ಸಪ್ತಪದಿ ತುಳಿದು ನೂತನ ಜೀವನಕ್ಕೆ ಸರಳವಾಗಿ ಅಡಿಯಿಟ್ಟ ಲಕ್ಷ್ಮೀಬಾರಮ್ಮ ಸೀರಿಯಲ್ ಜೋಡಿ: ಚಂದನ್ ಕುಮಾರ್ ಮತ್ತು ಕವಿತಾ ಗೌಡ

Entertainment

ಕೊರೊನಾ ಸಂಕಷ್ಟದ ನಡುವೆಯೇ ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಯೊಂದು ಸಪ್ತಪದಿ ತುಳಿದ ಹೊಸ ಜೀವನಕ್ಕೆ ಅಡಿಯಿಟ್ಟಾಗಿದೆ. ಹೌದು ಕನ್ನಡ ಕಿರುತೆರೆ ಹಾಗೂ ಹಿರಿ ತೆರೆಯಲ್ಲಿ ಮಾತ್ರವೇ ಅಲ್ಲದೇ ತೆಲುಗಿನ ಕಿರುತೆರೆಯಲ್ಲಿ ಕೂಡಾ ಜನಪ್ರಿಯತೆ ಪಡೆದುಕೊಂಡಿರುವ ನಟ ಚಂದನ್ ಕುಮಾರ್ ಹಾಗೂ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕವಿತಾ ಗೌಡ ಅವರು ನಿನ್ನೆ ವಿವಾಹವಾಗಿದ್ದಾರೆ. ಕೋವಿಡ್ ನ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಾ ಈ ಜೋಡಿ ತಮ್ಮ ಹೊಸ ಜೀವನ ಆರಂಭಿಸಿದೆ. ಕೊರೊನಾ ಬಿಕ್ಕಟ್ಟಿನಲ್ಲಿ ಕೇವಲ ನಲ್ವತ್ತು ಜನರಿಗೆ ಮಾತ್ರವೇ ಮದುವೆಗೆ ಅವಕಾಶ ಇದ್ದ ಕಾರಣ ಚಂದನ್ ಹಾಗೂ ಕವಿತಾ ಅವರ ಮದುವೆಗೆ ಕೆಲವೇ ಆಪ್ತರು ಮಾತ್ರ ಆಹ್ವಾನಿತರಾಗಿದ್ದರು ಎನ್ನಲಾಗಿದೆ.

ಲಕ್ಮೀ ಬಾರಮ್ಮ ಸೀರಿಯಲ್ ಮೂಲಕ ಈ ಜೋಡಿ ನಾಡಿನ ಜನರ ಮುಂದೆ ಬಂದು ಜನ ಮೆಚ್ಚುಗೆ ಪಡೆದ ಜೋಡಿಯಾಗಿತ್ತು. ಅನಂತರ ಧಾರಾವಾಹಿಯ ಅವರ ಪಾತ್ರಗಳಿಗೆ ಬೇರೆ ಕಲಾವಿದರು ಬಂದರು. ಸೀರಿಯಲ್ ನಿಂದ ಹೊರ ಬಂದ ಮೇಲೂ ಚಂದನ್ ಕುಮಾರ್ ಹಾಗೂ ಕವಿತಾ ಅವರ ನಡುವಿನ ಸ್ನೇಹ ಕೊನೆಯಾಗಿರಲಿಲ್ಲ.

ಇಬ್ಬರೂ ಬೇರೆ ಬೇರೆ ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದರೂ ಆಗಾಗ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಕವಿತಾ ಅವರಿಗೆ ಚಂದನ್ ಸರ್ಪ್ರೈಸ್ ಬರ್ತ್ ಡೇ ವಿಶ್ ಮಾಡಿದಾಗಲೇ ಅಭಿಮಾನಿಗಳಿಗೆ ಅವರ ನಡುವೆ ಸ್ನೇಹಕ್ಕಿಂತ ಬೇರೇನೋ ಇದೆ ಎನ್ನುವ ಅನುಮಾನ ಮೂಡಿತ್ತು.

