ಶ್ವಾಸಕೋಶ ಸ್ಟ್ರಾಂಗ್ ಆಗಬೇಕಾ!ಕೆಮ್ಮು, ಕಫ ಕ್ಕೆ ಇದೊಂದೇ ಸಾಕು!

Featured-Article

ಹಿಪ್ಪಲಿ

ಹಿಪ್ಪಲಿ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿಲ್ಲ ಯಾಕೆಂದರೆ ಇದನ್ನು ಹೆಚ್ಚಾಗಿ ಬಳಸದಿರುವ ಕಾರಣ ಇದರ ಬಗ್ಗೆ ಹೆಚ್ಚಿನ ಮಾಹಿತಿ ಹಲ ಕೆಲವರಿಗೆ ಇರುವುದಿಲ್ಲ.ಇನ್ನೂ ಈ ಹಿಪ್ಪಲಿಯನ್ನು ಪಿಪ್ಪಲಿ ಎಂದು ಸಹ ಕರೆಯಲಾಗುತ್ತದೆ.ಹಿಪ್ಪಲಿಯು ಉಷ್ಣ ಪ್ರಕೃತಿ ಯನ್ನು ಹೊಂದಿದೆ ಹಾಗಾಗಿ ಕೆಮ್ಮು , ನೆಗಡಿ , ಶೀತ , ಕಫದಂತಹ ಸಮಸ್ಯೆಗಳಿಗೆ ಬಳಸಬಹುದು.

ಇನ್ನೂ ಹಿಪ್ಪಲಿಯ ಆರೋಗ್ಯ ಲಾಭಗಳ ಬಗ್ಗೆ ತಿಳಿಯೋಣ :ಹಿಪ್ಪಲಿಯು ನಮ್ಮ ಪ್ರತಿಯೊಂದು ದೇಹದ ಅಂಗಾಂಗಕ್ಕೂ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.ಹಿಪ್ಪಲಿಯನ್ನು ಕೆಮ್ಮು, ಕಫ ಇರುವಂಥವರು ಹೆಚ್ಚಾಗಿ ಬಳಸುತ್ತಾರೆ ಆದರೆ ಇದನ್ನು ಹೊರತಾಗಿಯೂ ಹಿಪ್ಪಲಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಹಿಪ್ಪಲಿ ಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ , ಆ್ಯಂಟಿ ವೈರಲ್ , ಆ್ಯಂಟಿ ಫಂಗಲ್ ಗುಣಗಳಿರುವುದರಿಂದ ಇದು ದೇಹದ ಇನ್ ಫೆಕ್ಷನ್ ಅನ್ನು ನಿವಾರಣೆ ಮಾಡುತ್ತದೆ.

ಇದನ್ನು ನಿಯಮಿತವಾಗಿ ಬಳಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಕೆಮ್ಮು , ಕಫ ,ಅಸ್ತಮಾ ಶ್ವಾಸಕೋಸಕ್ಕೆ ಸಂಬಂಧಪಟ್ಟ ಇತ್ಯಾದಿ ತೊಂದರೆಗಳಿಗೆ ಹಿಪ್ಪಲಿ 1 ಉತ್ತಮ ಮದ್ದಾಗಿದೆ.ಇದನ್ನು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಬಳಕೆ ಮಾಡಬಹುದಾಗಿದೆ.ಈ ಹಿಪ್ಪಲಿಯನ್ನು ಶೀತ , ಜ್ವರ , ಕಫ , ಕೆಮ್ಮು , ಅಸ್ತಮಾ ಉಸಿರಾಟದ ತೊಂದರೆ , ಶ್ವಾಸಕೋಶಕ್ಕೆ ಸಂಬಂಧಪಟ್ಟಂತಹ ಯಾವುದೇ ತೊಂದರೆಯಿದ್ದರೂ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.

ಹಿಪ್ಪಲಿಯನ್ನು ವಿವಿಧ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ ಅಂದರೆ ಹಿಪ್ಪಲಿಯನ್ನು ಹಾಗೆ ಬಳಸಬಹುದು , ಪೌಡರ್ ರೀತಿಯಲ್ಲಿ ಕೂಡ ಬಳಸಬಹುದು.ಹಿಪ್ಪಲಿಯನ್ನು ನಿಯಮಿತವಾಗಿ ಬಳಸುವುದರಿಂದ ದೇಹದ ತೂಕವನ್ನು ನಿಯಂತ್ರಿಸಬಹುದಾಗಿದೆ.ಹಿಪ್ಪಲಿ ಯಲ್ಲಿ ನಮ್ಮ ದೇಹದಲ್ಲಿ ಹೆಚ್ಚಾಗಿ ಕೂತಿರುವಂತಹ ಕೊಬ್ಬನ್ನು ಕರಗಿಸುವ ಶಕ್ತಿ ಇದೆ.ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುವುದರಿಂದ ಮಧುಮೇಹ ಕಾಯಿಲೆ ಇರುವಂಥವರಿಗೆ ಹಿಪ್ಪಲಿ 1 ದಿವ್ಯ ಔಷಧಿಯಾಗಿ ಕೆಲಸ ಮಾಡುತ್ತದೆ.

ಮಹಿಳೆಯರಲ್ಲಿ ಮುಟ್ಟಿನ ನೋವು ಇನ್ನೂ ಇನ್ನಿತರ ಅದಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಪ್ರತಿದಿನದ ಆಹಾರ ಕ್ರಮದಲ್ಲಿ ಹಿಪ್ಪಲಿಯನ್ನು ಬಳಕೆ ಮಾಡುವುದರಿಂದ ಮುಟ್ಟಿನ ಸಮಸ್ಯೆಗಳು ದೂರಾಗುತ್ತದೆ.

ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಹಿಪ್ಪಲಿಯನ್ನು ತೇಯ್ದು ಬಳಕೆ ಮಾಡುವುದರಿಂದ ಜೀರ್ಣಾಂಗ ಸುಗಮಗೊಳ್ಳುತ್ತದೆ ಹಾಗೂ ಇದರಿಂದ ಕಫ , ಕೆಮ್ಮು ಇತ್ಯಾದಿ ತೊಂದರೆಗಳು ನಿವಾರಣೆಯಾಗುತ್ತವೆ.ಈ ಹಿಪ್ಪಲಿಯನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತೇಯ್ದು ಬಳಕೆ ಮಾಡಬಹುದಾಗಿದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ಹಿಪ್ಪಲಿ ಬಹಳ ಪರಿಣಾಮಕಾರಿ ಅಂದರೆ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ.ಹಿಪ್ಪಲಿಯನ್ನು ವಾರಕ್ಕೆ 2 ರಿಂದ 3 ಬಾರಿ ಯಾದರೂ ನಿಯಮಿತವಾಗಿ ಸೇವಿಸಬೇಕು.

ಇನ್ನು ನೀವು ಪ್ರತಿದಿನ ಸೇವಿಸುವುದಾದರೆ ಹಿಪ್ಪಲಿಯು ಉಷ್ಣ ಪ್ರಕೃತಿ ಇರುವುದರಿಂದ ನಿಮ್ಮ ದೇಹಕ್ಕೆ ಅನುಸಾರವಾಗಿ ತೆಗೆದುಕೊಳ್ಳಿ.

ಧನ್ಯವಾದಗಳು.

Leave a Reply

Your email address will not be published.