ಬ್ಲಾಕ್ ಫಂಗಸ್ ಯಾರಿಗೆ ಮತ್ತು ಹೇಗೆ ಬರತ್ತೆ?ರೋಗಲಕ್ಷಣಗಳು ಮತ್ತು ತಡೆಯುವ ಮಾರ್ಗವನ್ನು ತಿಳಿಯಿರಿ!

Featured-Article

ದೇಶದಲ್ಲಿ ಕೊರೊನಾ ಈಗಾಗಲೇ ಸಾಕಷ್ಟು ಹಾನಿಯನ್ನು ಸೃಷ್ಟಿಸಿರುವಾಗಲೇ ಜನರ ಮೇಲೆ ಬಂದೆರಗಿದೆ ಬ್ಲಾಕ್ ಫಂಗಸ್ ಎನ್ನುವ ಮಹಾಮಾರಿ. ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಬ್ಲಾಕ್ ಫಂಗಸ್ ಸೋಂಕು ಕಂಡು ಬಂದಿದೆ.

ಬ್ಲಾಕ್ ಫಂಗಸ್ ಒಂದು ವಿರಳ ಕಾಯಿಲೆಯಾಗಿದ್ದು ಇದು ಕೊರೊನಾದಿಂದ ಗುಣಮುಖರಾದವರಲ್ಲಿ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆಯಿದ್ದು ಈ ಹಿಂದೆ ಯಾವುದಾದರೂ ಕಾಯಿಲೆಯಿಂದ ಗುಣಮುಖ ಹೊಂದಿದವರಲ್ಲಿ ಕಂಡು ಬರುತ್ತಿದೆ. ಅದರಲ್ಲೂ ಕೊರೊನಾ ದಿಂದ ಗುಣಮುಖರಾದವರಲ್ಲಿ ಈ ಸೋಂಕು ಬಹಳ ವೇಗವಾಗಿ ಹರಡುತ್ತಿರುವುದು ಕಂಡು ಬಂದಿದೆ.

ಬ್ಲಾಕ್ ಫಂಗಸ್ ಏನು ಎನ್ನುವುದಾದರೆ ಇದು ಕೊರೊನಾ ವೈರಸ್ ನಿಂದ ಪ್ರಚೋದಿಲ್ಪಟ್ಟ ಒಂದು ಶಿಲೀಂಧ್ರಗಳ ಸೋಂಕು ಎನ್ನಲಾಗಿದೆ. ಈಗಾಗಲೇ ಯಾವುದಾದರೂ ಸೋಂಕಿನಿಂದ ಬಳಲುತ್ತಾ ಇರುವವರು ಹಾಗೂ ರೋಗ ನಿರೋಧಕ ಶಕ್ತಿ ದುರ್ಬಲ ಆಗಿರುವವರಿಗೆ ಈ ಬ್ಲಾಕ್ ಫಂಗಸ್ ಸುಲಭವಾಗಿ ಹರಡುತ್ತದೆ ಎನ್ನಲಾಗಿದೆ.

ಕೊರೊನಾ ನಂತರ ಬ್ಲಾಕ್ ಫಂಗಸ್ ಸೋಂಕು ತಗುಲಿದರೆ ಇದಕ್ಕೆ ಸೂಕ್ತ ಚಿಕಿತ್ಸೆ ದೊರೆಯಲಿಲ್ಲವೆಂದರೆ ಇದು ಪ್ರಾಣಾಂತಕ ಆಗಬಹುದಾಗಿದೆ. ಇದು ಸೈನಸ್ ಮೂಲಕ ಹರಡುತ್ತಾ ಕಣ್ಣಿನ ಮೇಲೆ ಧಾ ಳಿ ಇಡುತ್ತದೆ ಎನ್ನಲಾಗಿದೆ.

