ಈ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ನಿಮ್ಮ ಹೆಲ್ತ್ ಹಾಗೂ ವೆಲ್ತ್ ಕೂಡ ಚೆನ್ನಾಗಿರುತ್ತದೆ.

0
1332

1, ಮಲಗುವ ಬಂಗೆ ಸರಿಯಾದ ವಿಧಾನದಲ್ಲಿ ಇರಬೇಕು. ಶೇಕಡ 70ರಷ್ಟು ಜನರು ಮಲಗುವ ಸರಿಯಾದ ವಿಧಾನ ಗೊತ್ತಿಲ್ಲ.ಸಾಕಷ್ಟು ಜನರು ನಿದ್ದೆಯಲ್ಲಿ ಪದೇ-ಪದೇ ಎಚ್ಚರ ಆಗುತ್ತಿರುತ್ತದೆ ಮತ್ತು ಸರಿಯಾಗಿ ನಿದ್ದೆ ಬರುವುದಿಲ್ಲ.

ನಿದ್ದೆ ಸರಿಯಾಗಿ ಆಗದಿದ್ದರೆ ಕಣ್ಣುಗಳು ಉರಿಯುತ್ತವೆ ಮತ್ತು ಮೈ, ಕೈ ನೋವು, ಮಲವಿಸರ್ಜನೆ ಸರಿಯಾಗಿ ಆಗುವುದಿಲ್ಲ.ಬೆಳಗ್ಗೆ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ. ರಕ್ತದ ಒತ್ತಡದಲ್ಲಿ ಬದಲಾವಣೆಯಾಗುತ್ತಿರುತ್ತದೆ ಮತ್ತು ತ್ವಚೆಯಲ್ಲಿ, ಮುಖದಲ್ಲಿ ಗುಳ್ಳೆಗಳು ಆಗುತ್ತವೆ. ಕೂದಲು ಉದುರುವುದು ಮತ್ತು ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಾಡುತ್ತವೆ.

ಈ ರೀತಿ ಸಮಸ್ಯೆಗೆ ಮಲಗುವ ವಿಧಾನ ಕಾರಣವಾಗುತ್ತದೆ. ಕೆಲವರು ಎಡ ಅಥವಾ ಬಲಭಾಗದಲ್ಲಿ ತಿರುಗಿ ಮಲಗುತ್ತಾರೆ, ಕೆಲವರು ಬೆನ್ನ ಮೇಲೆ ಮತ್ತು ಹೊಟ್ಟೆಯ ಮೇಲೆ ತಿರುಗಿ ಮಲಗುತ್ತಾರೆ ಇದರಿಂದ ಹಲವಾರು ಅಡ್ಡಪರಿಣಾಮ ಬೀರುತ್ತವೆ.

ಹೊಟ್ಟೆಯ ಮೇಲೆ ಮಲಗುವುದರಿಂದ ಉಸಿರಾಟದ ತೊಂದರೆ ಆಗುತ್ತದೆ. ಕ್ರಮೇಣವಾಗಿ ಮಲಗಿದರೆ ಬೆನ್ನು ಮತ್ತು ಸೊಂಟದ ನೋವು ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಜೀರ್ಣಶಕ್ತಿ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಇನ್ನು ಬಲಭಾಗದಲ್ಲಿ ಕೂಡ ಮಲಗಬಾರದು. ಆದ್ದರಿಂದ ಎಡಭಾಗಕ್ಕೆ ತಿರುಗಿ ಮಲಗುವುದರಿಂದ ತುಂಬಾನೆ ಒಳ್ಳೆಯದು.ಈ ರೀತಿ ಮಲಗುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಬೇಗ ಆಗುತ್ತದೆ.

2, ಆದಷ್ಟು ನೀರನ್ನು ಜಾಸ್ತಿ ಕುಡಿಯಿರಿ.

3, WHO ಹೇಳುವ ಪ್ರಕಾರ ಒಬ್ಬ ಮನುಷ್ಯ ಅವನ ಜೀವನದಲ್ಲಿ ಆರೋಗ್ಯವಾಗಿ ಇರಬೇಕೆಂದರೆ ಅವನು ಪ್ರತಿನಿತ್ಯ ಕನಿಷ್ಠಪಕ್ಷ 8000 ಹೆಜ್ಜೆಗಳನ್ನು ಇಡಬೇಕು.ಫಿಟ್ನೆಸ್ ಬ್ಯಾಂಡ್ ಮೂಲಕ ನೀವು ಕೌಂಟ್ ಮಾಡಬಹುದು.

4, ನೀವು ಸೇವನೆ ಮಾಡುವಂತಹ ಆಹಾರವನ್ನು 32 ಬಾರಿ ಜಗಿದು ತಿನ್ನಬೇಕಾಗುತ್ತದೆ. ಅವಸರದಲ್ಲಿ ತಿಂದರೆ ಸೇವನೆ ಮಾಡಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಅದರಿಂದ ಆಹಾರವನ್ನು ನಿಧಾನವಾಗಿ ಸೇವನೆ ಮಾಡಿ.ಇದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

LEAVE A REPLY

Please enter your comment!
Please enter your name here