ಸುಸ್ತು , ಆಯಾಸ , ಅಧಿಕ ತೂಕ , ಚರ್ಮರೋಗ , ಮಹಿಳೆಯರಲ್ಲಿ ಕೂದಲು ಉದುರುವಿಕೆ , ಅಂಗೈ ಅಂಗಾಲು ಬೆವರುವುದು, ಹೃದಯ ಬಡಿತ ಹೆಚ್ಚಾಗುವುದು , ಹಾರ್ಟ್ ಅಟ್ಯಾಕ್ , ಗಾಬರಿಇವೆಲ್ಲ ಸಮಸ್ಯೆಗಳಿಗೆ ಒಂದೇ ಕಾರಣ! ಆ ಕಾರಣ ಯಾವುದೆಂದು ಇಂದೇ ತಿಳಿದುಕೊಳ್ಳಿ!
ಇತ್ತೀಚಿನ ಸಮಯದಲ್ಲಿ ಹೆಚ್ಚಾಗಿ ಜನರಿಗೆ ಬೆನ್ನು ನೋವು ಹಾಗೂ ಮೂಳೆ ನೋವಿನ ಸಮಸ್ಯೆಗಳು ಕಡಿಮೆ ವಯಸ್ಸಿನಲ್ಲೇ ಕಾಣಿಸಿಕೊಂಡಿರುವುದನ್ನು ನಾವು ಗಮನಿರಬಹುದು.ಇದಕ್ಕೆಲ್ಲ ಪ್ರಮುಖ ಕಾರಣ ನಮ್ಮ ದೇಹಕ್ಕೆ ವಿಟಮಿನ್ ಡಿ ಕೊರತೆ.ಭಾರತದಲ್ಲಿ ಶೇಕಡ 80%ರಷ್ಟು ಜನ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ವಿಟಮಿನ್ ಡಿ ಕೊರತೆ ಉಂಟಾಗಲು ಪ್ರಮುಖ ಲಕ್ಷಣಗಳು
- ಸ್ನಾಯು ಸೆಳೆತ ಉಂಟಾಗುವಿಕೆ
- ಸ್ವಲ್ಪ ನಡೆದರೂ ಸುಸ್ತಾಗುವುದು
- ಸ್ವಲ್ಪ ಕೆಲಸ ಮಾಡಿದರೂ ಆಯಾಸವಾಗುವುದು
- ಅಧಿಕ ತೂಕದ ಸಮಸ್ಯೆ
- ಚರ್ಮರೋಗ
- ಮಹಿಳೆಯರಲ್ಲಿ ಕೂದಲು ಉದುರುವುದು
- ಅಂಗೈ ಮತ್ತು ಅಂಗಾಲುಗಳಲ್ಲಿ ಬೆವರುವುದು
- ಚಿಕ್ಕಪುಟ್ಟ ವಿಷಯಗಳಿಗೆ ಗಾಬರಿಯಾಗುವುದು
- ಉಸಿರಾಟದ ತೊಂದರೆ ಹೆಚ್ಚಾಗುವುದು
- ರಕ್ತಹೀನತೆಯ ಸಂಭವ ಹೆಚ್ಚಿರುವುದು
- ಹೃದಯ ಬಡಿತ ಹೆಚ್ಚಾಗುವುದು
- ಎದೆಯಲ್ಲಿ ಡವಡವ ಶುರುವಾಗುವುದು
- ಎಷ್ಟೇ ಒಳ್ಳೆಯ ಆಹಾರ ಸೇವಿಸುತ್ತಿದ್ದರು ರಕ್ತಹೀನತೆ ಸಮಸ್ಯೆಯಿಂದ ಬಳಲುವುದು
- ಪಾರ್ಶ್ವವಾಯು ಮತ್ತು ಹಾರ್ಟ್ ಅಟ್ಯಾಕ್ ಸಂಭವ ಹೆಚ್ಚಾಗುವುದು
- ಮಾಂಸ ಖಂಡಗಳು ಹಿಡಿದುಕೊಂಡಂತಾಗುವುದು
- ಮೈಕೈ ನೋವು ವಿಶೇಷವಾಗಿ ಮೂಳೆ ನೋವು ಕೀಲು ನೋವು
- ಮೂಳೆಗಳಲ್ಲಿ ಶಕ್ತಿ ಕಡಿಮೆಯಾಗುವುದು
- ನೆನಪಿನ ಶಕ್ತಿ ಕಡಿಮೆಯಾಗುವುದು
- ನಿದ್ರಾಹೀನತೆ ಸಮಸ್ಯೆ
- ಮಾನಸಿಕ ಖಿನ್ನತೆ
- ಮಹಿಳೆಯರಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್
- ಮಲಬದ್ಧತೆ , ಗ್ಯಾಸ್ಟ್ರಿಕ್ ಅಸಿಡಿಟಿ , ಕಾನ್ ಸ್ಟಿಪೇಶನ್ .
