ಆರೋಗ್ಯಕ್ಕೋಸ್ಕರ ವಾಕಿಂಗ್ ಮಾಡುತ್ತಿದ್ದೀರಾ ಒಳ್ಳೆಯದೆ ಆದರೆ ಈ ತಪ್ಪುಗಳನ್ನು ಮಾಡಬೇಡಿ!
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಮತ್ತು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕೆಲವು ತಪ್ಪುಗಳನ್ನು ಮಾಡಬಾರದು ಅವು ಯಾವುವು ಎಂದು ತಿಳಿಯೋಣ ಬನ್ನಿ.
ಹೃದಯದ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮುಖ್ಯವಾಗಿ ಕಾಲ್ನಡಿಗೆಯಲ್ಲಿ ನಡೆಯಬೇಕು.ಪ್ರತಿ ದಿನ ಬೆಳಗ್ಗೆ 45 ನಿಮಿಷಗಳ ತನಕ ಮಾಡುವುದರಿಂದ ಹೃದಯದ ಬಡಿತ ಸ್ಥಿರಗೊಳ್ಳುತ್ತದೆ ಹಾಗೂ ಆರೋಗ್ಯವಾಗಿರುತ್ತದೆ.ತೂಕ ಹೆಚ್ಚಾಗಿರುವವರು ಸ್ವಲ್ಪ ನಿಧಾನವಾಗಿಯಾದರೂ ಸರಿ ಕಾಲ್ನಡಿಗೆಯಲ್ಲಿ ನಡೆಯುವುದನ್ನು ರೂಢಿಸಿಕೊಳ್ಳಬೇಕು ಇದರಿಂದ ಹೃದಯದ ಆರೋಗ್ಯ ವೃದ್ಧಿಸುತ್ತದೆ.ಇನ್ನೂ ಯಾವುದೇ ರೀತಿಯ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ ಇದ್ದರೂ ಕಾಲ್ನಡಿಗೆಯಲ್ಲಿ ನಡೆಯುವುದರಿಂದ ಎಲ್ಲಾ ತೊಂದರೆಗಳಿಗೂ ಬಹಳ ಒಳ್ಳೆಯದು.
ಇನ್ನೂ ಯಾರು ಕಾಲ್ನಡಿಗೆಯಲ್ಲಿ ನಡೆಯುವುದನ್ನು ರೂಢಿಸಿಕೊಂಡಿರುತ್ತಾರೋ ಅಂಥವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಹತ್ತಿರ ಕೂಡ ಸುಳಿಯುವುದಿಲ್ಲ.ಇನ್ನು ಕೇವಲ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವುದಲ್ಲದೆ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಕಾಲ್ನಡಿಗೆಯಲ್ಲಿ ನಡೆಯುವುದು ನೀಡುತ್ತದೆ.
- ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ
- ದಿನವೆಲ್ಲಾ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
- ಬುದ್ಧಿಶಕ್ತಿ ಚುರುಕುಗೊಳಿಸುತ್ತದೆ.
ಇನ್ನು ಈ ರೀತಿ ಕಾಲ್ನಡಿಗೆಯಲ್ಲಿ ನಡೆಯುವಾಗ ನಿಧಾನವಾಗಿ ನಡೆಯಬಾರದು ಆದಷ್ಟು ನಮ್ಮ ಕೈಲಾದಷ್ಟು ವೇಗವಾಗಿ ಕಾಲ್ನಡಿಗೆಯಲ್ಲಿ ನಡೆಯಬೇಕು.ಹೀಗೆ ಮಾಡುವುದರಿಂದ ತೂಕ ಕಡಿಮೆಯಾಗುವುದು ಹಾಗೂ
ಇದರಿಂದ ರಕ್ತ ಸಂಚಲನ ಸರಿಯಾಗಿ ಆಗುತ್ತದೆ.
ನಿಧಾನವಾಗಿ ನಡೆಯುತ್ತಾ ನಂತರ ವೇಗ ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು.ಇನ್ನೂ ಬೆಳಿಗ್ಗೆ ಎದ್ದ ತಕ್ಷಣ ನಿತ್ಯಕರ್ಮಗಳನ್ನು ಮುಗಿಸಿ ನಂತರ ಕಾಲ್ನಡಿಗೆಯಲ್ಲಿ ನಡೆಯಲು ಹೋಗಬೇಕು ಹೊಟ್ಟೆ ಶುದ್ಧಿಯಾಗಿದ್ದರೆ ನಮ್ಮ ದೇಹವು ಶುದ್ಧಿಯಾದಂತೆ.
ಇನ್ನು ನಿತ್ಯ ಕರ್ಮಾದಿಗಳನ್ನು ಮುಗಿಸದೆ ಕಾಲ್ನಡಿಗೆಯಲ್ಲಿ ನಡೆದರೆ ಆದಲ್ಲಿ ಅನಾರೋಗ್ಯದ ಸಮಸ್ಯೆ ಕಾಡಬಹುದು,ಚರ್ಮ , ಕರುಳು ಇತ್ಯಾದಿ ಗಳಿಗೆ ಇದು ಸಮಸ್ಯೆಯನ್ನುಂಟು ಮಾಡುತ್ತದೆ.
ಧನ್ಯವಾದಗಳು.