ಈಗ ಎಲ್ಲೆಡೆ ಕೊರೊನಾದ ಎರಡನೆಯ ಅಲೆ ಅಬ್ಬರಿಸುತ್ತಿದೆ ಹಾಗಾಗಿ ಯಾವುದೇ ರೀತಿಯ ಚಿಕ್ಕಪುಟ್ಟ ಲಕ್ಷಣಗಳು ಕಂಡುಬಂದರೂ ಕೋವಿಡ್ ಇರಬಹುದು ಎಂಬ ಅನುಮಾನಗಳು ಕಾಡುತ್ತದೆ ಹಾಗಾಗಿ ಇಂತಹ ಯಾವುದೇ ರೀತಿಯ ಸಣ್ಣಪುಟ್ಟ ಲಕ್ಷಣಗಳು ಕಂಡುಬಂದಲ್ಲಿ ಹೀಗೆ ಮಾಡಿ ಚೆಕ್ ಮಾಡಿಕೊಳ್ಳಿ.
ಇದರಿಂದ ನಿಮಗೆ ಕೋವಿಡ್ ಬಂದಿದೆಯೋ ಇಲ್ಲವೋ ಎಂಬ ಸಣ್ಣ ಸುಳಿವು ಸಿಗುತ್ತದೆ.ಇನ್ನು ಮನೆಯಲ್ಲಿಯೇ ಇದ್ದುಕೊಂಡು ಕೊರೊನಾ ಬಂದಿದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ ಎಂದು ನೋಡುವುದಾದರೆ
ಈ ಕೊರೊನಾ ಎರಡನೆ ಅಲೆಯೂ ಮುಖ್ಯವಾಗಿ ಯುವಕರನ್ನು ಹೆಚ್ಚು ಅವರಿಸಿಕೊಳ್ಳುತ್ತಿದೆ.ಹಾಗಾಗಿ ನವ ಯುವಕರು ಯಾವುದೇ ರೀತಿಯ ಸಣ್ಣ ಪುಟ್ಟ ಲಕ್ಷಣಗಳು ಕಂಡುಬಂದರೆ ಉದಾಹರಣೆಗೆ ಜ್ವರ , ಕೆಮ್ಮು, ನೆಗಡಿ , ಮೈ ಕೈ ನೋವು ಬಂದಾಗ ಅದನ್ನು ಗುಣ ಪಡಿಸಿಕೊಳ್ಳಲು ಮಾತ್ರೆಗಳನ್ನು ಸೇವಿಸಿದಾಗ ಗುಣವಾಗುತ್ತದೆ.
ಹೀಗೆ ಗುಣಮುಖವಾದ ನಂತರ 1 ವಾರದ ಬಳಿಕ ಮತ್ತೊಮ್ಮೆ ಹುಷಾರಿಲ್ಲ ದಂತಾಗುತ್ತದೆ ಒಂದೇ ಬಾರಿ ಆಕ್ಸಿಜನ್ ಲೆವೆಲ್ ಇಳಿದು ಬಿಡುತ್ತದೆ.ಹಾಗಾಗಿ ಸಣ್ಣ ಲಕ್ಷಣ ಕಂಡ ತಕ್ಷಣವೇ ಮನೆಯಲ್ಲಿಯೇ ಇದ್ದುಕೊಂಡು ಪಲ್ಸ್ ಆಕ್ಸಿಮೀಟರ್ ಸಹಾಯದಿಂದ ಆಕ್ಸಿಜನ್ ಲೆವೆಲ್ ಚೆಕ್ ಮಾಡಬೇಕು.ಅಂದರೆ ಜ್ವರ ಕಾಣಿಸಿಕೊಂಡ ದಿನದಿಂದಲೇ ಪಲ್ಸ್ ಆಕ್ಸಿಮೀಟರ್ ಸಹಾಯದಿಂದ ಆಕ್ಸಿಜನ್ ಲೆವೆಲ್ಲನ್ನು ಪ್ರತಿದಿನ ಚೆಕ್ ಮಾಡಿಕೊಳ್ಳುತ್ತಿರಬೇಕು.