ಇವೆಲ್ಲವೂ ವಿಟಮಿನ್ ಡಿ ಕೊರತೆಯು ಪ್ರಮುಖ ಲಕ್ಷಣಗಳಾಗಿವೆ.
ಪ್ಯಾಂಕ್ರಿಯಸ್ ಒಳಗೆ ಇನ್ಸುಲಿನ್ ಉತ್ಪತ್ತಿ ಆಗಬೇಕಾದರೆ ಮತ್ತು ಮಧುಮೇಹ ಸಮಸ್ಯೆ ದೂರಾಗಬೇಕಾದರೆ ವಿಟಮಿನ್ ಡಿ ಅತಿ ಮುಖ್ಯವಾಗಿ ನಮ್ಮ ಪ್ಯಾಂಕ್ರಿಯಾಸ್ಗೆ ಬೇಕು.
ವಿಟಮಿನ್ ಡಿ ಕೊರತೆಯಿಂದಾಗಿ ನಮ್ಮ ದೇಹಕ್ಕೆ ಪೋಷಕಾಂಶಗಳು ದೊರೆಯುವುದಿಲ್ಲ.
ಇನ್ನು ಎಷ್ಟೇ ಒಳ್ಳೆಯ ಪೋಷಕಾಂಶಗಳನ್ನು ಸೇವಿಸಿದರು ನಮ್ಮ ದೇಹಕ್ಕೆ ಅದನ್ನು ಹೀರಿಕೊಳ್ಳಲು ಸಾಮರ್ಥ್ಯ ಇಲ್ಲದಂತಾಗುತ್ತದೆ.
ತಿಂದಂತಹಾ ಆಹಾರವನ್ನು ದೇಹವು ಹೀರಿಕೊಂಡು ಅದರಿಂದ ಶಕ್ತಿ ದೊರೆಯಬೇಕಾದಲ್ಲಿ ವಿಟಮಿನ್ ಡಿ ಮುಖ್ಯವಾಗಿ ಬೇಕಾಗಿರುತ್ತವೆ.
ಬಿಪಿ ನಿಯಂತ್ರಣಕ್ಕೆ ವಿಟಮಿನ್ ಡಿ ಅತ್ಯವಶ್ಯಕ.
ಬ್ರೆಸ್ಟ್ ಕ್ಯಾನ್ಸರ್ ಅಥವಾ ಇನ್ನಿತರ ಯಾವುದೇ ರೀತಿಯ ಕ್ಯಾನ್ಸರ್ ಗೆ ತಡೆಗಟ್ಟಲು ವಿಟಮಿನ್ ಡಿ ಬೇಕು.
ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಅಥವಾ ಕಾಯಿಲೆಗಳಿಗೆ ನಮ್ಮ ದೇಹ ತುತ್ತಾಗಬಾರದೆಂದರೆ ಹಾಗೂ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗಬೇಕಾದರೆ ವಿಟಮಿನ್ ಡಿ ಅಗತ್ಯವಾಗಿ ನಮ್ಮ ದೇಹಕ್ಕೆ ಬೇಕು.
ಕ್ಯಾಲ್ಷಿಯಂ ಹೆಚ್ಚಾಗಿ ಸಿಗುವ ಆಹಾರವನ್ನು ಸೇವಿಸಿದರು ಮೂಳೆಗಳಿಗೆ ಕ್ಯಾಲ್ಷಿಯಂ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.ಹಾಗಾಗಿ ಅಗತ್ಯವಾದ ಕ್ಯಾಲ್ಷಿಯಂ ನಮ್ಮ ಮೂಳೆಗಳಿಗೆ ಸಿಗಬೇಕಾದರೆ ವಿಟಮಿನ್ ಡಿ ಅಗತ್ಯವಾಗಿ ಬೇಕು.