ಲಾಕ್ ಡೌನ್ ನಂತರ ಸಹಾ ಇಬ್ಬರೂ ಜೊತೆಯಲ್ಲಿ ಪ್ರವಾಸ, ಟ್ರೆಕ್ಕಿಂಗ್ ಹೋದಾಗಲೂ ಆ ಫೋಟೋಗಳು ವೈರಲ್ ಆದಾಗ ಅಭಿಮಾನಿಗಳು ಹಾಗೂ ನೆಟ್ಟಿಗರು ನಿಮ್ಮ ನಡುವೆ ಪ್ರೇಮ ಇದೆ, ಮದುವೆಯಾಗಿ ಎಂದಿದ್ದರು.

ಆದರೆ ಚಂದನ್ ಆಗಲಿ ಕವಿತ ಅವರಾಗಲೀ ತಮ್ಮ ನಡುವಿನ ಪ್ರೇಮದ ವಿಚಾರವನ್ನು ಎಲ್ಲಿಯೂ ಬಿಟ್ಟು ಕೊಡಲಿಲ್ಲ. ನಮ್ಮದು ಸ್ನೇಹ ಎಂದೇ ಹೇಳಿಕೊಂಡು ಬಂದರು.

ಕೆಲವು ತಿಂಗಳುಗಳ ಹಿಂದೆ ಚಂದನ್ ಕುಮಾರ್ ಅವರು ತೆಲುಗು ಸೀರಿಯಲ್ ನಿಂದ ಹೊರ ಬಂದಾಗ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಜೀವನ ಶೀಘ್ರದಲ್ಲೇ ಎಂದು ಪೋಸ್ಟ್ ಹಾಕಿದಾಗ ಎಲ್ಲರಿಗೂ ಅವರ ವಿವಾಹದ ಬಗ್ಗೆ ಅನುಮಾನ ಮೂಡಿತ್ತು.

ಅದಾದ ನಂತರ ಏಪ್ರಿಲ್ ಒಂದರಂದು ಚಂದನ್ ಕವಿತಾ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಪ್ರಶ್ನೆಗಳಿಗೆ ಕೊನೆಗೂ ಸ್ಪಷ್ಟ ಉತ್ತರ ನೀಡಿದರು.

ನಿಶ್ಚಿತಾರ್ಥ ದ ನಂತರ ಅವರ ಮದುವೆಯ ಅಧಿಕೃತ ದಿನಾಂಕದ ಘೋಷಣೆಗಾಗಿ ಅವರ ಅಭಿಮಾನಿಗಳು ಬಹಳ ನಿರೀಕ್ಷೆಯಲ್ಲಿ ಇದ್ದರು. ಆದರೆ ಈ ನಡುವೆ ಮತ್ತೆ ಕೊರೊನಾ ಲಾಕ್ ಡೌನ್ ಆಯಿತು.

ಈಗ ನಿನ್ನೆಯ ದಿನ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಜೋಡಿ ಮಾಸ್ಕ್ ಧರಿಸಿ, ಕೊರೊನಾ ಮಾರ್ಗಸೂಚಿ ಪಾಲನೆ ಮಾಡುತ್ತಾ ವಿವಾಹ ಜೀವನಕ್ಕೆ ಅಡಿ ಇರಿಸಿದ್ದಾರೆ.

ಈ ಜೋಡಿಯ ಜೀವನದಲ್ಲಿ ಸದಾ ಸಂತೋಷ ತುಂಬಿರಲೆಂದು ನಾವು ಸಹಾ ಹಾರೈಸೋಣ. ನೂರ್ಕಾಲ ಸುಖವಾಗಿ ಬಾಳಲೆಂದು ನಾವೂ ಹರಸೋಣ.

Leave a Reply

Your email address will not be published.