ವಾರಕ್ಕೊಂದರಂತೆ 12 ವಾರ ಈ ಬೇರೆ ಬೇರೆ ಎಲೆಗಳ ಕಷಾಯ ಕುಡಿದರೆ ನಿಮ್ಮ ರೋಗನಿರೋಧಕ ಶಕ್ತಿ ನಿಮಗೆ ಗೊತ್ತಿಲ್ಲದೆ ಹೆಚ್ಚಾಗುತ್ತದೆ!
ಕಷಾಯಗಳ ಮೂಲಕ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಈ ಕೊರೋನಾ ಎರಡನೇ ಅಲೆಯ ವಿರುದ್ಧ ನಾವು ಹೋರಾಟ ಮಾಡಲು ನಮಗೆ ಮುಖ್ಯವಾಗಿ ಬೇಕಾಗಿರುವುದು ರೋಗನಿರೋಧಕ ಶಕ್ತಿ.ಇನ್ನು ಅದಕ್ಕಾಗಿ ವಿಟಮಿನ್ ಸಿ ಅಧಿಕವಿರುವ ಸೊಪ್ಪುಗಳನ್ನು ಬಳಸಿಕೊಂಡು ಕಷಾಯ ಮಾಡಿಕೊಂಡು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ವಿಟಮಿನ್ ಸಿ ಯಾವೆಲ್ಲ ಸೊಪ್ಪಿನಲ್ಲಿ ಅಧಿಕವಾಗಿರುತ್ತದೆ ಎಂದು ನೋಡುವುದಾದರೆ
- ಹುಣಸೆ ಎಲೆ
- ನೆಲನೆಲ್ಲಿ ಎಲೆ
- ನಲ್ಲಿ ಎಲೆ
- ಸೀಬೆ (ಪೇರಳೆ) ಎಲೆ
- ನೇರಳೆ ಎಲೆ
ಈ 5 ಸೊಪ್ಪುಗಳಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ.
ಕಷಾಯವನ್ನು ಮಾಡುವ ವಿಧಾನ :ಈ ಕಷಾಯವನ್ನು ಮಾಡಲು ಮಣ್ಣಿನ ಮಡಿಕೆಯನ್ನು ಬಳಸಿ ಇದರಿಂದ ಉತ್ತಮ ಲಾಭ ಪಡೆಯಬಹುದು.ಅಥವಾ 1 ವೇಳೆ ಮಣ್ಣಿನ ಮಡಕೆ ಸಿಗದೇ ಇದ್ದರೆ ಸ್ಟೀಲ್ ಪಾತ್ರೆಯನ್ನು ಬಳಸಿ.
ವಿಶೇಷ ಸೂಚನೆ :ಯಾವುದೇ ಬೇರೆ ಲೋಹದ ಪಾತ್ರೆಗಳನ್ನು ಬಳಸಬಾರದು.ಮೊದಲಿಗೆ ಸ್ಟವ್ ಹಚ್ಚಿ ಮಣ್ಣಿನ ಮಡಕೆಯೊಳಗೆ ಅರ್ಧ ಲೀಟರ್ ನೀರು , 1ಹಿಡಿ ಹುಣಸೇ ಎಲೆ ಹಾಕಿ ಮಧ್ಯಮ ಉರಿಯಲ್ಲಿ 8 ರಿಂದ 10 ನಿಮಿಷ ಕುದಿಸಿನಂತರ ಇಳಿಸುವ ಮುನ್ನ 1 ಚಿಟಿಕೆ ಅರಿಶಿಣ , ರುಚಿಗೆ ತಕ್ಕಷ್ಟು ಬೆಲ್ಲ ( ಮಧುಮೇಹ ಇರುವಂಥವರು ಬೆಲ್ಲವನ್ನು ಬಳಸುವುದು ಬೇಡ )ಅದರ ಬದಲಾಗಿ ಸ್ವಲ್ಪ ನಿಂಬೆ ಹಣ್ಣಿನ ರಸ ಮತ್ತು ಉಪ್ಪನ್ನು ಹಾಕಿ ಒಂದು ಲೋಟಕ್ಕೆ ಸೋಸಿ ಇಡಿ.ಕುಡಿಯುವ ಸಮಯದಲ್ಲಿ ತೆಂಗಿನ ಹಾಲನ್ನು ಹಾಕಿ ಕಷಾಯವನ್ನು ಕುಡಿಯಿರಿ .ಈ ಮೇಲೆ ತಿಳಿಸಿರುವ ರೀತಿ 1 ವಾರಗಳ ಕಾಲ ಅಂದರೆ 7 ದಿನಗಳ ಕಾಲ ಹುಣಸೆ ಎಲೆಯ ಕಷಾಯವನ್ನು ಸೇವಿಸಿ.