ಈ ಮೇಲೆ ತಿಳಿಸಿರುವ ಯಾವುದೇ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ವಿಟಮಿನ್ ಡಿ ಟೆಸ್ಟ್ ಮಾಡಿಸಿಕೊಳ್ಳಿ.
ವಿಟಮಿನ್ ಡಿ ಟೆಸ್ಟ್ ನಲ್ಲಿ 30 ರಿಂದ 100 ನ್ಯಾನೋ ಗ್ರಾಮ್ ಒಳಗೆ ವಿಟಮಿನ್ ಡಿ ಇದ್ದರೆ ಅದು ನಾರ್ಮಲ್ .
30 ಕ್ಕಿಂತ ಕಡಿಮೆ ಬಂದರೆ ವಿಟಮಿನ್ ಡಿ ಕೊರತೆ ಇದ್ದರೆ ವಿಟಮಿನ್ ಡಿ ಕೊರತೆ ಇದೆ ಎಂದು ಅರ್ಥ.
20 ಕ್ಕಿಂತ ಕಡಿಮೆ ಇದ್ದರೆ ಬಹಳ ವಿಟಮಿನ್ ಡಿ ಕೊರತೆ ಇದೆ ಎಂದು ಅರ್ಥ.
10 ಕ್ಕಿಂತ ಕಡಿಮೆ ಇದ್ದರೆ ನಿಮಗೆ ಅತೀವವಾಗಿ ವಿಟಮಿನ್ ಡಿ ಕೊರತೆ ಇದೆ ಎಂದು ಅರ್ಥ.
ವಿಟಮಿನ್ ಡಿ ಕೊರತೆ ಉಂಟಾಗಲು ಪ್ರಮುಖ ಕಾರಣಗಳೆಂದರೆ
- ಸದಾಕಾಲ ಮನೆಯಲ್ಲಿ ಅಥವಾ ಆಫೀಸ್ ಒಳಗೆ ಇದ್ದರೆ ವಿಟಮಿನ್ ಡಿ ಯ ಕೊರತೆ ಕಾಣಿಸಿಕೊಳ್ಳುತ್ತದೆ.
- ಪದೇ ಪದೇ ಸನ್ ಲೋಷನ್ ಬಳಸುವುದರಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ.
- ಬಿಸಿಲಿನ ಕಿರಣಗಳಿಗೆ ನಮ್ಮ ಮೈ ಒಡ್ಡದೆ ಇರುವುದರಿಂದ ವಿಟಮಿನ್ ಡಿ ಕೊರತೆ ಕಾಣಿಸಿಕೊಳ್ಳುತ್ತದೆ.
- ನಿರಂತರವಾಗಿ ಯಾವುದೇ ರೀತಿಯ ಔಷಧಿ ಅಥವಾ ಮಾತ್ರೆಗಳನ್ನು ಸೇವಿಸುತ್ತಿದ್ದರೆ ನಮ್ಮ ದೇಹವು ವಿಟಮಿನ್ ಡಿ ಅಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಹಾಗೂ ಇದರಿಂದ ವಿಟಮಿನ್ ಡಿ ಕೊರತೆ ಕಾಣಿಸಿಕೊಳ್ಳುತ್ತದೆ.
- ಅಧಿಕ ತೂಕ , ಅಧಿಕ ಬೊಜ್ಜು ಇದ್ದರೂ ಕೂಡ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ.
- ವಾರದಲ್ಲಿ ಒಮ್ಮೆಯಾದರೂ ಬಿಸಿಲಿಗೆ ಹೋಗದೇ ಇದ್ದಲ್ಲಿ ವಿಟಮಿನ್ ಡಿ ಕೊರತೆ ಆಗುತ್ತದೆ.
- ಮಹಿಳೆಯರಲ್ಲಿ ಮೆನೋ ಪಾಸ್ ಸಮಯದಲ್ಲಿ ಅಂದರೆ ಮುಟ್ಟಾಗುವ ಸಮಯದಲ್ಲಿ ಮತ್ತು ಮುಟ್ಟು ನಿಲ್ಲುವ ಸಮಯದಲ್ಲಿ ವಿಟಮಿನ್ ಡಿ ಕೊರತೆ ಕಾಣಿಸಿಕೊಳ್ಳುತ್ತದೆ ಹಾಗೂ ಇದು ಸರ್ವೇ ಸಾಮಾನ್ಯ ಲಕ್ಷಣವಾಗಿದೆ.
