ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಿ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡಿ!

Health & Fitness

ಸ್ವಾಭಾವಿಕವಾಗಿ ಜೀರ್ಣ ಕ್ರಿಯೆಯನ್ನು ಸುಧಾರಿಸುವ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..

ನಮ್ಮ ಶರೀರದ ಎಲ್ಲ ಚಲನೆಗಳು ನಮ್ಮ ಜೀರ್ಣಕ್ರಿಯೆಗೆ ಸಂಪರ್ಕವನ್ನು ಹೊಂದಿದೆ ಆದ್ದರಿಂದ ಜೀರ್ಣಕ್ರಿಯೆಯಲ್ಲಿ ಬರುವ ಅಡಚಣೆಗಳ ಗುರುತು ನಮ್ಮ ತ್ವಚೆ ,ಕೂದಲು , ಕಣ್ಣು , ಮೆದುಳು ಮತ್ತು ಎಲ್ಲಾ ಆಂತರಿಕ ಅಂಗಗಳ ಮೇಲೆ ಬೀಳುತ್ತದೆ.

ಜೀರ್ಣಕ್ರಿಯೆ ಪ್ರಕ್ರಿಯೆ ಬೇರೆ ಬೇರೆ ಆಂತರಿಕ ಅಂಗಗಳು ಒಟ್ಟಿಗೆ ಸೇರಿ ಕೆಲಸ ಮಾಡುತ್ತದೆ ಮತ್ತು ತಿಂದ ಆಹಾರ ಜೀರ್ಣಗೊಳಿಸಿ ಅದರಲ್ಲಿರುವ ಅವಶ್ಯಕತೆಯಾದ ಪೋಷಕ ತತ್ವಗಳಿಂದ ಶರೀರಕ್ಕೆ ಎನರ್ಜಿ ಒದಗಿಸುವ ಕೆಲಸ ಮಾಡುತ್ತದೆ.

ತಿನ್ನುವ ಆಹಾರವನ್ನು ಬಹುಬೇಗ ಅಥವಾ ನಿಧಾನವಾಗಿ ಜೀರ್ಣಗೊಳಿಸುವುದು,ತಿಂದ ಆಹಾರ ಪದಾರ್ಥಗಳ ಶರೀರಕ್ಕೆ ಸಿಗುವುದಿಲ್ಲ,ಮತ್ತೆ ಮತ್ತೆ ಅಥವಾ ತುಂಬಾ ಕಡಿಮೆ ಹಸಿವಾಗುತ್ತದೆ,ಬೆಳಿಗ್ಗೆ ಎದ್ದ ತಕ್ಷಣ ಹೊಟ್ಟೆ ಶುದ್ದಿಯಾಗುವುದಿಲ್ಲಅಥವಾ ಪದೇ ಪದೇ ಮಲ ವಿಸರ್ಜನೆ ಮಾಡುವಂತಾಗುವುದು.

ಜೀರ್ಣಕ್ರಿಯೆ ಯಾವ ಕಾರಣದಿಂದ ದುರ್ಬಲಗೊಳ್ಳುತ್ತದೆ ಎಂದು ನಾವು ನೋಡುವುದಾದರೆ ನಾವು ಸೇವಿಸುವ ಆಹಾರ 50 % ನಷ್ಟು ಬಾಯಿಯಲ್ಲಿ ಜೀರ್ಣವಾಗುತ್ತದೆ ಮತ್ತು ಇನ್ನುಳಿದ 50% ಹೊಟ್ಟೆಯಲ್ಲಿ ಜೀರ್ಣವಾಗುತ್ತದೆ ಆದ್ದರಿಂದ ನಾವು ಸೇವಿಸುವ ಆಹಾರವನ್ನು ಚೆನ್ನಾಗಿ ಅಗಿದು ಜಗಿದು ಸೇವಿಸಬೇಕು.ಒಳ್ಳೆಯ ಪಚನಕ್ರಿಯೆಗೆ ನಮ್ಮ ದೇಹದಲ್ಲಿ ನೀರಿನಂಶ ಸಾಕಷ್ಟು ಇರಬೇಕು.ಪ್ರತಿದಿನ ಒಬ್ಬ ಸಾಮಾನ್ಯ ವ್ಯಕ್ತಿ ಕಡಿಮೆಯೆಂದರೂ 3 ರಿಂದ 4 ಲೀಟರ್ ನಷ್ಟು ನೀರು ಕುಡಿಯಬೇಕು.ಕೆಲವೊಮ್ಮೆ ನಿಧಾನವಾಗಿ , ಕೆಲವೊಮ್ಮೆ ವೇಗವಾಗಿ ಆಹಾರವನ್ನು ಸೇವಿಸುವುದರಿಂದ ಸಹ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ.

