ದೇಶದ ಜನರ ಆಪದ್ಬಾಂಧವ ಸೋನು ಸೂದ್ ರಿಂದ ಮತ್ತೊಂದು ಮಹತ್ಕಾರ್ಯ!

Featured-Article

ದೇಶದಲ್ಲಿ ಕೊರೊನಾ ಎರಡನೇ ಅಲೆ ಭಾರತ ತತ್ತರಿಸಿ ಹೋಗಿದೆ, ಹಲವಾರು ಜನರಿಗೆ ಕಷ್ಟವನ್ನುಂಟುಮಾಡಿದೆ,ಸದ್ಯ ಹಿಂದಿನ ವರ್ಷದ ಲಾಕ್ ಡೌನ್ ನಲ್ಲಿ ಹಲವಾರು ಜನರಿಗೆ ಸಹಾಯ ಮಾಡಿ ದೇಶದ ಆಪದ್ಬಾಂಧವ ಎನಿಸಿಕೊಂಡಿರುವ ಸೋನು ಸೂದ್ ಹಲವು ಜನರಿಗೆ ನೇರವನ್ನ ಮಾಡಿದ್ದಾರೆ.\

ಈ ಎರಡನೇ ಅಲೆಯಲ್ಲಿ ದಿನವೊಂದಕ್ಕೆ ಸುಮಾರು 3.5ಲಕ್ಷ ಪಾಸಿಟೀವ್ ಪ್ರಕರಣಗಳು ಕಂಡುಬರುತ್ತಿದ್ದು ಸಾವಿರಾರು ಮಂದು ಪ್ರಾಣಕಳೆದುಕೋಳ್ಳುತ್ತಿದ್ದಾರೆ.ಈ ಎರಡನೇ ಅಲೆಯಲ್ಲಿ ಮೆಡಿಕಲ್ ಆಕ್ಸೀಜನ್ ಕೋರತೆ ಅತಿ ಹೆಚ್ಚಿದ್ದು ಹಲವಾರು ಸೆಲೆಬ್ರಿಟಿಗಳು ಸಹಾಯ ಮಾಡುತ್ತಿದ್ದಾರೆ.ಸೋನು ಸೂದ್ ಕೂಡ ಹಲವಾರು ಜನರ ಪ್ರಾಣ ಉಳಿಸುವ ಕೆಲಸ ಮಾಡುತ್ತಿದ್ದಾರೆ.

ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ಭಾರತದ ಅತ್ಯಂತ ಹಾನಿಗೊಳಗಾದ COVID-19 ರಾಜ್ಯಗಳಲ್ಲಿ ಕನಿಷ್ಠ ನಾಲ್ಕು ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಸೋನು ಸೂದ್ ಯೋಜಿಸುತ್ತಿದ್ದಾರೆ ಇನ್ನೂ ಹತ್ತು ದಿನಗಳಲ್ಲಿ ಮೊದಲ ಆಕ್ಸಿಜನ್ ಸ್ಥಾವರ ಭಾರತವನ್ನ ತಲುಪಲಿದೆ ಎಂದು ಸೋನು ಸೂದ್ ಹೇಳಿದ್ದಾರೆ.

ಬಾಲಿವುಡ್‌ನ ಅನೇಕ ಪ್ರಸಿದ್ಧ ವ್ಯಕ್ತಿಗಳಾದ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಅಮಿತಾಬ್ ಬಚ್ಚನ್, ವರುಣ್ ಧವನ್, ಅಕ್ಷಯ್ ಕುಮಾರ್ ಮತ್ತು ಇತರರು ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ವಿಕಲಚೇತನರಿಗೆ ನೆರವಾಗಲು ಸಹಾಯ ಮಾಡಲು ಮುಂದಾಗಿದ್ದಾರೆ.

Leave a Reply

Your email address will not be published.