ವಿಟಮಿನ್ ಡಿ ಕೊರತೆ ಯಿಂದ ಪಾರಾಗಲು ಪರಿಹಾರಗಳು
- ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಇರುವಂತಹ ಅಣಬೆಯನ್ನು ವಾರದಲ್ಲಿ 2 ಬಾರಿ ಸೇವಿಸುವುದರಿಂದ ವಿಟಮಿನ್ ಡಿ ಕೊರತೆಯ ಸಮಸ್ಯೆಯಿಂದ ಹೊರಬರಬಹುದು.
- ವಾರಕ್ಕೆ 2 ದಿನ ಕಿತ್ತಳೆ ಹಣ್ಣಿನ ಜ್ಯೂಸ್ ಅಥವಾ ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಸಹ ವಿಟಮಿನ್ ಡಿ ಕೊರತೆಯಿಂದ ಪಾರಾಗಬಹುದು.
- ತೊಳೆದ ಆರ್ಕಾ ಅಕ್ಕಿಯ ಹಾಲನ್ನು ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ ಕುಡಿಯುವುದರಿಂದ ವಿಟಮಿನ್ ಡಿ ಕೊರತೆಯಿಂದ ಪಾರಾಗಬಹುದು.
- ಸ್ವಚ್ಛಂದವಾಗಿ ಬಿಸಿಲಿನಲ್ಲಿ ಓಡಾಡಿರುವಂತಹ ದೇಸಿ ಆಕಳ ಹಾಲಿನಿಂದ ತಯಾರಿಸಿದ ತುಪ್ಪವನ್ನು ವಾರದಲ್ಲಿ 2 ರಿಂದ 3ದಿನ ಸೇವಿಸುವುದರಿಂದ ಸಹ ವಿಟಮಿನ್ ಡಿ ಕೊರತೆಯಿಂದ ಪಾರಾಗಬಹುದು.
ಈ ತುಪ್ಪವನ್ನು 5 ರಿಂದ 6 ತಿಂಗಳವರೆಗೆ ಆಹಾರಕ್ರಮದಲ್ಲಿ ಬಳಸುವುದು ಒಳ್ಳೆಯದು. - ಇದರ ಜೊತೆಗೆ ಸೂರ್ಯೋದಯದ ಸಮಯದಲ್ಲಿ ಮತ್ತು ಸೂರ್ಯಾಸ್ತದ ಸಮಯದಲ್ಲಿ ಬರಿಗಣ್ಣಿನಲ್ಲಿ ಬಿಸಿಲಿನ ಕಿರಣಗಳು ಗಮಣಿಸಿರುವುದರಿಂದ ವಿಟಮಿನ್ ಡಿ ಹೆಚ್ಚಾಗಿ ಸಿಗುತ್ತದೆ.
ಜೊತೆಗೆ ಬೆಳಿಗ್ಗೆ ಯೋಗಾಸನ , ಪ್ರಾಣಾಯಾಮ , ವಾಕಿಂಗ್ , ರನ್ನಿಂಗ್ , ಜಾಗಿಂಗ್ ಮಾಡುವುದರಿಂದ ಬಹಳ ವೇಗವಾಗಿ ವಿಟಮಿನ್ ಡಿ ನಮ್ಮ ದೇಹಕ್ಕೆ ಸಿಗುತ್ತದೆ.ಇನ್ನೂ ಬೆಳಿಗ್ಗೆ 11 ಗಂಟೆ ಯಿಂದ 3 ಗಂಟೆಯವರೆಗೆ ವಿಟಮಿನ್ ಡಿ-3 ಯಥೇಚ್ಛವಾಗಿ ಸಿಗುತ್ತದೆ.ಹಾಗಾಗಿ ಕೊಬ್ಬರಿ ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಬಿಸಿಲಿನಲ್ಲಿ ಅರ್ಧ ಗಂಟೆಯಿಂದ 1 ಗಂಟೆಯವರೆಗೆ ಮೈಯೊಡ್ಡಿ ಸ್ನಾನ ಮಾಡುವುದರಿಂದ ಯಥೇಚ್ಛವಾದ ವಿಟಮಿನ್ ಡಿ ಸಿಗುತ್ತದೆ.
ಧನ್ಯವಾದಗಳು.