ಮೈದಾದಿಂದ ಮಾಡಿದ ಪದಾರ್ಥಗಳನ್ನು ಸೇವಿಸುವುದನ್ನು ಬಿಡಿ ಏಕೆಂದರೆ ಇದರಲ್ಲಿ ಗ್ಲೂಟೇನ್ ಅಂಶ ಹೆಚ್ಚಾಗಿರುವುದರಿಂದ ಇದು ಜೀರ್ಣಕ್ರಿಯೆಯನ್ನು ತಡವಾಗಿಸುತ್ತದೆ.ಇಂತಹ ಸ್ಥಿತಿಯಲ್ಲಿ ಜೀರ್ಣಕ್ರಿಯೆಯ ದುರ್ಬಲತೆ ಮುಖ್ಯ ಕಾರಣವಾಗುತ್ತದೆ. ಇನ್ನು ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದಾಗ ಗ್ಯಾಸ್ , ಅಸಿಡಿಟಿ , ಹೊಟ್ಟೆನೋವು , ಎದೆ ಉರಿ , ಅಜೀರ್ಣತೆ , ಮಲಬದ್ಧತೆ , ತಲೆನೋವು , ಸೋಮಾರಿತನ , ಥೈರಾಯ್ಡ್ ಸಮಸ್ಯೆ , ತ್ವಚೆಯ ಮೇಲೆ ಕಲೆಗಳು ,ಮೊಡವೆಗಳು , ಕೈಗಳಲ್ಲಿ ಊತ , ರಾತ್ರಿ ಸಮಯದಲ್ಲಿ ನಿದ್ದೆ ಬರದಿರುವುದು , ಹೆದರಿಕೆ , ಮೂಲವ್ಯಾಧಿ , ಮೂಳೆಯ ನೋವು ಇಂಥ ಹಲವು ಸಮಸ್ಯೆಗಳು ಎದುರಾಗಬಹುದು.ಯಾಕೆಂದರೆ ಯಾವಾಗ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲವೋ ಆಗ ಅದು ನಮ್ಮ ಹೊಟ್ಟೆಯಲ್ಲಿಯೇ ಇದ್ದು ಕೊಳೆಯುತ್ತದೆ.

ಇನ್ನೂ ಜೀರ್ಣಕ್ರಿಯೆಯನ್ನು ಸರಿ ಯಾಗಿಸಲು ಕೆಲವು ಮನೆಮದ್ದುಗಳನ್ನು ತಿಳಿಯೋಣ.

ನಮ್ಮ ದೇಹದಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳು ಇರುತ್ತವೆ.ಜೀರ್ಣಕ್ರಿಯೆಗೆ ದುರ್ಬಲತೆಯ ಮುಖ್ಯ ಕಾರಣವೆಂದರೆ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾದ ಕೊರತೆ ಇದರಿಂದ ಹೊಟ್ಟೆಯ ಪಚನದ ರಸದ ಕೊರತೆ ಉಂಟಾಗುತ್ತದೆಹಾಗೂ ಅಜೀರ್ಣತೆ ಕಾಡುತ್ತಿರುತ್ತದೆ.