ಹೀಗೆ ಪ್ರತಿವಾರ ಬೇರೆ ಎಲೆಯ ಕಷಾಯ ಮಾಡಿಕೊಂಡು ಕುಡಿಯಿರಿ.
ಮತ್ತೊಂದು ವಾರ ನಲ್ಲಿ ಯ ಎಲೆಯ ಕಷಾಯವನ್ನು ಮಾಡಿಕೊಂಡು ಕುಡಿಯಿರಿ.ಮತ್ತೊಂದು ವಾರ ನೆಲನೆಲ್ಲಿ ಎಲೆಯ ಕಷಾಯವನ್ನು ಮಾಡಿಕೊಂಡು ಕುಡಿಯಿರಿ.ಮತ್ತೊಂದು ವಾರ ಸೀಬೆ (ಪೇರಳೆ) ಎಲೆಯ ಕಷಾಯವನ್ನು ಮಾಡಿಕೊಂಡು ಕುಡಿಯಿರಿ.ಮತ್ತೊಂದು ವಾರ ನೇರಳೆ ಎಲೆಯ ಕಷಾಯವನ್ನು ಮಾಡಿಕೊಂಡು ಕುಡಿಯಿರಿ.ಕಷಾಯವನ್ನು ತೆಗೆದುಕೊಳ್ಳಬೇಕಾದ ಪ್ರಮಾಣ :15 ವರ್ಷ ಮೇಲ್ಪಟ್ಟವರು 250 ಎಂಎಲ್ ತೆಗೆದುಕೊಳ್ಳಿ.15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು 100 ರಿಂದ 150 ಎಂಎಲ್ ತೆಗೆದುಕೊಳ್ಳಿ.ಕಷಾಯವನ್ನು ಕುಡಿಯುವ ಸಮಯ :
ಬೆಳಿಗ್ಗೆ 6:30 ರಿಂದ 7 ಗಂಟೆಯ ಒಳಗೆ 250 ಎಂಎಲ್ ನಷ್ಟು ಈ ಕಷಾಯವನ್ನು ಕುಡಿಯುವುದು ಒಳ್ಳೆಯದು.ಹಾಗೂ ಸಂಜೆ 6 ಗಂಟೆ ಯಿಂದ 6:30 ರೊಳಗೆ 250 ಎಂಎಲ್ ನಷ್ಟು ಈ ಕಷಾಯವನ್ನು ಕುಡಿಯುವುದು ಒಳ್ಳೆಯದು.ಈ ರೀತಿ 1 ಎಲೆಯ ಕಷಾಯವನ್ನು 1 ವಾರದ ವರೆಗೆ ಕುಡಿಯಿರಿ.ಬೆಳಿಗ್ಗೆಯ ಕಷಾಯ ಬೆಳಿಗ್ಗೆ ಮಾಡಿಕೊಂಡು ಕುಡಿಯಿರಿ ಮತ್ತು ಸಂಜೆ ಕಷಾಯವನ್ನು ಸಂಜೆ ಮಾಡಿಕೊಂಡು ಕುಡಿಯಿರಿ.
ಈ 5 ರೀತಿಯ ಎಲೆಗಳ ಕಷಾಯವನ್ನು ಸೇವಿಸುವುದರಿಂದ ಕೇವಲ 1 ರಿಂದ 2 ತಿಂಗಳೊಳಗಡೆ ನಮ್ಮ ರೋಗನಿರೋಧಕ ಶಕ್ತಿಯು ನಮಗೆ ಗೊತ್ತಿಲ್ಲದೆಯೇ ಈ ಎಲೆಗಳು ಹೆಚ್ಚು ಮಾಡುತ್ತವೆ.
ಸೂಚನೆ- ಈ ಲೇಖನದಲ್ಲಿ ನೀಡಲಾದ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಮಾಹಿತಿ ಉದ್ದೇಶಕ್ಕಾಗಿ ಬರೆಯಲಾಗಿದೆ. ಇದನ್ನು ಯಾವುದೇ ಕಾಯಿಲೆಗೆ ಚಿಕಿತ್ಸೆಯಾಗಿ ಅಥವಾ ವೈದ್ಯಕೀಯ ಸಲಹೆಯಾಗಿ ನೋಡಬಾರದು. ಇಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಂಪೂರ್ಣವಾಗಿ ಪರಿಣಾಮಕಾರಿಯಾಗುತ್ತವೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ಇಲ್ಲಿ ನೀಡಿರುವ ಯಾವುದೇ ಸಲಹೆಗಳು ಅಥವಾ ಸಲಹೆಗಳನ್ನು ಪ್ರಯತ್ನಿಸುವ ಮೊದಲು, ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.
ಧನ್ಯವಾದಗಳು.