ಮನೆಯಲ್ಲಿಯೇ ಮಾಡಿಕೊಂಡು ಈ ಚಟ್ನಿಯನ್ನು ತಿನ್ನಿ!ಬಿಪಿ, ಶುಗರ್ , ಹಾರ್ಟ್ ಅಟ್ಯಾಕ್ ಯಾವ ಕಾಯಿಲೆಯೂ ಬರುವುದಿಲ್ಲ!

Health & Fitness

ಅಗಸೆ ಬೀಜ

ಇದನ್ನು ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಬಳಕೆ ಮಾಡುವುದರಿಂದ ತುಂಬಾ ಜನರಿಗೆ ಇದರ ಉಪಯೋಗ ತಿಳಿದಿಲ್ಲ.ಸಾವಿರಾರು ವರ್ಷಗಳ ಹಿಂದೆ ದಿನನಿತ್ಯ ಆಹಾರವಾಗಿ ಬಳಕೆ ಮಾಡುತ್ತಿರುವ ಅಗಸೆ ಬೀಜ ಈಗಿನ ಆಧುನಿಕ ಜೀವನ ಶೈಲಿಯಲ್ಲಿ ಮರೆತೇ ಬಿಟ್ಟಿದ್ದಾರೆ.

ಈ ಅಗಸೆ ಬೀಜದಲ್ಲಿರುವ ಪೌಷ್ಟಿಕಾಂಶಗಳು ಬೇರೆ ಯಾವುದೇ ದಿನನಿತ್ಯ ಆಹಾರದಲ್ಲಿ ಸಿಗುವುದಿಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ.ಇದನ್ನು ನೀವೇನಾದ್ರೂ ದಿನನಿತ್ಯ ಉಪಯೋಗ ಮಾಡಿದ್ರೆ ನಿಮ್ಮ ಆರೋಗ್ಯದಲ್ಲಿ ಅದ್ಭುತ ಬದಲಾವಣೆಯನ್ನು ಕಾಣಬಹುದು.ನೀವೇನಾದ್ರೂ ಪ್ರಪಂಚದಲ್ಲಿ ಸಿಗುವ ಪ್ರಮುಖ ಹಾಗೂ ಉತ್ತಮ ಆಹಾರ ಪದಾರ್ಥಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ಮೊದಲನೇ ಸ್ಥಾನ ಸಿಗುವುದು ಇದೇ ಅಗಸೆ ಬೀಜಕ್ಕೆ,ಕೇವಲ 15 ಗ್ರಾಂ ಅಗಸೆ ಬೀಜ ತಗೊಂಡ್ರೆ ಅದರಲ್ಲಿ ನೀವು ಪಡೆಯಬಹುದು 20 ಕೆಜಿ ಶೇಂಗಾ , 10 ಕೆಜಿ ಬಾದಾಮಿ ಹಾಗೂ 1 ಕೆಜಿ ಮೀನಿನಲ್ಲಿ ಸಿಗುವ ಪೌಷ್ಟಿಕಾಂಶಗಳು ಈ ಅಗಸೆ ಬೀಜದಲ್ಲಿ ಸಿಗುತ್ತದೆ.ಇನ್ನು ನೀವೇನಾದ್ರೂ ಪ್ರತಿನಿತ್ಯ ಅಗಸೆಯನ್ನು ಉಪಯೋಗ ಮಾಡಿದರೆ ಈ ಎಲ್ಲ ಲಾಭಗಳನ್ನು ಪಡೆಯಬಹುದು.

ಅವು ಅವು ಯಾವುದೆಂದರೆ

  • ಅಗಸೆ ಬೀಜ ಸೇವಿಸುವುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗದ ರೀತಿಯಾಗಿ ತಡೆಯುತ್ತೆ .
  • ಸೆಕ್ಸುಯಲ್ ಪ್ರಾಬ್ಲಮ್ಸ್ ನ ಕೂಡ ದೂರ ಮಾಡುತ್ತೆ ಅಂದರೆ ಮುಖ್ಯವಾಗಿ ಇದರಲ್ಲಿರುವ ಒಮೆಗಾ ತ್ರಿ ಫ್ಯಾಟಿ ಆಸಿಡ್ಸ್ ನಿಂದ ಲೈಂಗಿಕ ಸಮಸ್ಯೆಗಳು ದೂರವಾಗುತ್ತೆ.
  • ಅಗಸೆ ಬೀಜದಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ ರಕ್ತವನ್ನು ಶುದ್ಧೀಕರಿಸುತ್ತದೆ
    ಇದರಿಂದ ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಇದು ಮಹಿಳೆಯರಿಗೆ ಪೀರಿಯಡ್ಸ್ ಪ್ರಾಬ್ಲಂ ನಿಂದ ಕಾಪಾಡುತ್ತದೆ ಹಾಗೂ ಮುಖ್ಯವಾಗಿ ಇದು ಆ ಟೈಂನಲ್ಲಿ ಬರುವ ನೋವನ್ನು ಕಡಿಮೆ ಮಾಡುತ್ತದೆ.
  • ಅಗಸೆ ಬೀಜದಲ್ಲಿರುವ ನಾರಿನಂಶ ತೂಕ ಇಳಿಕೆಯಲ್ಲಿ ಬಹಳ ಉಪಯೋಗವಾಗುತ್ತದೆ.
  • ಅಗಸೆ ಬೀಜದಲ್ಲಿ ಕಬ್ಬಿಣ ಮತ್ತು ಪ್ರೋಟೀನ್ ಅಧಿಕ ಪ್ರಮಾಣದಲ್ಲಿ ಇರುತ್ತದೆ,
    ಇದು ದೇಹದ ಕೊಬ್ಬನ್ನು ಕರಗಿಸುತ್ತದೆ.
  • ಪ್ರತಿನಿತ್ಯ ಅಗಸೆ ಸೇವನೆ ಮಾಡುವುದರಿಂದ ನಿಮಗೆ ಹೃದಯಾಘಾತ ಆಗುವುದಿಲ್ಲ ಮತ್ತು ಹೃದಯಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳನ್ನು ಬರುವುದನ್ನು ತಡೆಯುತ್ತದೆ.
  • ಅಗಸೆ ಬೀಜದಲ್ಲಿ ಒಮೆಗಾ ತ್ರಿ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ .

