬೇಕು ಎಂಬ ಮನದಾಸೆ ಎಲ್ಲರಿಗೂ ಇರುತ್ತದೆ ಆದರೆ ಈ ಬಾರಿ ಲಾಕ್ ಡೌನ್ ಕಾರಣದಿಂದ ಬಂಗಾರವನ್ನು ಖರೀದಿಸಲು ಆಗುತ್ತಿಲ್ಲ ಹಾಗಾಗಿ ಮನೆಯಲ್ಲಿ ಇರುವ ಬಂಗಾರವನ್ನೇ ಪೂಜೆ ಮಾಡಿ ಲಕ್ಷ್ಮೀಯನ್ನು ಒಲಿಸಿಕೊಳ್ಳುವ ಬಗೆಯನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ.
ಅಕ್ಷಯ ತೃತೀಯ ದಿನದಂದು ಬಸವೇಶ್ವರ ಜಯಂತಿ ಮತ್ತು ಪರಶುರಾಮ ಜಯಂತಿ ಇದೆ.ಅಂದಿನ ದಿನ ವೃಷಭ ಸಂಕ್ರಮಣ ಇದೆ ಅಂದರೆ ರವಿಯು ವೃಷಭ ರಾಶಿಗೆ ಪ್ರವೇಶ ಮಾಡುವ ದಿನ.ಹೆಣ್ಣು ಮಕ್ಕಳು
ವೀಡಿಯೋದಲ್ಲಿ ತಿಳಿಸಲಾಗಿರುವ ಮಂತ್ರವನ್ನು 1 ಚೀಟಿಯಲ್ಲಿ ಬರೆದಿಟ್ಟುಕೊಳ್ಳಿ.ಈ ಮಂತ್ರವನ್ನು ಬಂಗಾರದ ಪೂಜೆಯನ್ನು ಮಾಡುವಾಗ ಹೇಳಿಕೊಳ್ಳಿ ಇದರಿಂದ ಲಕ್ಷ್ಮಿ ದೇವಿ ಆಶೀರ್ವಾದ ದೊರೆಯುತ್ತದೆ.
ಇನ್ನೂ ಬಂಗಾರವನ್ನು ಇಟ್ಟು ಆ ಸರಳ ಪೂಜೆ ಹೇಗೆ ಮಾಡಬೇಕು ಎಂದು ನೋಡುವುದಾದರೆ ಮನೆಯಲ್ಲಿರುವ ಯಾವುದೇ ರೀತಿಯ ಪುಟ್ಟ ಬಂಗಾರವನ್ನಾದರೂ ಸರಿ ಶುಭ್ರವಾಗಿ ತೊಳೆದು 1 ತಟ್ಟೆಯಲ್ಲಿ ಇಟ್ಟು ಅದನ್ನು ಮಹಾಲಕ್ಷ್ಮಿ ಯ ಪ್ರತಿರೂಪವೆಂಬಂತೆ ಭಾವನೆ ಮಾಡಿಕೊಂಡು ನಿಷ್ಕಲ್ಮಶ ಮನಸ್ಸಿನಿಂದ ಪೂಜೆ ಮಾಡಿದರೆ ಸಾಕು.
ಇನ್ನೂ ಅಕ್ಷಯ ತೃತೀಯ ದಿನದಂದು ನಾವು ಅಭಿವೃದ್ಧಿಯ ಉತ್ತುಂಗಕ್ಕೆ ಏರಬೇಕಾದರೆ ಈ ಸಣ್ಣ ಪೂಜೆ ಮಾಡಲೇಬೇಕು ಹಾಗೂ ಸಿಹಿ ನೈವೇದ್ಯವನ್ನು ಮಾಡಿ ದೇವಿಗೆ ಸಮರ್ಪಿಸಬೇಕು.ಇನ್ನೂ ಅಕ್ಷಯ ತೃತೀಯ ದಿನದಂದು ಮರೆಯದೆ ಬೆಳಗ್ಗೆ ಮತ್ತು ಸಂಜೆ ಹೊಸಿಲ ಪೂಜೆಯನ್ನು ತಪ್ಪದೇ ಮಾಡಬೇಕು.ಅರಿಶಿನ ಕುಂಕುಮವನ್ನಿಟ್ಟು ಹೊಸಿಲ ಮುಂದೆ ಕುಂತು ಕನಕದಾಸ ಸ್ತೋತ್ರವನ್ನು ಪಠಿಸಿ ಇದರಿಂದ ಹಣಕಾಸಿನಲ್ಲಿ ಅಭಿವೃದ್ಧಿ ಹೊಂದುತ್ತೀರಿ. ಹಾಗೂ ಲಕ್ಷ್ಮೀ ಅಷ್ಟೋತ್ತರವನ್ನು ಕೇಳಿಸಿಕೊಳ್ಳಿ .
ಇನ್ನೂ ವೀಡಿಯೋದಲ್ಲಿ ತಿಳಿಸಲಾಗಿರುವ ಮಂತ್ರವನ್ನು ತಪ್ಪದೇ 108 ಬಾರಿ ಪಠಿಸಬೇಕು ಅಥವಾ 108 ಭಾರೀ ಕೇಳಿಸಿಕೊಳ್ಳಬೇಕು.
ಧನ್ಯವಾದಗಳು.