ಈ ಕಾಯಿಲೆಗಳಿಗೆ ಅರಿಶಿನ ಅತ್ಯುತ್ತಮ ಪರಿಹಾರ!ತಪ್ಪದೇ ಓದಿ

Health & Fitness

ಅರಿಶಿಣ ಒಂದು ವಿಧದ ಔಷಧವಾಗಿದೆ.ಹಿಂದು ಧರ್ಮದಲ್ಲಿ ಅರಿಶಿಣವನ್ನು ಮಂಗಳಕರವೆಂದು , ಶುಭಕರವೆಂದು ಪರಿಗಣಿಸಲಾಗಿದೆ.ಇದು ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ಆರೋಗ್ಯ ವೃದ್ಧಿಸುತ್ತದೆ.ಅರಿಶಿನವು ಕೆಲವು ಸಮಸ್ಯೆಗಳಿಗೆ ಅದ್ಭುತ ಔಷಧಿಯಾಗಿದೆ.ಅದು ಯಾವುದೆಂದು ತಿಳಿಯೋಣ ಬನ್ನಿ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ರಕ್ತದೊತ್ತಡವನ್ನು ನಿವಾರಿಸುವಲ್ಲಿ ಅರಿಶಿಣ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಅರಿಶಿನದಲ್ಲಿ ಕರ್ಕ್ಯುಮಿನ್ ಎನ್ನುವ ಆ್ಯಂಟಿ ಆಕ್ಸಿಡೆಂಟ್ ಇರುವುದರಿಂದ ಇದು ರಕ್ತದೊತ್ತಡವನ್ನು ಕಡಿಮೆ ಮಾಡಿಸುತ್ತದೆ ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.ಮೊಡವೆಯನ್ನು ಹೋಗಲಾಡಿಸುತ್ತದೆಅರಿಶಿನದಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಾ ಅಂಶ ಮೊಡವೆಯಾಗುವುದನ್ನು ತಡೆದು ಅದರ ಕಲೆಯನ್ನು ಹೋಗಲಾಡಿಸಲು ಕೂಡ ಅನುಕೂಲ ಮಾಡಿಕೊಡುತ್ತದೆ.

ಇದರಲ್ಲಿರುವ ಉರಿಯೂತ ವಿರೋಧಿ ಗುಣ ಮೊಡವೆಯಿಂದ ಉಂಟಾಗುವ ಉರಿಯೂತವನ್ನು ಹೋಗಲಾಡಿಸಲು ಸಹಕರಿಸುತ್ತದೆ. ಚರ್ಮದಲ್ಲಿರುವ ಅಧಿಕ ಎಣ್ಣೆ ಅಂಶವನ್ನು ಕಡಿಮೆ ಮಾಡಲು ಕೂಡ ಇದು ಅನುಕೂಲ.

ಸೋರಿಯಾಸಿಸ್ ಸಮಸ್ಯೆಗೆ ಪರಿಹಾರ

ಚರ್ಮದ ಉರಿಯೂತದಿಂದಾಗಿ ತುರಿಕೆ ಮತ್ತು ಒಣಗಿದ ಚರ್ಮವಾದಾಗ ಅರಿಶಿಣ ಬಳಸುವುದು ಉಪಯೋಗಕರ.ಅರಿಶಿಣದ ಪುಡಿಗೆ ಸ್ವಲ್ಪ ನೀರನ್ನು ಬೆರೆಸಿ ಅದನ್ನು ಸೋರಿಯಾಸಿಸ್ ಗೆ ಹಚ್ಚಿ ಒಂದು ರಾತ್ರಿ ಹಾಗೆಯೇ ಬಿಟ್ಟು ಮರುದಿನ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಸ್ಟ್ರೆಚ್ ಮಾರ್ಕ್ ಗೆ ಪರಿಹಾರ

ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶ ಜೀವಕೋಶದ ಪೊರೆಗಳ ಒಳಗೆ ಹೋಗಿ ರಾಸಾಯನಿಕ ಸಂಯುಕ್ತಗಳನ್ನು ಸಮತೋಲನಗೊಳಿಸಿ ಬದಲಾಯಿಸುವ ಗುಣವನ್ನು ಹೊಂದಿದೆ.
ಇದು ಸ್ಟ್ರೆಚ್ ಮಾರ್ಕ್ಸ್ ಅನ್ನು ತೆಗೆದು ಹಾಕುತ್ತದೆ.

ಎಜಿಮಾ ಗೆ ಪರಿಹಾರ

ಎಜಿಮಾದ ಉರಿಯೂತದಿಂದ ಕೆಂಪು ತುರಿಕೆ ಹೊಂದಿರುವ ಒಣ ಚರ್ಮ ಉಂಟಾಗುತ್ತದೆ.ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತ ವಿರೋಧಿ ಆದ್ದರಿಂದ ಎಜಿಮಾ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ.

