ಈಗ ಕರೋನ ಇರುವುದರಿಂದ ಪ್ರತಿ ದಿನ ಬಾರಿ ಬಾರಿ ಕೈ ತೊಳೆಯುತ್ತಿರಬೇಕು ಅದಕ್ಕಾಗಿ ಸೋಪ್ ಸ್ಯಾನಿಟೈಸರ್ ಗಳಿಗೆ ಎಷ್ಟು ಅಂತ ಹಣ ಖರ್ಚು ಮಾಡಲು ಸಾಧ್ಯ ನೀವೇ ಹೇಳಿ.ಅದಕ್ಕಾಗಿಯೇ ಮನೆಯಲ್ಲಿಯೇ ಬೇವಿನ ಎಲೆಯನ್ನು ಬಳಸಿ ಸೋಪ್ ತಯಾರಿಸುವುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ …!
ಬೇವಿನ ಎಲೆಯ ಸೋಪ್
ಬೇಕಾಗುವ ಸಾಮಗ್ರಿಗಳು:ಒಂದು ಕಟ್ಟು ಬೇವಿನ ಎಲೆ , ಒಂದು ವಿಟಮಿನ್ ಇ ಮಾತ್ರೆ , ಒಂದು ಟೀ ಸ್ಪೂನ್ ಅರಿಶಿನ ಪೌಡರ್ ,ಒಂದು ಪಿಯರ್ಸ್ ಸೋಪು ಅಥವಾ ಯಾವ ಸೋಪಿನಲ್ಲಿ ಗ್ಲಿಸರಿನ್ ಅಂಶ ಇರುತ್ತದೆಯೋ ಆ ಸೋಪನ್ನು ಬಳಸಬಹುದು.
ಮಾಡುವ ವಿಧಾನ:ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಬೇವಿನ ಎಲೆಗಳನ್ನು ಜೊತೆಗೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.ಈ ರುಬ್ಬಿದ ಮಿಶ್ರಣವನ್ನು ಒಂದು ಬಟ್ಟಲಿಗೆ ಸೋಸಿಕೊಳ್ಳಿ ನಂತರ ಒಂದು ಟೀ ಸ್ಪೂನ್ ಅರಿಶಿಣ , ವಿಟಮಿನ್ ಇ ಮಾತ್ರೆ ಹಾಕಿ
( ಈಗ ಪಿಯರ್ಸ್ ಸೋಪನ್ನು ಚಿಕ್ಕ ಚಿಕ್ಕದಾಗಿ ಕಟ್ ಮಾಡಿಟ್ಟುಕೊಳ್ಳಿ ಹಾಗೂ ನಿಮ್ಮ ಬಳಿ ಸೋಪ್ ಬೇಸ್ ಇದ್ದರೆ ಅದನ್ನು ಸಹ ಕಟ್ ಮಾಡಿಟ್ಟುಕೊಳ್ಳಿ ಅಥವಾ ನಿಮ್ಮ ಬಳಿ ಯಾವುದೇ ಬೇರೆ ಸೋಪಿದ್ದರೂ ಸಹ ನೀವು ಈ ನೀಮ್ ಸೋಪ್ ತಯಾರು ಮಾಡಲು ಬಳಸಬಹುದಾಗಿದೆ. )
ಈಗ ಒಂದು ಪಾತ್ರೆಯಲ್ಲಿ ಬಿಸಿ ಮಾಡಲು ನೀರಿಟ್ಟು ಅದರೊಳಗೆ ಇನ್ನೊಂದು ಪಾತ್ರೆಯನ್ನಿಟ್ಟು ಅದರಲ್ಲಿ ಸ್ವಲ್ಪ ನೀರು ಹಾಕಿ ಅದರೊಳಗೆ ಕಟ್ ಮಾಡಿಟ್ಟುಕೊಂಡಿರುವ ಸೋಪ್ ಮತ್ತು ಸೋಪಿನ ಬೇಸನ್ನು ಹಾಕಿ ಇವೆರಡು ಕರಗುವವರೆಗೆ ಕುದಿಸಿ ಈಗ ಅದೇ ಪಾತ್ರೆಗೆ ಬೇವಿನ ಸೊಪ್ಪಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಒಂದು ನಿಮಿಷದ ವರೆಗೆ ಮಿಕ್ಸ್ ಮಾಡಿ.
ಈಗ ಅದನ್ನು ಸ್ಟವ್ ಮೇಲಿಂದ ಇಳಿಸಿ . ನಿಮಗೆ ಯಾವ ಆಕಾರದ ಸೋಪ್ ಮಾಡಬೇಕು ಅನ್ನಿಸುತ್ತದೆಯೋ ಆ ಆಕಾರದ ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಯನ್ನು ತೆಗೆದು ಇಟ್ಟುಕೊಳ್ಳಿ .ಪ್ಲಾಸ್ಟಿಕ್ ಬೌಲ್ ಅಥವಾ ಸ್ಟೀಲ್ ಪಾತ್ರೆಗೆ ಸ್ವಲ್ಪ ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಅಥವಾ ನೀವು ಅಡುಗೆಗೆ ಬಳಸುವ ಎಣ್ಣೆಯನ್ನು ಸವರಿ
ಅದರೊಳಗೆ ರೆಡಿ ಮಾಡಿಟ್ಟುಕೊಂಡಿರುವ ಮಿಶ್ರಣವನ್ನು ಹಾಕಿ ಅರ್ಧ ಗಂಟೆ ಪ್ರೀಜರ್ ನಲ್ಲಿಡಿ ಅಥವಾ ನಿಮ್ಮ ಬಳಿ ಫ್ರಿಡ್ಜ್ ಇಲ್ಲವಾದರೆ ಹೊರಗಡೆಯೇ ಹಾಗೇ ಬಿಟ್ಟು ಬಿಡಿ ಒಂದು ದಿನದೊಳಗೆ ಸೋಪ್ ರೀತಿ ಬಳಸುವಂತೆ ಗಟ್ಟಿಯಾಗುತ್ತದೆ.ನಂತರ ಚಾಕುವಿನ ಸಹಾಯದಿಂದ ಸೋಪ್ ಅಂಟಿಕೊಂಡಿರುವುದನ್ನು ಬಿಡಿಸಿ.
ಈಗ ಪ್ರತಿ ದಿನ ಅಗತ್ಯವಿರುವ ಜಾಗದಲ್ಲಿ ಆರೋಗ್ಯಕರವಾದ ಸೋಪ್ ಬಳಸಿ ಆರೋಗ್ಯವಾಗಿರಿ.
ಧನ್ಯವಾದಗಳು.