ಮೊಸರು:ಇದು ಒಂದು ಪ್ರೊ ಬಯೋಟಿಕ್ ಆಹಾರ.1 ಬಟ್ಟಲು ಮೊಸರಿಗೆ 1 ಸ್ಪೂನ್ ಕಲ್ಲುಸಕ್ಕರೆ ಪುಡಿ , ಅರ್ಧ ಸ್ಪೂನ್ ಹುರಿದ ಜೀರಿಗೆ ಪುಡಿ ಮತ್ತು ಸ್ವಲ್ಪ ಕಪ್ಪು ಉಪ್ಪು ಬೆರೆಸಿ ಪ್ರತಿದಿನ ಮಧ್ಯಾಹ್ನ ಊಟದ ನಂತರ ಸೇವಿಸಿಇದರಿಂದ ಒಳ್ಳೆಯ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ ಹಾಗೂ ಪಚನಕ್ರಿಯೆ ಸರಾಗವಾಗುತ್ತದೆ.

ಊಟವಾದ ನಂತರ ಸೋಂಪು ತಿನ್ನುವುದರಿಂದ ಪಚನ ಕ್ರಿಯೆ ಸರಾಗವಾಗುತ್ತದೆ ಇದರ ಜೊತೆಗೆ ನಮ್ಮ ಮೆಟಬಾಲಿಸಮ್ ಹೆಚ್ಚು ಮಾಡುತ್ತದೆ.

ಪ್ರತಿನಿತ್ಯ ಆಹಾರ ಸೇವಿಸಿದ ಬಳಿಕ ಅರ್ಧ ಸ್ಪೂನ್ ಸೊಂಪನ್ನು ಸೇವಿಸುವುದರಿಂದ ಸಲೈವಾ ಅಂದರೆ ಜೊಲ್ಲು ಹೆಚ್ಚಾಗುತ್ತದೆ ಇದರಿಂದ ನಾವು ಸೇವಿಸುವ ಆಹಾರ ಬಹುಬೇಗ ಜೀರ್ಣಗೊಳ್ಳುತ್ತದೆ.

ಹುಳಿತೇಗು ಎದೆಯಲ್ಲಿ ಉರಿ ಇರುವವರು ಸೋಂಪನ್ನು ಮರಿಯದೆ ತಿನ್ನಿ.ಕೆಲವರಿಗೆ ಹೊಟ್ಟೆಯಲ್ಲಿ ಪ್ಯಾಂಕ್ರಿಯಾಟಿಕ್ ಜ್ಯೂಸ್ ಮತ್ತು ಆಸಿಡ್ ನ ಕೊರತೆಯಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇಂಥವರು ಊಟದ ಮೊದಲ 1 ಬಟ್ಟಲಿಗೆ ಶುಂಠಿ ಪುಡಿ ಮತ್ತು ನಿಂಬೆ ರಸವನ್ನು ಬೆರೆಸಿ ಕುಡಿಯಿರಿ ಅಥವಾ ಶುಂಠಿಯನ್ನು ನಿಂಬೆರಸದಲ್ಲಿ ನೆನಸಿ ಶುಂಠಿಯನ್ನು ಅಗಿದು ಜಗಿದು ತಿನ್ನುವುದರಿಂದ ಪ್ಯಾಂಕ್ರಿಯಾಟಿಕ್ ಜ್ಯೂಸ್ ಹೆಚ್ಚಾಗುತ್ತದೆ ಜೊತೆಗೆ ಜೀರ್ಣಕ್ರಿಯೆ ಸರಾಗವಾಗುತ್ತದೆ.

ಊಟವಾದ 2 ಗಂಟೆಯ ಬಳಿಕ ಅರಿಶಿನದ ಹಾಲನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ.
ಹೊಟ್ಟೆ ಶುದ್ಧಿಯಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಧನ್ಯವಾದಗಳು.

Leave a Reply

Your email address will not be published.