ಲಸಿಕೆ ಪಡೆಯುವ ಮುನ್ನ ಈ ಕೆಲಸ ಮಾಡಿದ ರಾಗಿಣಿ!

Entertainment

ಕಳೆದ ವರ್ಷ ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. 140 ದಿನಗಳ ಕಾಲ ಜೈಲುವಾಸ ಅನುಭವಿಸಿದ ರಾಗಿಣಿ ಆ ನಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನ ತೋಡಗಿಸಿಕೊಂಡಿದ್ದಾರೆ.

ರಾಗಿಣಿ ಸುಮಾರು 500 ಮಂದಿಗೆ ಉಚಿತವಾಗಿ ಆಹಾರ ನೀಡಿದ್ದಾರೆ ಹಾಗೆಯೇ ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಹಾಗು ಅವರ ಕುಟುಂಬದವರಿಗೆ ಉಚಿತವಾಗಿ ದಿನಸಿ ಸಾಮಗ್ರಿಗಳನ್ನು ರಾಗಿಣಿ ಹಂಚಿದ್ದರು. ಸದ್ಯ ಪ್ರತಿದಿನ ಆಹಾರ ವಿತರಣೆ ರಾಗಿಣಿ ಮಾಡುತ್ತಿದ್ದಾರೆ.

ಸದ್ಯ ರಾಗಿಣಿ ತಮ್ಮ ಕೋವಿಡ್ ಡೋಸ್ ಪಡೇಯುವ ಮುನ್ನ ರಕ್ತದಾನವನ್ನ ಮಾಡಿರುವ ಫೋಟೊಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.ಕೊರೊನಾ ಸಂಕಷ್ಟದ ಸಮಯದಲ್ಲಿ ಉಚಿತ ಆಹಾರ ವಿತರಣೆ, ದಿನಸಿ ಸಾಮಗ್ರಿ ವಿತರಣೆ ಇನ್ನಿತರೆ ಕಾರ್ಯಗಳನ್ನು ಮಾಡುತ್ತಿರುವ ರಾಗಿಣಿಗೆ ಹಲವರು ಅಭಿನಂಡಿಸಿದ್ದಾರೆ.

ರಾಗಿಣಿ ಜೊತೆಗೆ ನಟಿ ಸಂಜನಾ ಗಲ್ರಾನಿ ಅವರನ್ನ ಕೂಡ ಈ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು,ಅಲ್ಲದೆ ಇಬ್ಬರೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published.