ಮೂಗಿಗೆ ನಿಂಬೆರಸ ಹಾಕಬಹುದಂತೆ ಅದು ಯಾವಾಗ ಗೊತ್ತಾ!
ಈಗೀಗ ಈ ಒಂದು ಸುದ್ದಿ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ ಅದೇನೆಂದರೆ ಮೂಗಿಗೆ ನಿಂಬೆರಸ ಹಾಕುವುದರಿಂದ ಕೊರೊನಾ ವೈರಸ್ಸನ್ನು ಕೊಲ್ಲಬಹುದು ಎಂದು.ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಆಯುರ್ವೇದದಲ್ಲಿ ನಿಂಬೆ ರಸಕ್ಕೆ ಕಫೋಕ್ಲೇಷಕ ಎನ್ನುತ್ತಾರೆ.ಅಂದರೆ ನಿಂಬೆರಸವು ಕಫವನ್ನು ಎಳೆದು ಹಾಕುವ ಸಾಮರ್ಥ್ಯವನ್ನು ಹೊಂದಿದೆ.ಆದರೆ ಮೂಗಿಗೆ ನಿಂಬೆ ರಸ ಹಾಕುವುದರ ಬಗ್ಗೆ ಅನೇಕರಿಗೆ ಗೊಂದಲಗಳಿವೆ.ಹಾಗೆ ಮೂಗಿಗೆ ನಿಂಬೆರಸ ಹಾಕುವುದರ ಬಗ್ಗೆ ಆಯುರ್ವೇದದಲ್ಲಿ ಎಲ್ಲಿಯೂ ಉಲ್ಲೇಖಿಸಿರುವುದಿಲ್ಲ.
ಆದರೂ ವೈದ್ಯನ ಯುಕ್ತಿ ಆಧಾರದ ಮೇಲೆ ಮೂಗಿಗೆ ನಿಂಬೆರಸವನ್ನು ಹಾಕುವ ಪ್ರಯತ್ನ ಮಾಡಬಹುದಾಗಿದೆ.ಹಾಗಾಗಿ ನಿಂಬೆ ರಸವನ್ನು ಕೆಲವು ಶರತ್ತುಗಳ ಆಧಾರವಾಗಿ ಮೂಗಿಗೆ ಹಾಕಿಕೊಳ್ಳಬಹುದು.ಅಂದರೆ ಕಫ ಹೆಚ್ಚಾದಾಗ , ಸೈನಾ ಸೈಟಿಸ್ ತೊಂದರೆ ಇದ್ದಾಗ ,
ಕಫ ಹೊರಗಡೆ ಬರದೇ ಇದ್ದಾಗ ಅಂತಹ ಸಂದರ್ಭಗಳಲ್ಲಿ ಮೂಗಿಗೆ ನಿಂಬೆರಸವನ್ನು ಹಾಕಬಹುದಾಗಿದೆ.
ಹಾಗಾಗಿ ವಾರಕ್ಕೆ 1 ಅಥವಾ 2 ದಿನ ಒಂದು ಹೊಳ್ಳೆಗೆ 2 ಹನಿ ಯಷ್ಟು ಮೂಗಿಗೆ ನಿಂಬೆರಸವನ್ನು ಹಾಕಬಹುದು.ಯಾವುದೇ ಕಾರಣಕ್ಕೂ ಪ್ರತಿನಿತ್ಯ ಮೂಗಿಗೆ ನಿಂಬೆರಸವನ್ನು ಹಾಕಬಾರದು ಏಕೆಂದರೆ ನಿಂಬೆಯು ಉಷ್ಣ , ಅತೀಕ್ಷ್ಣ ಹಾಗೂ ಹುಳಿಯ ಗುಣಗಳನ್ನು ಹೊಂದಿದೆ ಹಾಗಾಗಿ ಪ್ರತಿನಿತ್ಯ ನಿಂಬೆ ರಸವನ್ನು ಮೂಗಿಗೆ ಹಾಕಿದರೆ ಮ್ಯೂಕಸ್ ಮೆಂಬ್ರೇನ್ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.ಹಾಗಾಗಿ ಕಫ ಇರುವಂಥವರು ವಾರಕ್ಕೆ ಒಮ್ಮೆ ಬಳಸಿದರೆ ಸಾಕು.
ಇನ್ನು ನಿಮಗೆ ಸಂದೇಹವಿದ್ದಲ್ಲಿ ಯಾವುದಾದರೂ ಆಯುರ್ವೇದ ವೈದ್ಯರ ಬಳಿ ಸಲಹೆ ಪಡೆದುಕೊಂಡು ನಿಮ್ಮ ದೇಹ ಪ್ರಕೃತಿಯ ಆಧಾರದ ಮೇಲೆ ಮೂಗಿಗೆ ನಿಂಬೆರಸ ಹಾಕುವುದರ ಬಗ್ಗೆ ತಿಳಿದುಕೊಂಡು ಹಾಕಿಕೊಳ್ಳಬಹುದು.
ಧನ್ಯವಾದಗಳು.