ಹೊಳೆಯುವ ಚರ್ಮ

ಚರ್ಮದ ಹೊಳಪನ್ನು ಹೆಚ್ಚಿಸುವ ಗುಣವನ್ನು ಹೊಂದಿರುವ ಅರಿಶಿನ ಟ್ಯಾನ್ ಆದ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುವ ಗುಣವನ್ನು ಹೊಂದಿದೆ.

ಸನ್ ಸ್ಕ್ರೀನ್ ನಂತೆ ಕೆಲಸ ಮಾಡುತ್ತದೆ

ಚರ್ಮ ಹಾನಿಗೊಳಗಾದಾಗ ತ್ವಚೆ ಕುಂದಿದಂತೆ ಕಾಣುತ್ತದೆ, ಅರಿಶಿನ ಸೂರ್ಯನ ಯುವಿ ಕಿರಣಗಳಿಂದ ಚರ್ಮಕ್ಕಾಗುವ ಹಾನಿಯನ್ನು ತಡೆದು ವಯಸ್ಸಾದಂತೆ ಕಾಣುವುದನ್ನು ಕೂಡ ತಡೆಯುತ್ತದೆ.
ಕಪ್ಪು ಕಲೆಗಳ ಆಗುವುದನ್ನು ತಡೆಯುತ್ತದೆ

ತಾರುಣ್ಯ ಕಾಪಾಡುತ್ತದೆ

ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿರುವ ಅರಿಶಿಣವನ್ನು ಕಲೆ ಮತ್ತು ತ್ವಚೆ ಸುಕ್ಕುಗಟ್ಟುವುದನ್ನು ತಡೆದು ವಯಸ್ಸಾದಂತೆ ಕಾಣುವುದನ್ನು ತಪ್ಪಿಸುತ್ತದೆ.ಇದರಲ್ಲಿರುವ ಆ್ಯಂಟಿ ಇನ್ಫ ಮೇಟರಿ ಗುಣ ನಿಯಮಿತ ಬಳಕೆಯಿಂದ ತ್ವಚೆ ಹೊಳಪನ್ನು ಹೆಚ್ಚಿಸುತ್ತದೆ.

ಗಾಯವನ್ನು ಮರೆ ಮಾಚುತ್ತದೆ.

ಯಾವುದೇ ರೀತಿಯ ಸಣ್ಣ ಗಾಯ , ಸುಟ್ಟ ಗಾಯ ಅರಿಶಿಣ ಬಳಸುವುದರಿಂದ ಬೇಗ ಗುಣವಾಗಲು ಸಹಾಯಕವಾಗುತ್ತದೆ.

ಪಿಗ್ಮೆಂಟೇಷನ್ ಸಮಸ್ಯೆ

ಅರಿಶಿನದಲ್ಲಿರುವ ಬ್ಲೀಚಿಂಗ್ ಗುಣ ಚರ್ಮದ ಪಿಗ್ಮೆಂಟೇಷನ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಇದು ಚರ್ಮದ ಸೋಂಕನ್ನು ಕೂಡ ತಡೆದು ಕಳೆಯಲಾಗುವುದು ತಡೆಯುತ್ತದೆ.

ಅಧಿಕ ರಕ್ತದೊತ್ತಡ ಇರುವಂಥವರು ಅರಿಶಿಣವನ್ನು ಸೇವಿಸುವಾಗ ಈ ಕೆಲ ವಿಷಯಗಳನ್ನು ಗಮನದಲ್ಲಿಡಿ.ಅತಿಯಾಗಿ ಅರಿಶಿನವನ್ನು ಸೇವಿಸಬೇಡಿ ಇದರಿಂದ ಹೊಟ್ಟೆಯಲ್ಲಿ ಅಲ್ಸರ್ ಸಮಸ್ಯೆ ಉಂಟಾಗುತ್ತದೆ.ಮೂತ್ರದಲ್ಲಿ ಕಲ್ಲಿನ ಸಮಸ್ಯೆ ಇರುವವರು ಮತ್ತು ಪಿತ್ತಕೋಶದ ಯಾವುದೇ ಸಮಸ್ಯೆ ಹೊಂದಿದವರು ಅಂಥವರು ಅರಿಶಿನವನ್ನು ಮಿತವಾಗಿ ಬಳಸಿ.ಇನ್ನೂ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಅರಿಶಿಣವನ್ನು ಸೇವಿಸಬೇಕು.

ಧನ್ಯವಾದಗಳು.

Leave a Reply

Your email address will not be published.