ಈ ಉಪಾಯ ಬಳಸಿ
ಮೊದಲು ಆಕ್ಸಿಜನ್ ಲೆವೆಲ್ಲನ್ನು ಚೆಕ್ ಮಾಡಿ ಬರೆದಿಟ್ಟುಕೊಳ್ಳಿ ನಂತರ 6 ನಿಮಿಷ ನಡೆದಾಡಿ
ಮೊತ್ತೊಮ್ಮೆ ಆಕ್ಸಿಜನ್ ಲೆವೆಲ್ಲನ್ನು ಚೆಕ್ ಮಾಡಿ ಬರೆದಿಟ್ಟುಕೊಳ್ಳಿ.ಈಗ ಎರಡರ ವ್ಯತ್ಯಾಸವನ್ನು ಗಮನಿಸಿ ಅಂದರೆ ಹೀಗೆ ಚೆಕ್ ಮಾಡಿದಾಗ ಆಕ್ಸಿಜನ್ ಲೆವೆಲ್ ನಡೆಡಾಡುವಕ್ಕಿಂತ ಮುಂಚೆ ಗಿಂತ 5% ಗಿಂತ ಕಡಿಮೆ ಬಂದರೆ ಸಮಸ್ಯೆ ಇರಬಹುದು ಎಂದು ಪರಿಗಣಿಸಬಹುದು ಉಸಿರಾಟಮ್ಮೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳ ಬಹುದು ಆದ್ದರಿಂದ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಿ.
ಇನ್ನೂ ಆಕ್ಸಿಜೆನ್ ಲೆವೆಲ್ ಕಡಿಮೆಯಾಗುವ ಮುನ್ನವೇ ನಾವು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡರೆ ಕೋವಿಡ್ ನಿಂದ ಭಯ ಪಡುವ ಅಗತ್ಯವಿರುವುದಿಲ್ಲ.ರೋಗ ಬಂದಾಗ ಹೋರಾಡುವುದಕ್ಕಿಂತ ರೋಗ ಬರುವುದಕ್ಕಿಂತ ಮುಂಚೆಯೇ ರೋಗದ ವಿರುದ್ಧ ಹೋರಾಡುವುದು ಉತ್ತಮ.
ವೆಂಕಟರಮಣ ಹೆಗಡೆ
ನಮ್ಮದು ನಿಸ್ವಾರ್ಥ ಸೇವೆ…ನಮ್ಮ ಭಾರತ ದೇಶದ ಪುರಾತನ ಪದ್ಧತಿಯಾದ ಆಯುರ್ವೇದವನ್ನು ಎಲ್ಲರಿಗೂ ತಿಳಿಯಲಿ ಹಾಗೂ ಅದರ ಉಪಯೋಗ ಪಡೆಯಲೇಂದು ನಾವು ಸಮಾಜಕ್ಕೆ ಮಾಡುವ ಸಣ್ಣ ಅಳಿಲು ಸೇವೆ.ನಾವು ಹೇಳುವ ಮನೆಮದ್ದುಗಳಿಂದ ಯಾವುದೇ ಪಾರ್ಶ್ವಪರಿಣಾಮಗಳಿಲ್ಲಾ.ಆದರೂ ನಿಮ್ಮ ನಿಮ್ಮ ದೇಹಕ್ಕೆ ಸಂಬಂಧಿಸಿದ ಹಾಗೆ ಮನೆ ಮದ್ದು ತೆಗೆದುಕೊಳ್ಳುವ ಮೊದಲು ಒಂದು ಸಲ ಡಾಕ್ಟರ್ ಸಲಹೆ ಪಡೆದು ತೆಗೆದುಕೊಳ್ಳಿ.
ಧನ್ಯವಾದಗಳು