Kannada News ,Latest Breaking News

ವಿಟಮಿನ್ ಎ ಕೊರತೆ ಉಂಟಾದರೆ ಎಂತಹ ತೊಂದರೆಗಳಾಗುತ್ತವೆ ಗೋತ್ತಾ?

0 244

Get real time updates directly on you device, subscribe now.

ವಿಟಮಿನ್ ಗಳು ದೇಹದಲ್ಲಿ ಅತಿ ಮಹತ್ವದ ಕೆಲಸಗಳನ್ನು ಮಾಡುತ್ತವೆ. ಇಂದಿನ ಜೀವನಶೈಲಿಯಲ್ಲಿ ಸೇವಿಸುವ ಆಹಾರವೂ ಕೂಡ ಆರೋಗ್ಯದ ವಿಷಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸರಿಯಾಗಿ ಪೌಷ್ಟಿಕಾಂಶ ಇರುವ ಆಹಾರವನ್ನು ತೆಗೆದುಕೊಳ್ಳುವ ಮೂಲಕ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು.

ದೇಹದ ಆರೋಗ್ಯಕ್ಕೆ ಪ್ರತಿಯೊಂದು ವಿಟಮಿನ್ ಅವಶ್ಯಕತೆ ಇದೆ. ಅದರಲ್ಲಿ ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ತುಂಬಾ ಅವಶ್ಯಕ. ವಿಟಮಿನ್-ಎ ಸರಿಯಾಗಿದ್ದರೆ ಕಣ್ಣಿಗೆ ಸಂಬಂಧಿಸಿದ ಯಾವುದೇ ಕಾಯಿಲೆ ಬರದಂತೆ ತಡೆಗಟ್ಟುತ್ತದೆ ಹಾಗೂ ಕಣ್ಣಿನ ಸ್ನಾಯುಗಳು ಬಲವಾಗಿ ಇರುತ್ತವೆ.

ವಿಟಮಿನ್ ಎ ಆಂಟಿ ಎಕ್ಸಿಡೆಂಟ್ ಆಗಿದ್ದು ದೇಹದಲ್ಲಿ ಯಾವುದೇ ಕ್ಯಾನ್ಸರ್ ಜೀವಕೋಶ ಬೆಳೆಯಲು ಬಿಡುವುದಿಲ್ಲ ಮತ್ತು ಮೊಳೆಗಳನ್ನು ಆರೋಗ್ಯವಾಗಿ ಇಡಲು ಮತ್ತು ಬಲವಾಗಿ ಇಡಲು ವಿಟಮಿನ್ ಎ ಸಹಾಯವಾಗುತ್ತದೆ.

ವಿಟಮಿನ್ ಎ ಸರಿಯಾಗಿ ಸಿಗದಿದ್ದರೆ ಆರೋಗ್ಯದಲ್ಲಿ ಕೆಲವು ತೊಂದರೆಗಳು ಕಂಡು ಬರುತ್ತದೆ. ಮುಖ್ಯವಾಗಿ ಕಣ್ಣಿನ ಸಮಸ್ಯೆ ಕಂಡುಬರುತ್ತದೆ. ಗರ್ಭಾವಸ್ಥೆ ಸಮಯದಲ್ಲಿ ತಾಯಿ ತನಗೆ ಹುಟ್ಟುವ ಮಗು ಆರೋಗ್ಯಕರವಾಗಿ ದಷ್ಟಪುಷ್ಟವಾಗಿ ಇರಬೇಕೇಂದರೆ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಬೇಕು ಮತ್ತು ಜಾಗ್ರತೆಯಿಂದ ತನ್ನ ದೇಹದ ಕಾಳಜಿಯನ್ನು ವಹಿಸಬೇಕು.

ಗರ್ಭಿಣಿಯರು ವೈದ್ಯರು ಸೂಚಿಸಿದಂತೆ ಎಲ್ಲಾ ವಿಟಮಿನ್ ಇರುವಂತಹ ಆಹಾರಗಳನ್ನು ಸೇವಿಸಬೇಕು. ಏಕೆಂದರೆ ಹುಟ್ಟುವ ಮಗುವಿನ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ. ವಿಟಮಿನ್ ಎ ಮುಖ್ಯವಾಗಿ ಸಸ್ಯ ಆಹಾರದಲ್ಲಿ ಸಿಗುತ್ತದೆ ಹಾಗೂ ಮಾಂಸಾ ಆಹಾರದಲ್ಲೂ ಸಿಗುತ್ತದೆ.

ಯಾವುದೆಂದರೆ ಕ್ಯಾರೆಟ್, ಸಿಹಿ ಆಲೂಗಡ್ಡೆ, ಕೆಂಪು ದೊಣ್ಣೆ ಮೆಣಸಿನಕಾಯಿ, ಗೆಣಸು, ಬೆಣ್ಣೆ, ಕರ್ಬುಜ ಹಣ್ಣು, ಪಪ್ಪಾಯ, ಮಾವಿನಹಣ್ಣು, ಕುಂಬಳಕಾಯಿ, ಸಿಬೇಕಾಯಿ, ಟೊಮೇಟೊ,ಬೆಣ್ಣೆ ಹಣ್ಣು, ಕಲಂಗಡಿ ಹಣ್ಣು,ಗೋಡಂಬಿ, ಬಾಳೆಹಣ್ಣು, ಹಲಸಿನ ಹಣ್ಣು ಎಲ್ಲಾ ಹಸಿರು ತರಕಾರಿಯಲ್ಲಿ ವಿಟಮಿನ್ ಎ ಇದೆ ಮುಖ್ಯವಾಗಿ ಪಾಲಕ್ ಸೊಪ್ಪು, ಮೆಂತೆ ಸೊಪ್ಪಿನಲ್ಲಿ ವಿಟಮಿನ್ ಎ ಸಿಗುತ್ತದೆ.ಇನ್ನು ಮಾಂಸಾಹಾರದಲ್ಲಿ ಮೊಟ್ಟೆಯ ಹಳದಿ ಭಾಗದಲ್ಲಿ ಕೊಬ್ಬಿನ ಅಂಶ ಮಾತ್ರವಲ್ಲದೆ ವಿಟಮಿನ್ ಎ ಇದೆ ಹಾಗೂ ಚಿಕೆನ್, ಮಟನ್, ಮೀನಿನಲ್ಲೂ ಕೂಡ ವಿಟಮಿನ್ ಎ ಸಿಗುತ್ತದೆ.

Get real time updates directly on you device, subscribe now.

Leave a comment