ಇದು ಸ್ತನ ಕ್ಯಾನ್ಸರ್ ಮತ್ತು ರಕ್ತ ಕ್ಯಾನ್ಸರ್ ಕೂಡ ತಡೆಯಲು ಸಹಾಯಕಾರಿಯಾಗಿದೆ .

ಇನ್ನೂ ಈ ಅಗಸೆಯನ್ನು ಹೇಗೆ ಸೇವನೆ ಮಾಡಬೇಕೆಂದರೆ ಇದನ್ನು ನೀವು ಚಟ್ನಿ ಥರ ಮಾಡಿಕೊಂಡು ತಿನ್ನಬಹುದು ಅಥವಾ ಈ ಅಗಸೆ ಬೀಜವನ್ನು ಪುಡಿ ಮಾಡಿ ನೀವು ಮೊಸರಿನಲ್ಲಿ ಬೆರೆಸಿ ಕುಡಿಯಬಹುದು ಅಥವಾ ನೀರಿನಲ್ಲಿ ಕೂಡ ಹಾಕಿ ಕುಡಿಯಬಹುದು ಆದರೆ ಒಂದು ವಿಷಯ ನೆನಪಿಡಬೇಕು ಅಗಸೆ ಬೀಜ ಪುಡಿ ಮಾಡಿದ ನಂತರ 15-20 ನಿಮಿಷದ ಒಳಗೆ ಸೇವನೆ ಮಾಡಿದರೆ ಒಳ್ಳೆಯದು ಯಾಕೆಂದರೆ ಇದರಲ್ಲಿ ಇರುವಂತಹ ಕೆಲವೊಂದಿಷ್ಟು ಗುಣಗಳು ಗಾಳಿಯಲ್ಲಿ ಲೀನವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ಇದು ಸಹಕಾರಿಯಾಗಿದೆ.

ಇನ್ನು ಅಗಸೆ ಬೀಜದ ಚಟ್ನಿ ಯನ್ನು ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ..

  • ಅಗಸೆ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು :
  • ಅಗಸೆ ಬೀಜ = 250 ಗ್ರಾಂ
  • ಬ್ಯಾಡಗಿ ಮೆಣಸಿನಕಾಯಿ = 2 ಮುಷ್ಟಿ
  • ಕರಿಬೇವಿನ ಸೊಪ್ಪು
  • ಕೊತ್ತಂಬರಿ ಸೊಪ್ಪು
  • ಬೆಳ್ಳುಳ್ಳಿ
  • ರುಚಿಗೆ ತಕ್ಕಷ್ಟು ಉಪ್ಪು
  • ಸ್ವಲ್ಪ ಜೀರಿಗೆ
  • ಮಾಡುವ ವಿಧಾನ :

ಮೊದಲಿಗೆ 250ಗ್ರಾಮ್ ಅಗಸೆ ಬೀಜವನ್ನು 1 ಪಾತ್ರೆಗೆ ಹಾಕಿ ಹುರಿದುಕೊಂಡು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ. ಇನ್ನೊಂದು ಪಾತ್ರೆಗೆ 2 ಮುಷ್ಟಿಯಷ್ಟು ಬ್ಯಾಡಗಿ ಮೆಣಸಿನ ಕಾಯಿಯನ್ನು ಹಾಕಿ ಹುರಿದುಕೊಳ್ಳಿ.

ನಂತರ ಈ ಎರಡು ಬಿಸಿ ಆರಿದ ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ.ಈಗ ಕರಿಬೇವಿನ ಸೊಪ್ಪು , ಕೊತ್ತಂಬರಿ ಸೊಪ್ಪು , ಬೆಳ್ಳುಳ್ಳಿ , ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಜೀರಿಗೆಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ.ಈಗ ಅಗಸೆ ಬೀಜ ಮತ್ತು ಬ್ಯಾಡಗಿ ಮೆಣಸಿನಕಾಯಿಯ ಪುಡಿ ಮತ್ತು ಕೊತ್ತಂಬರಿ , ಕರಿಬೇವು , ಬೆಳ್ಳುಳ್ಳಿ , ಉಪ್ಪು ಮತ್ತು ಜೀರಿಗೆಯ ಪುಡಿಯನ್ನು ಒಂದು ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ.ಈಗ ರುಚಿ ರುಚಿಯಾದ ಅಗಸೆ ಬೀಜದ ಚಟ್ನಿ ಪುಡಿ ರೆಡಿಯಾಗಿದೆ.ಈ ಅಗಸೆಬೀಜದ ಚಟ್ನಿಯನ್ನು ರೊಟ್ಟಿಯ ಜೊತೆ ಅಥವಾ ಅನ್ನದ ಜೊತೆ ಬೆರೆಸಿಕೊಂಡು ಸೇವಿಸಬಹುದು.

ಧನ್ಯವಾದಗಳು.

Leave a Reply

Your email address will not be published.