ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ಈ ಕೆಲಸ ಮಾಡಿದ ಶುಭ ಪೂಂಜಾ!ಕೊಟ್ಟ ಮಾತು ಉಳಿಸಿಕೊಂಡ ಶುಭಾ ಪೂಂಜಾ

0
302

ಕನ್ನಡ ಬಿಗ್ ಬಾಸ್ ಸೀಸನ್ 8 ಕೋವಿಡ್ ಕಾರಣದಿಂದಾಗಿ ಅರ್ಧದಲ್ಲೇ ನಿಂತು ಹೋಯಿತು. ಕಾರ್ಯಕ್ರಮ ನಿಂತಿದ್ದು ಬಿಗ್ ಬಾಸ್ ಶೋ ನೋಡುವ ಅಪಾರವಾದ ಅಭಿಮಾನಿಗಳಿಗೆ ಒಂದು ದೊಡ್ಡ ನಿರಾಶೆಯನ್ನು ಮೂಡಿಸಿದೆ. ಈ ಬಾರಿ ಬಿಗ್ ಬಾಸ್ ಶೋಗೆ ಸ್ಪರ್ಧಿಗಳಾಗಿ ಸಿನಿಮಾ ನಟರು, ಸಾಮಾಜಿಕ ಕಾರ್ಯಕರ್ತರು, ಕ್ರೀಡಾರಂಗದ ವರು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಗಳಾದ ಪ್ರತಿಭಾವಂತರು ಮನೆಯನ್ನು ಪ್ರವೇಶಿಸಿದ್ದರು. 72 ದಿನಗಳ ಕಾಲ ಸುಸೂತ್ರವಾಗಿ ನಡೆದುಕೊಂಡು ಬಂದಂತಹ ಬಿಗ್ ಬಾಸ್ ಕಾರ್ಯಕ್ರಮವು, ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣದ ದೃಷ್ಟಿಯಿಂದ ಹೊರಡಿಸಿದ ಮಾರ್ಗಸೂಚಿಗಳ ಅನುಸಾರ ಪ್ರಸಾರ ಆಗುವುದು ಸಾಧ್ಯವಿಲ್ಲದ ಕಾರಣ ಶೋ ನಿಂತಿತು.

ಈ ಬಾರಿ ಬಿಗ್ ಬಾಸ್ ಮನೆಗೆ ಸ್ಯಾಂಡಲ್ವುಡ್ನ ಇಬ್ಬರೂ ಪ್ರಸಿದ್ಧ ನಟಿಯರು ಎಂಟ್ರಿ ನೀಡಿದ್ದರು. ಆ ಇಬ್ಬರು ನಟಿ ಶುಭಾ ಪೂಂಜಾ ಹಾಗೂ ನಟಿ ನಿಧಿ ಸುಬ್ಬಯ್ಯ. ಶುಭಾ ಪೂಂಜಾ ಅವರು ತಮ್ಮ ಮುಗ್ಧತೆ ಹಾಗೂ ತುಂಟಾಟಗಳಿಂದ ಜನರ ಮನಸ್ಸನ್ನು ಗೆದ್ದರು.

ಆರಂಭದಲ್ಲಿ ಕೇವಲ ಒಂದೆರಡು ವಾರಗಳಲ್ಲೇ ಶುಭ ಪೂಂಜಾ ಮನೆಯಿಂದ ಹೊರ ಬರಬಹುದು ಎಂದು ಅನೇಕರು ಊಹೆಗಳನ್ನು ಮಾಡಿದ್ದರು. ಆದರೆ ಶುಭ ಎಲ್ಲಾ ಊಹೆಗಳನ್ನು ಸುಳ್ಳು ಮಾಡಿ ಬರೋಬ್ಬರಿ 72 ದಿನಗಳ ಕಾಲ ಮನೆಯಲ್ಲಿ ಉಳಿದುಕೊಂಡಿದ್ದರು.

ಮನೆಯಲ್ಲಿರುವ ವೇಳೆಯಲ್ಲಿ ಕೆಲಸದ ವಿಚಾರದಲ್ಲಿ ಸೋಮಾರಿತನ ತೋರಿಸುತ್ತಾ ಆಗಾಗ ಬಿಗ್ ಬಾಸ್ ಗೆ ಬೇಡಿಕೆಗಳನ್ನು ಇಡುತ್ತಾ , ತಮಾಷೆಯ ಮಾತುಗಳನ್ನು ಆಡುತ್ತಾ, ತಮ್ಮ ಜೀವನದ ಏರುಪೇರುಗಳು ಹಾಗೂ ಏರಿಳಿತಗಳ ಬಗ್ಗೆ ಒಂದಷ್ಟು ವಿಚಾರಗಳನ್ನು ಶುಭ ಹಂಚಿ ಕೊಂಡಿದ್ದರು.

ಬಿಗ್ ಬಾಸ್ ಮನೆಯಲ್ಲಿ ಇರುವಾಗ ಶುಭ ಬಡವರಿಗಾಗಿ ಏನಾದರೂ ಮಾಡುತ್ತೇನೆ ಎನ್ನುವಂತಹ ಮಾತುಗಳನ್ನು ಹೇಳಿದರು. ಈಗ ಶೋ ಮುಗಿದ ಮೇಲೆ ಈ ಮಾತನ್ನು ಅಕ್ಷರಶಹ ಪಾಲಿಸಿದ್ದಾರೆ ಶುಭ.

ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಪ್ರಸ್ತುತ ರಾಜ್ಯದಲ್ಲಿ ಲಾಕ್ ಡೌನ್ ಹೇರಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಹಸ್ತವನ್ನು ಚಾಚಿದ್ದಾರೆ ನಟಿ ಶುಭಾ ಪೂಂಜಾ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಅಗತ್ಯವಸ್ತುಗಳ ಕೊರತೆಯಿಂದ ಸಮಸ್ಯೆ ಎದುರಿಸುತ್ತಿರುವವರಿಗೆ ನಟಿ ಶುಭಾ ಪೂಂಜಾ ಅಗತ್ಯವಸ್ತುಗಳ ಪೂರೈಕೆಯನ್ನು ಮಾಡಿದ್ದಾರೆ.

ನಟಿ ಶುಭಾ ಪೂಂಜಾ ಅವರು ದಿನಸಿ ಕಿಟ್ ಗಳನ್ನು ಅಗತ್ಯವಿರುವವರಿಗೆ ಪೂರೈಕೆ ಮಾಡಿರುವ ಫೋಟೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲಾಗಿದ್ದು ಶುಭ ಅವರ ಈ ಕಾರ್ಯಕ್ಕೆ ನೆಟ್ಟಿಗರು ಬಹಳಷ್ಟು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here