ಈ ಸಮಸ್ಯೆ ಬಗೆಹರಿಸಲು ವೈದ್ಯರು ಕಣ್ಣು ಅಥವಾ ದವಡೆಯ ಮೇಲೆ ಇನ್ಫೆಕ್ಷನ್ ಆಗಿರುವ ಒಂದು ಪದರವನ್ನು ತೆಗೆಯಬೇಕಾಗುತ್ತದೆ ಎನ್ನಲಾಗಿದೆ. ಈ ಬ್ಲಾಕ್ ಫಂಗಸ್ ಗೆ ಹೇಗೆ ವ್ಯಕ್ತಿಗಳು ಗುರಿಯಾಗುತ್ತಿದ್ದಾರೆ ಎಂದರೆ ಗಾಳಿಯಲ್ಲಿ ಹರಡುವ ರೋಗಾಣುಗಳ ಮೂಲಕ ಬ್ಲಾಕ್ ಫಂಗಸ್ ಆ ಕ್ರ ಮಣ ನಡೆಸುತ್ತದೆ ಎನ್ನಲಾಗಿದೆ.ಇದು ಸೋಂಕಿತನ ಚರ್ಮದ ಮೇಲೆ ಸಹಾ ವಿಕಸನ ಹೊಂದಬಹುದು. ಇದು ಗಾಯ, ಉಜ್ಜುವಿಕೆ ಮತ್ತು ಚರ್ಮದ ಮೇಲಿನ ಸುಟ್ಟ ಗಾಯಗಳ ಮೂಲಕ ದೇಹವನ್ನು ಸೇರುವ ಅವಕಾಶಗಳಿವೆ‌.

ಬ್ಲಾಕ್ ಫಂಗಸ್ ನ ಲಕ್ಷಣಗಳು:ಜ್ವರ, ತಲೆ ನೋವುಂಟುಮಾಡುತ್ತದೆ, ಕೆಮ್ಮು ಅಥವಾ ಉಸಿರಾಟದ ಸಮಸ್ಯೆ, ಕಣ್ಣುಗಳು ಕೆಂಪಾಗುವುದು ಅಥವಾ ನೋವು, ಕಣ್ಣಿನ ನೋವು, ಕಣ್ಣು ಊದಿಕೊಳ್ಳುತ್ತದೆ, ಒಂದು ವಸ್ತು ಎರಡಾಗಿ ಗೋಚರಿಸುತ್ತದೆ ಅಥವಾ ಕಾಣಿಸುವುದು ನಿಲ್ಲುತ್ತದೆ.ಮುಖದ ನೋವು, ಊತ ಅಥವಾ ಜಡ್ಡುಗಟ್ಟುವಿಕೆ ಒಂದು ಬದಿಯಲ್ಲಿ ಹಲ್ಲುನೋವು, ಹಲ್ಲುಗಳು ನಡುಗಲು ಪ್ರಾರಂಭಿಸುತ್ತವೆ, ರಕ್ತ ವಾಂತಿ ಅಥವಾ ಕೆಮ್ಮಿನಲ್ಲಿ ರಕ್ತ ಕಂಡು ಬರುತ್ತದೆ.

ಬ್ಲಾಕ್ ಫಂಗಸ್ ನಿಂದ ಸುರಕ್ಷಿತವಾಗಿರುವ ವಿಧಾನಗಳು:

  • ಧೂಳಿನ ಪ್ರದೇಶಗಳಲ್ಲಿ ತಪ್ಪದೇ ಮಾಸ್ಕ್ ಧರಿಸಿ.
  • ಮಣ್ಣು, ಪಾಚಿ ಅಥವಾ ಗೊಬ್ಬರದಂತಹ ವಸ್ತುಗಳ ಹತ್ತಿರ ಹೋಗುವಾಗ ಬೂಟುಗಳು, ಗ್ಲೌಸ್ , ಪೂರ್ಣ ತೋಳಿನ ಅಂಗಿ ಮತ್ತು ಪ್ಯಾಂಟ್ ಧರಿಸುವುದು ಮರೆಯದಿರಿ.
  • ಸ್ವಚ್ಚತೆಯ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು.
  • ಮಧುಮೇಹವನ್ನು ನಿಯಂತ್ರಿಸಿ, ಇಮ್ಯುನೊಮಾಡ್ಯುಲೇಟಿಂಗ್ ಔಷಧಗಳು ಅಥವಾ ಸ್ಟೀರಾಯ್ಡ್ ಗಳನ್ನು ಮಿತವಾಗಿ ಬಳಸಿ.

Leave a Reply

Your email address will not be published.